ಮುಂದಿನ ತಿಂಗಳೇ ಆಂಡ್ರಾಯ್ಡ್ 16 ಬಿಡುಗಡೆ: ಈ ಸ್ಮಾರ್ಟ್‌ಫೋನ್‌ಗಳು ಮೊದಲ ಅಪ್ಡೇಟ್ ಪಡೆಯುತ್ತೆ

Android 16 release Date: ಆಂಡ್ರಾಯ್ಡ್ ಶೋ ನಂತರ, ಗೂಗಲ್ ಮುಂದಿನ ಪೀಳಿಗೆಯ ಆಂಡ್ರಾಯ್ಡ್ 16 ಅನ್ನು ಜೂನ್ ತಿಂಗಳು ಬಿಡುಗಡೆ ಮಾಡಲಿದೆ. ಗೂಗಲ್ ಇಷ್ಟು ಬೇಗ ಆಂಡ್ರಾಯ್ಡ್‌ನ ಸ್ಥಿರ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿರುವುದು ಇದೇ ಮೊದಲು. ಸಾಮಾನ್ಯವಾಗಿ ಕಂಪನಿಯು ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಸ್ಥಿರವಾದ ಆಂಡ್ರಾಯ್ಡ್ ಓಎಸ್ ಅನ್ನು ಪರಿಚಯಿಸುತ್ತದೆ.

ಮುಂದಿನ ತಿಂಗಳೇ ಆಂಡ್ರಾಯ್ಡ್ 16 ಬಿಡುಗಡೆ: ಈ ಸ್ಮಾರ್ಟ್‌ಫೋನ್‌ಗಳು ಮೊದಲ ಅಪ್ಡೇಟ್ ಪಡೆಯುತ್ತೆ
Android 16

Updated on: May 17, 2025 | 10:57 AM

ಬೆಂಗಳೂರು (ಮೇ. 17): ನೀವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ (Android Smartphone) ಹೊಂದಿದ್ದರೆ ನಿಮಗೆ ಒಳ್ಳೆಯ ಸುದ್ದಿ ಇದೆ. ಶೀಘ್ರದಲ್ಲೇ ನಿಮ್ಮ ಫೋನ್ ಬಳಕೆಯ ಅನುಭವ ಹೊಚ್ಚ ಹೊಸದರಂತೆ ಬದಲಾಗಲಿದೆ. ಈ ಹೊಸ ಅನುಭವವನ್ನು ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಆಂಡ್ರಾಯ್ಡ್ 16 ನೀಡಲಿದ್ದು, ಇದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಆಂಡ್ರಾಯ್ಡ್ 16 ಬಿಡುಗಡೆಯನ್ನು ಟೆಕ್ ದೈತ್ಯ ಗೂಗಲ್ ದೃಢಪಡಿಸಿದೆ. ಕಂಪನಿಯು ಮುಂದಿನ ತಿಂಗಳು ಅಂದರೆ ಜೂನ್‌ನಲ್ಲಿ ಆಂಡ್ರಾಯ್ಡ್ 16 ಅನ್ನು ಬಿಡುಗಡೆ ಮಾಡಲಿದೆ.

ಆಂಡ್ರಾಯ್ಡ್ ಶೋ ನಂತರ, ಗೂಗಲ್ ಮುಂದಿನ ಪೀಳಿಗೆಯ ಆಂಡ್ರಾಯ್ಡ್ 16 ಅನ್ನು ಜೂನ್ ತಿಂಗಳು ಬಿಡುಗಡೆ ಮಾಡಲಿದೆ. ಗೂಗಲ್ ಇಷ್ಟು ಬೇಗ ಆಂಡ್ರಾಯ್ಡ್‌ನ ಸ್ಥಿರ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿರುವುದು ಇದೇ ಮೊದಲು. ಸಾಮಾನ್ಯವಾಗಿ ಕಂಪನಿಯು ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಸ್ಥಿರವಾದ ಆಂಡ್ರಾಯ್ಡ್ ಓಎಸ್ ಅನ್ನು ಪರಿಚಯಿಸುತ್ತದೆ. ಇದರರ್ಥ ಕಂಪನಿಯು ಮುಂದಿನ ತಿಂಗಳು ಕೋಟ್ಯಂತರ ಮೊಬೈಲ್ ಬಳಕೆದಾರರಿಗೆ ದೊಡ್ಡ ಅಚ್ಚರಿಯನ್ನು ನೀಡಲಿದೆ.

ಆಂಡ್ರಾಯ್ಡ್ 16 ರ ಆರಂಭಿಕ ಹಂತದಲ್ಲಿ, ಕಂಪನಿಯು ಮೊದಲು ಅದನ್ನು ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಿಗೆ ಹೊರತರುತ್ತದೆ. ಯಾವ ಸ್ಮಾರ್ಟ್‌ಫೋನ್‌ಗಳು ಇತ್ತೀಚಿನ ಆಂಡ್ರಾಯ್ಡ್ 16 ರ ಬೆಂಬಲವನ್ನು ಪಡೆಯುತ್ತವೆ ಎಂಬುದನ್ನು ನೋಡುವುದಾದರೆ..

ಇದನ್ನೂ ಓದಿ
ಇಂದಿನ ದಿನಗಳಲ್ಲಿ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸುವುದು ಸುರಕ್ಷಿತವೇ?
ಗೂಗಲ್ ಮ್ಯಾಪ್​ನ ವಿವಿಧ ಬಣ್ಣದ ಗೆರೆಗಳು ಏನನ್ನು ಸೂಚಿಸುತ್ತವೆ ಗೊತ್ತೇ?
ಫೋನ್ ಪೇನಲ್ಲಿ ಏರ್‌ಟೆಲ್‌ ರೀಚಾರ್ಜ್ ಮಾಡುವವರಿಗೆ ಬಿಗ್ ಶಾಕ್
ಯೂಟ್ಯೂಬ್​ನಲ್ಲಿ ಗೋಲ್ಡನ್ ಬಟನ್ ಯಾವಾಗ ಸಿಗುತ್ತದೆ?, ಇದಕ್ಕೆ ಏನು ಮಾಡಬೇಕು?

ಯಾವ ಪಿಕ್ಸೆಲ್ ಫೋನ್‌ಗಳು ಮೊದಲು ಅಪ್ಡೇಟ್ ಅನ್ನು ಪಡೆಯುತ್ತವೆ?

ಪಿಕ್ಸೆಲ್ 6

ಪಿಕ್ಸೆಲ್ 6 ಪ್ರೊ

ಪಿಕ್ಸೆಲ್ 6a

ಪಿಕ್ಸೆಲ್ 7

ಪಿಕ್ಸೆಲ್ 7 ಪ್ರೊ

ಪಿಕ್ಸೆಲ್ 7a

ಪಿಕ್ಸೆಲ್ 8

ಪಿಕ್ಸೆಲ್ 8 ಪ್ರೊ

ಪಿಕ್ಸೆಲ್ 8ಎ

ಪಿಕ್ಸೆಲ್ ಫೋಲ್ಡ್

ಪಿಕ್ಸೆಲ್ 9

ಪಿಕ್ಸೆಲ್ 9 ಪ್ರೊ

ಪಿಕ್ಸೆಲ್ 9 ಪ್ರೊ ಎಕ್ಸ್‌ಎಲ್

ಪಿಕ್ಸೆಲ್ 9 ಪ್ರೊ ಫೋಲ್ಡ್

ಪಿಕ್ಸೆಲ್ 9a

Second Hand Phone: ಇಂದಿನ ದಿನಗಳಲ್ಲಿ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸುವುದು ಸುರಕ್ಷಿತವೇ?: ಇಲ್ಲಿ ತಿಳಿದುಕೊಳ್ಳಿ

ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು ಸಹ ಬೆಂಬಲವನ್ನು ಪಡೆಯುತ್ತವೆ:

ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳ ನಂತರ, ಸ್ಯಾಮ್‌ಸಂಗ್‌ನ ಅನೇಕ ಪ್ರೀಮಿಯಂ ಸರಣಿಯ ಫೋನ್‌ಗಳು ಸಹ ಆಂಡ್ರಾಯ್ಡ್ 16 ಗೆ ಬೆಂಬಲವನ್ನು ಪಡೆಯುತ್ತವೆ. ಆಂಡ್ರಾಯ್ಡ್ 16 ನವೀಕರಣವನ್ನು ಪಡೆಯುವ ಸ್ಯಾಮ್‌ಸಂಗ್ ಫೋನ್‌ಗಳಲ್ಲಿ ಗ್ಯಾಲಕ್ಸಿ ಎಸ್ 25 ಸರಣಿ (ಗ್ಯಾಲಕ್ಸಿ ಎಸ್ 25, ಎಸ್ 25 ಪ್ಲಸ್, ಎಸ್ 25 ಅಲ್ಟ್ರಾ, ಎಸ್ 25 ಎಡ್ಜ್) ಮತ್ತು ಗ್ಯಾಲಕ್ಸಿ Z ಫೋಲ್ಡ್ 6 ಮತ್ತು ಗ್ಯಾಲಕ್ಸಿ Z ಫ್ಲಿಪ್ 6 ಸೇರಿವೆ.

ಸ್ಯಾಮ್‌ಸಂಗ್ ಜುಲೈ ತಿಂಗಳಲ್ಲಿ ಗ್ಯಾಲಕ್ಸಿ Z ಫೋಲ್ಡ್ 7 ಮತ್ತು Z ಫ್ಲಿಪ್ 7 ಅನ್ನು ಬಿಡುಗಡೆ ಮಾಡಬಹುದು. ಈ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 16 ನೊಂದಿಗೆ ಪರಿಚಯಿಸಲ್ಪಡುತ್ತವೆ. ಇದಲ್ಲದೆ, ಗ್ಯಾಲಕ್ಸಿ S24 ಸರಣಿಯ ಗ್ಯಾಲಕ್ಸಿ S24, ಗ್ಯಾಲಕ್ಸಿ S24 ಪ್ಲಸ್, ಗ್ಯಾಲಕ್ಸಿ S24 ಅಲ್ಟ್ರಾಗಳು 2025 ರ ನಾಲ್ಕನೇ ತ್ರೈಮಾಸಿಕದ ವೇಳೆಗೆ ನವೀಕರಣವನ್ನು ಪಡೆಯುತ್ತವೆ.

ಸಾಫ್ಟ್‌ವೇರ್ ವಿಷಯದಲ್ಲಿ, ಆಂಡ್ರಾಯ್ಡ್ 16 ರಿಫ್ರೆಶ್ ಮಾಡಿದ ವಿನ್ಯಾಸ ಭಾಷೆಯೊಂದಿಗೆ ಬರಲಿದ್ದು, ಅದನ್ನು ಗೂಗಲ್ ಮೆಟೀರಿಯಲ್ 3 ಎಕ್ಸ್‌ಪ್ರೆಸಿವ್ ಎಂದು ಹೆಸರಿಸಿದೆ. ಆಂಡ್ರಾಯ್ಡ್ ಶೋನಲ್ಲಿ ಅಧಿಕೃತವಾಗಿ ಪರಿಚಯಿಸಲಾದ ಮೆಟೀರಿಯಲ್ 3 ಎಕ್ಸ್‌ಪ್ರೆಸಿವ್, ಆಂಡ್ರಾಯ್ಡ್ ಇಂಟರ್ಫೇಸ್ ಅನ್ನು ಹೆಚ್ಚು ಕ್ರಿಯಾತ್ಮಕ ಮತ್ತು ಬಳಕೆದಾರ ಸ್ನೇಹಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಈ ಬಾರಿಯ ಅಪ್ಡೇಟ್​ನಲ್ಲಿ ಟಚ್ ಪ್ರತಿಕ್ರಿಯೆ ಸುಧಾರಿಸಲಿದೆ ಹಾಗೆಯೆ ಹೊಸ ಐಕಾನ್, ಹೊಸ ಟೈಪ್‌ಫೇಸ್ ಸೇರಿವೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ