ಇತ್ತೀಚೆಗೆ ಹಿಡನ್ ಕ್ಯಾಮೆರಾ (Hidden Camera) ಬಳಸಿ ಜನರ ಫೋಟೋ, ವೀಡಿಯೋ ತೆಗೆದು ಬೆದರಿಕೆ ಹಾಕುವ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಹಲವು ಪೊಲೀಸ್ (Police) ಠಾಣೆಗಳಲ್ಲಿ ಈ ರೀತಿಯ ಪ್ರಕರಣಗಳು ದಾಖಲಾಗುತ್ತಿದೆ. ಹನಿಮೂನ್ ದಂಪತಿಗಳನ್ನು ಅಥವಾ ಟೂರ್ಗೆಂದು ಬಂದ ದಂಪತಿಗಳನ್ನು ಗುರಿಯಾಗಿಸಿ ಕ್ರಿಮಿನಲ್‌ಗಳು ಅವರು ನೆಲೆಸಿದ್ದ ಹೊಟೇಲ್ ರೂಮ್ಗಳಲ್ಲಿನ (Hotel Room) ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಇತ್ತೀಚೆಗಷ್ಟೆ ದಕ್ಷಿಣ ಕೊರಿಯಾದಲ್ಲಿ, ಇಂತಹ ಘಟನೆಯಿಂದ 1000 ಕ್ಕೂ ಹೆಚ್ಚು ಜನರು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಕೇವಲ ವಿದೇಶದಲ್ಲಿ ಮಾತ್ರವಲ್ಲದೆ ಭಾರತದಲ್ಲೂ ಇದೇ ರೀತಿಯ ಕೆಲವು ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷ ನೋಯ್ಡಾದ ಹೋಟೆಲ್ ಒಂದರಲ್ಲಿ ದಂಪತಿಗಳ ನಡುವಣ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿ, ಬೆದರಿಸಿ, ಹಣ ಸುಲಿಗೆ ಮಾಡಲು ಪ್ರಯತ್ನಿಸಿದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದರು. ಅಂತೆಯೆ ಉತ್ತರಾಖಂಡ್‌ನ ತೆಹ್ರಿಯಲ್ಲಿ ಯುವ ದಂಪತಿಗಳು ತಮ್ಮ ಹೋಟೆಲ್ ಕೋಣೆಯ ಸೀಲಿಂಗ್ ಫ್ಯಾನ್‌ನಲ್ಲಿ ಕ್ಯಾಮೆರಾ ಇರುವುದನ್ನು ಕಂಡು ದೂರು ನೀಡಿದ್ದರು. ಈರೀತಿಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಹಲವಾರು ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಮುಖ್ಯ. ಅದಕ್ಕಾಗಿಯೇ ನೀವು ಹೋಟೆಲ್ ಕೊಠಡಿಗಳಲ್ಲಿ ತಂಗಿದಾಗ ಪರಿಶೀಲಿಸಬೇಕಾದ ಮುಖ್ಯ ಅಂಶಗಳನ್ನು ನಾವು ನಿಮಗೆ ಹೇಳುತ್ತೇವೆ.
Nothing Phone 2: ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿದೆ ಹೊಸ ನಥಿಂಗ್ ಫೋನ್
ಸೀಲಿಂಗ್ ಫ್ಯಾನ್ ಪರೀಕ್ಷಿಸಿ: ಫ್ಯಾನ್‌ನ ಮಧ್ಯಭಾಗದಲ್ಲಿ ಚಿಕ್ಕ ರಂದ್ರದಂತೆ ಇದ್ದರೆ ಟಾರ್ಚ್ ಮೂಲಕ ಸರಿಯಾಗಿ ಪರಿಶೀಲಿಸಿ. ಕ್ಯಾಮೆರಾ ಬ್ಲಿಂಕ್ ಲೈಟ್ ಇಲ್ಲ ಎಂದು ಖಚಿತಪಡಿಸಿಕೊಳ್ಳಿ. ಅಂತೆಯೆ ಹೆಚ್ಚಿನ ರೂಮ್ನ ಎಲ್ಲ ಜಾಗವನ್ನು ಪರಿಶೀಲಿಸಿ. ಮುಖ್ಯವಾಗಿ ವಿಚಿತ್ರವಾಗಿ ಇರಿಸಲಾದ ಕನ್ನಡಿಗಳು ಅಥವಾ ಲೈಟ್, ಗಿಡಗಳ ನಡುವೆ ಒಮ್ಮೆ ಕಣ್ಣು ಹಾಹಿಸಿ. ಅನಾವಶ್ಯಕವಾದ, ಹೆಚ್ಚುವರಿ ವೈರ್ ಕೂಡ ಹಿಡನ್ ಕ್ಯಾಮರಾಕ್ಕೆ ಸಂಪರ್ಕ ಹೊಂದಿರಬಹುದು.
ಸ್ಪೀಕರ್‌ಗಳು: ಹಿಡನ್ ಕ್ಯಾಮೆರಾಗಳನ್ನು ಸ್ಪೀಕರ್‌ಗಳು, ಮ್ಯೂಸಿಕ್ ಸಿಸ್ಟಮ್‌ಗಳ ಸ್ಪೀಕರ್ ಅಥವಾ ಟಿವಿಗಳಲ್ಲಿ ಸುಲಭವಾಗಿ ಇರಿಸಬಹುದು. ಟಾರ್ಚ್ನೊಂದಿಗೆ ಅವುಗಳನ್ನು ಪರಿಶೀಲಿಸಿ. ನಿಮಗೆ ಅನುಮಾನ ಇದ್ದರೆ ಅದನ್ನು ಟವೆಲ್ ಅಥವಾ ಟಿಶ್ಯೂ ಪೇಪರ್‌ನಿಂದ ಮುಚ್ಚಿಬಿಡಿ. ಹಾಗೆಯೆ ಬಾತ್ರೂಮ್ನಲ್ಲಿರುವ ಟವೆಲ್, ಹೇರ್ ಡ್ರೈಯರ್ ಹೋಲ್ಡರ್ಗಳನ್ನು ಪರಿಶೀಲಿಸಿ. ಕ್ಯಾಮೆರಾಗಳಲ್ಲಿ ಚಿಕ್ಕದಾದ ಕೆಂಪು ಲೈಟ್ ಆನ್ ಆಗಿರುತ್ತದೆ. ಹೀಗಾಗಿ ರಾತ್ರಿಯಲ್ಲಿ ಎಲ್ಲ ಲೈಟ್ಗಳನ್ನು ಆಫ್ ಮಾಡಿ ಸೂಕ್ಷ್ಮವಾಗಿ ಇದನ್ನು ಗಮನಿಸಿ.
ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಪ್ಲೇ ಸ್ಟೋರ್ಗೆ ಹೋದರೆ ಅಲ್ಲಿ ಹಿಡನ್ ಕ್ಯಾಮೆರಾ ಡಿಟೆಕ್ಟರ್ ಎಂಬ ಆ್ಯಪ್ ಸಿಗುತ್ತದೆ. ಇದನ್ನು ಡೌನ್‌ಲೋಡ್ ಮಾಡಿ ಅದರ ಸಹಾಯದಿಂದ ಹಿಡನ್ ಕ್ಯಾಮೆರಾಗಳನ್ನು ಪತ್ತೆಹಚ್ಚಬಹುದು. ಈ ಆ್ಯಪ್ನಲ್ಲಿ 8 ಆಯ್ಕೆಗಳಿರುತ್ತವೆ. ಮೊದಲನೆಯದು Detect Wired Camera ಎಂಬ ಆಯ್ಕೆ. ಇದನ್ನು ಸೆಲೆಕ್ಟ್ ಆಡಿದರೆ ನೀವು ನಡೆದುಕೊಂಡ ಜಾಗವನ್ನು ಸ್ಕ್ಯಾನ್ ಮಾಡುತ್ತದೆ. ಹಿಡನ್ ಕ್ಯಾಮೆರಾ ಇದೆಯಾ ಎಂಬುದನ್ನು ತಿಳಿಸುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ