ಹಳೇ ದ್ವೇಷಕ್ಕೆ ಜೈಲಿನಲ್ಲಿ ಬಡಿದಾಡಿಕೊಂಡ ವಿಚಾರಣಾಧೀನ ಕೈದಿಗಳು
ಹಳೇ ದ್ವೇಷಕ್ಕೆ ಶಿವಮೊಬ್ಬ ಜೈಲಿನಲ್ಲಿ ಇಬ್ಬರು ವಿಚಾರಣಾಧೀನ ಕೈದಿಗಳ ನಡುವೆ ಜಗಳ ನಡೆದಿದ್ದು, ಕಾರಾಗೃಹ ಅಧೀಕ್ಷಕಿ ಡಾ.ಅನಿತಾರಿಂದ ದೂರು ದಾಖಲಾಗಿದೆ.
ಶಿವಮೊಗ್ಗ: ಹಳೇ ದ್ವೇಷಕ್ಕೆ ಜೈಲಿನಲ್ಲೇ ಜಿದ್ದಾಜಿದ್ದಿಗೆ ಬಿದ್ದ ಇಬ್ಬರು ವಿಚಾರಣಾಧೀನ ಕೈದಿಗಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಶಿವಮೊಗ್ಗ ಜೈಲಿನಲ್ಲಿ ನಡೆದಿದೆ. ಶಹೀದ್ ಖುರೇಷಿ ಮತ್ತು ಫೈಝುಲ್ಲಾ ರೆಹಮಾನ್ ನಡುವೆ ಈ ಘರ್ಷಣೆ ನಡೆದಿದ್ದು, ಕಾರಾಗೃಹ ಅಧೀಕ್ಷಕಿ ಡಾ.ಅನಿತಾ ಅವರಿಂದ ದೂರು ದಾಖಲಾಗಿದೆ. ಶಹೀದ್ ಖುರೇಷಿ ವಿರುದ್ಧ ಕ್ರಮಕೈಗೊಳ್ಳುವಂತೆ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾ ಖೈದಿಗಳಾದ ಶಹೀದ್ ಖುರೇಷಿ ಮತ್ತು ಫೈಝುಲ್ಲಾ ರೆಹಮಾನ್ ನಡುವೆ ಹಳೆಯ ದ್ವೇಷದ ಇತ್ತು. ಅದರಂತೆ ಖುರೇಷಿಯು ರೆಹಮಾನ್ಗೆ ಜೈಲಿನಲ್ಲಿ ಹಲ್ಲೆ ನಡೆಸಿದ್ದು, ಈ ವೇಳೆ ಪರಸ್ಪರ ಹೊಡೆದಾಟ ನಡೆದಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಜೈಲು ಅಧೀಕ್ಷಕಿ ಖುರೇಷಿ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕಲ್ಲು ಕ್ವಾರಿಯಲ್ಲಿ ಸ್ಫೋಟ ಪ್ರಕರಣ: ಮತ್ತೆ ಮೂವರ ಬಂಧನ
ಕೋಲಾರ: ಕೊಮ್ಮನಹಳ್ಳಿ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ ಪ್ರಕರಣ ಸಂಬಂಧ ಮಾಸ್ತಿ ಪೊಲೀಸರು ತನಿಖೆ ಮುಂದುವರಿಸಿದ್ದು, ಮತ್ತೆ ಮೂವರನ್ನ ಬಂಧಿಸಿದ್ದಾರೆ. ಕಲ್ಲು ಕ್ವಾರಿ ಮಾಲೀಕ ಮಂಜುನಾಥ್, ಡ್ರಿಲ್ ಮಾಡಿದ್ದ ಸುರೇಶ್, ಡ್ರೈವರ್ ಅಂಜಿ ಎಂಬವರನ್ನು ಬಂಧಿಸಿದ್ದಾರೆ. ಈ ಹಿಂದೆ ಮೃತಪಟ್ಟ ರಾಕೇಶ್ ಸಾಣಿ ಅಣ್ಣ ನಿತೇಶ್, ಸ್ಪೋಟಕ ಪರವಾನಗೆ ಹೊಂದಿದ್ದ ದಿಪೇನ್ ಬಂಧನವಾಗಿತ್ತು.
ಘಟನಾ ಸ್ಥಳದಲ್ಲಿದ್ದ ಇಬ್ಬರು ಕಾರ್ಮಿಕರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರರಿಸುವ ಸಾಧ್ಯತೆಯೂ ಇದೆ. ಇದೆ ತಿಂಗಳ 13ರಂದು ಕಲ್ಲು ಕ್ವಾರಿಯಲ್ಲಿ ಜಿಲೆಟಿನ್ ಸ್ಫೋಟದಿಂದ ಓರ್ವ ಮೃತಪಟ್ಟು, ಮತ್ತೋರ್ವನಿಗೆ ಗಾಯವಾಗಿತ್ತು. ಮೃತನ ಮೇಲೆ ಟಿಪ್ಪರ್ ಹರಿಸಿ ಅಪಘಾತವೆಂದು ಬಿಂಬಿಸಿ ಪ್ರಕರಣ ಮುಚ್ಚಿಹಾಕಲು ಯತ್ನಿಸಲಾಗಿತ್ತು. ಇದರ ಹಿಂದೆ ಪ್ರಭಾವಿಗಳ ಕೈವಾಡವಿರುವ ಹಿನ್ನೆಲೆ ಪ್ರಕರಣದ ತನಿಖೆಯನ್ನ ಸಿಐಡಿಗೆ ಒಪ್ಪಿಸುವಂತೆ ಒತ್ತಾಯ ಕೇಳಿ ಬಂದಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ