AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asus ROG Phone 7: ಕ್ರೇಜಿ ಗೇಮಿಂಗ್ ಫೀಚರ್ಸ್ ₹74,999 ಏಸಸ್ ರಾಗ್ ಫೋನ್ 7

Asus ROG Phone 7: ಕ್ರೇಜಿ ಗೇಮಿಂಗ್ ಫೀಚರ್ಸ್ ₹74,999 ಏಸಸ್ ರಾಗ್ ಫೋನ್ 7

ಕಿರಣ್​ ಐಜಿ
ಕಿರಣ್​ ಐಜಿ|

Updated on: Apr 17, 2023 | 9:01 AM

Share

ಹೊಸ ಸರಣಿಯಲ್ಲಿ ರಾಗ್ ಫೋನ್ 7 ಮತ್ತು ರಾಗ್ ಫೋನ್ 7 ಅಲ್ಟಿಮೇಟ್ ಬಿಡುಗಡೆಯಾಗಿದ್ದು, 12 GB RAM ಮತ್ತು 256 GB ಸ್ಟೋರೇಜ್ ಮಾದರಿಗೆ ₹74,999 ದರವಿದೆ.

ಸ್ಮಾರ್ಟ್​ಫೋನ್ ಗೇಮಿಂಗ್ ಎನ್ನುವುದು ಹಲವರಿಗೆ ಅತ್ಯಂತ ನೆಚ್ಚಿನ ಹವ್ಯಾಸ, ಅಭ್ಯಾಸವೂ ಹೌದು. ಸ್ಮಾರ್ಟ್​ಫೋನ್ ಗೇಮಿಂಗ್ ಪರಿಣತರಿಗೆ, ಅದಕ್ಕೆ ತಕ್ಕುದಾದ ಫೀಚರ್ಸ್ ಇರುವ ಫೋನ್ ಸಿಕ್ಕರೆ ಅಂತು ಕೇಳುವುದೇ ಬೇಡ ಎನ್ನುವಂತಿರುತ್ತದೆ. ಅಲ್ಲದೆ, ಗೇಮಿಂಗ್ ಫೋನ್​ಗಳ ಡಿಸ್​ಪ್ಲೇ, ಸೌಂಡ್ ಔಟ್​ಪುಟ್, ವಿನ್ಯಾಸವೂ ವಿಶಿಷ್ಟವಾಗಿರುತ್ತದೆ. ಏಸಸ್, ರಾಗ್ ಸರಣಿಯ ಫೋನ್​ಗಳು ಗೇಮಿಂಗ್​ಗೆ ಬೆಸ್ಟ್. ಅದರಲ್ಲಿನ ಗೇಮಿಂಗ್ ಅನುಭವ ವಿಶಿಷ್ಟವಾದುದು. ಏಸಸ್ ಪರಿಚಯಿಸಿರುವ ನೂತನ ರಾಗ್ ಫೋನ್ 7 ಮತ್ತು ರಾಗ್ ಫೋನ್ 7 ಅಲ್ಟಿಮೇಟ್, ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ. ನೂತನ ಫೋನ್ ಕುರಿತ ಹೆಚ್ಚಿನ ಡಿಟೇಲ್ಸ್ ಇಲ್ಲಿದೆ. ಹೊಸ ಸರಣಿಯಲ್ಲಿ ರಾಗ್ ಫೋನ್ 7 ಮತ್ತು ರಾಗ್ ಫೋನ್ 7 ಅಲ್ಟಿಮೇಟ್ ಬಿಡುಗಡೆಯಾಗಿದ್ದು, 12 GB RAM ಮತ್ತು 256 GB ಸ್ಟೋರೇಜ್ ಮಾದರಿಗೆ ₹74,999 ದರವಿದೆ. 16GB LPDDR5X RAM ಮತ್ತು 512GB ವರೆಗಿನ ಆವೃತ್ತಿಯಲ್ಲೂ ಲಭ್ಯವಿದ್ದು, ಫ್ಯಾಂಟಮ್ ಬ್ಲ್ಯಾಕ್ ಮತ್ತು ಸ್ಟಾರ್ಮ್ ವೈಟ್ ಬಣ್ಣದಲ್ಲಿ ದೊರೆಯಲಿದೆ. 6.78 ಇಂಚಿನ HD+ (2448 x 1080) AMOLED ಡಿಸ್​ಪ್ಲೇ ಹಾಗೂ ಕ್ವಾಲ್ಕಂ ಸ್ನ್ಯಾಪ್​ಡ್ರ್ಯಾಗನ್ 8 ಜೆನ್ ಪ್ರೊಸೆಸರ್, Adreno 740 GPU ಗ್ರಾಫಿಕ್ಸ್ ಬೆಂಬಲ ಹೊಂದಿದೆ. ಹಿಂಭಾಗದಲ್ಲಿ 50+13+8 ಮೆಗಾಪಿಕ್ಸೆಲ್ ತ್ರಿವಳಿ ಕ್ಯಾಮೆರಾ ವ್ಯವಸ್ಥೆ ಇದ್ದು, 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಏಸಸ್ ರಾಗ್ ಫೋನ್ 7 ಮಾದರಿ 6,000mAh ಬ್ಯಾಟರಿ ಮತ್ತು 65W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.