ಹೋಟೆಲ್ ರೂಮ್‍ಗೆ ಬರುವ ಜೋಡಿಗಳ ಖಾಸಗಿ ವಿಡಿಯೋ ರೆಕಾರ್ಡ್ ಮಾಡ್ತಿದ್ದ ನಾಲ್ವರು ಅರೆಸ್ಟ್
ಯಾವುದೇ ಹೋಟೆಲ್, ಲಾಡ್ಜ್, ರೆಸಾರ್ಟ್ಗಳಲ್ಲಿ ಉಳಿದುಕೊಳ್ಳುವ ಮುನ್ನ ಒಂದು ಸಲ ಎಲ್ಲಾ ಕಡೆ ಏನೆಲ್ಲಾ ಇದೆ ಎನ್ನುವುದನ್ನು ಚೆಕ್ ಮಾಡಿಕೊಳ್ಳಬೇಕು ಎನ್ನುವುದು ಇದಕ್ಕೆ.
ಲಕ್ನೋ: ಓಯೋ ಹೋಟೆಲ್ ರೂಮ್‍ಗಳಲ್ಲಿ ಸಿಕ್ರೇಟ್ ಕ್ಯಾಮೆರಾ ಅಳವಡಿಸಿ ಜೋಡಿಗಳ ಖಾಸಗಿ ವೀಡಿಯೋ ರೆಕಾರ್ಡ್ ಬ್ಲ್ಯಾಕ್ ಮೇಲೆ ಮಾಡುತ್ತಿದ್ದ ನಾಲ್ವರು ಖದೀಮರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಈ ಘಟನೆ ಘಟನೆ ಉತ್ತರ ಪ್ರದೇಶದ (Uttar Pradesh) ನೋಯ್ಡಾದಲ್ಲಿ ನಡೆದಿದೆ. ಆರೋಪಿಗಳನ್ನು ವಿಷ್ಣು ಸಿಂಗ್, ಅಬ್ದುಲ್ ವಹಾವ್, ಪಂಕಜ್ ಕುಮಾರ್ ಮತ್ತು ಅನುರಾಗ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ.
ಓಯೋ ರೂಮ್‍ಗೆ ಬರುವ ಜೋಡಿಗಳ ಖಾಸಗಿ ವೀಡಿಯೋವನ್ನು ರೆಕಾರ್ಡ್ ಮಾಡಿ ಬಳಿಕ ಕೇಳಿದಷ್ಟು ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಇಲ್ಲದಿದ್ದರೆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು.
ಬಾಯ್ಫ್ರೆಂಡ್ಗೆ ಥಳಿಸಿ, ಸಾಫ್ಟ್ವೇರ್ ಇಂಜಿನಿಯರ್ ಮೇಲೆ 10 ಕಾಮುಕರಿಂದ ಸಾಮೂಹಿಕ ಅತ್ಯಾಚಾರ
ಈ ಗ್ಯಾಂಗ್ ಮೊದಲಿಗೆ ಓಯೋ ರೂಮ್ ಅನ್ನು ತಮಗೆಂದು ಬುಕ್ ಮಾಡಿಕೊಂಡು ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಕೆಲವು ದಿನಗಳ ನಂತರ ಅಳವಡಿಸಿದ್ದ ಕ್ಯಾಮೆರಾಗಳನ್ನು ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸುತ್ತಾರೆ. ನಂತರ ಜೋಡಿಗಳನ್ನು ಸಂಪರ್ಕಿಸಿ ಹಣಕ್ಕಾಗಿ ಬೇಡಿಕೆ ಇಟ್ಟು ಬ್ಲ್ಯಾಕ್ ಮೇಲ್ ಮಾಡಿದ್ದಾರೆ.
ಜೋಡಿಗಳ ಖಾಸಗಿ ವೀಡಿಯೋವನ್ನು ಅವರ ಫೋನ್‍ಗೆ ಕಳುಹಿಸಿ ವಿಷ್ಣು ಮತ್ತು ಅಬ್ದುಲ್ ವಹಾವ್ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಆದರೆ ಹಣ ನೀಡಲು ನಿರಾಕರಿಸದರೆ ವೀಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದರು. ಅನುರಾಗ್ ಕುಮಾರ್ ಸಿಂಗ್ ಹಾಗೂ ಪಂಕಜ್ ಹಣ ಸುಲಿಗೆ ಮಾಡಲು ರಿಜಿಸ್ಟರ್ ಸಿಮ್ ಮತ್ತು ಇತರ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಲಾದ ಖಾತೆಯನ್ನು ಒದಗಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಸಾದ್ ಮಿಯಾನ್ ಖಾನ್ ಹೇಳಿದ್ದಾರೆ.
ಆರೋಪಿಗಳಿಂದ 11 ಲ್ಯಾಪ್‍ಟಾಪ್‍ಗಳು, 7 ಸಿಪಿಯುಗಳು, 21 ಮೊಬೈಲ್‍ಗಳು ಮತ್ತು ವಿವಿಧ ಬ್ಯಾಂಕ್‍ಗಳ 22 ಎಟಿಎಂ ಕಾರ್ಡ್‍ಗಳು, ಒಂದು ಪ್ಯಾನ್ ಕಾರ್ಡ್, ಒಂದು ಆಧಾರ್ ಕಾರ್ಡ್, ಹಲವು ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳು ನೋಯ್ಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂರು ವಿಭಿನ್ನ ಗ್ಯಾಂಗ್‍ನ ಸದಸ್ಯರಾಗಿದ್ದಾರೆ. ಈ ಗ್ಯಾಂಗ್ ಅನಧಿಕೃತ ಕಾಲ್ ಸೆಂಟರ್‌ಗಳು, ಅಕ್ರಮ ಚಟುವಟಿಕೆಗಳಿಗೆ ನಕಲಿ ಸಿಮ್ ಕಾರ್ಡ್ ಒದಗಿಸುವುದು ಸೇರಿದಂತೆ ಹಲವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.