ಈ ಹಿಂದೆ ನೀಮ್ಮ ಬಳಿ ಮತಚೀಟಿ (Voter Id card) ಅಥವಾ ರೇಷನ್ ಕಾರ್ಡ್ (Ration card) ಜೆರಾಕ್ಸ್ ಪ್ರತಿ (Xerox) ಇದ್ದರೆ ಸಿಮ್ ಕಾರ್ಡ್(SIM Card) ಸುಲಭವಾಗಿ ಸಿಗುತ್ತಿತ್ತು. ಬೇಕಾದಷ್ಟು ನಂಬರ್ ಬಳಸಬಹುದಾಗಿತ್ತು. ಅಷ್ಟೇ ಏಕೆ ಯಾರೋದ್ದೋ ಹೆಸರಿನಲ್ಲಿ ಯಾರಿಗೋ ಸಿಮ್ ಕಾರ್ಡ್ ಪಡೆದುಕೊಳ್ಳಬಹುದಿತ್ತು. ಸದ್ಯ ಇದನ್ನರಿತ ಕೇಂದ್ರ ಸರ್ಕಾರ ನಿಯಮಾವಳಿಗಳನ್ನು ಬಿಗಿಗೊಳಿಸಿದೆ. ಕೇಂದ್ರ ಸರ್ಕಾರ ತಂದಿರುವ ಹೊಸ ರೂಲ್ಸ್ ಪ್ರಕಾರ, ಒಂಬತ್ತಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಹೊಂದಿದವರ ಫೋನ್ ಸಂಪರ್ಕ ಕಡಿತಗೊಳ್ಳಲಿದೆಯಂತೆ. ಹೌದು, ಭಾರತದಾದ್ಯಂತ ಒಂಬತ್ತು ಸಂಪರ್ಕಗಳನ್ನು ಮೀರಿದ ಮತ್ತು ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮತ್ತು ಅಸ್ಸಾಂನಲ್ಲಿ ಆರು ಸಂಪರ್ಕಗಳನ್ನು ಹೊಂದಿರುವ ಚಂದಾದಾರರ ಸಿಮ್ ಅನ್ನು ಮರುಪರಿಶೀಲಿಸಲು ಮತ್ತು ಇಲ್ಲದಿದ್ದಲ್ಲಿ ಸಂಪರ್ಕ ಕಡಿತಗೊಳಿಸಲು ದೂರಸಂಪರ್ಕ ಇಲಾಖೆ (DOT) ಆದೇಶ ಹೊರಡಿಸಿದೆ.
ಒಂಬತ್ತಕ್ಕಿಂತ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಹೊಂದಿರುವ ಚಂದಾದಾರರ ಸಿಮ್ ಕಾರ್ಡ್‌ಗಳನ್ನು ಪರಿಶೀಲಿಸುವಂತೆ ಟೆಲಿಕಾಂ ಇಲಾಖೆ ನಿರ್ದೇಶನ ನೀಡಿದೆ. ದೇಶದಲ್ಲಿ ಸೈಬರ್ ಅಪರಾಧಗಳು, ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ನಿಯಮಗಳ ಪ್ರಕಾರ ಬಳಕೆಯಲ್ಲಿ ಇಲ್ಲದ ಎಲ್ಲಾ ಫ್ಲ್ಯಾಗ್ ಮಾಡಲಾದ ಮೊಬೈಲ್ ಸಂಪರ್ಕಗಳನ್ನು ಡೇಟಾಬೇಸ್ನಿಂದ ತೆಗೆದು ಹಾಕುವಂತೆ ಟೆಲಿಕಾಂ ಆಪರೇಟರ್ಗಳಿಗೆ ಡಿಓಟಿ ಸೂಚನೆ ನೀಡಿದೆ.
ಡಿಸೆಂಬರ್ 7 ರಂದು ಹೊರಡಿಸಿದ ಆದೇಶದ ಪ್ರಕಾರ ಚಂದಾದಾರರಿಗೆ ಉಳಿದ ಸಂಪರ್ಕಗಳನ್ನು ಉಳಿಸಿಕೊಳ್ಳಲು ಮತ್ತು ನಿಷ್ಕ್ರಿಯಗೊಳಿಸಲು ಬಯಸುವ ಸಂಪರ್ಕವನ್ನು ಆಯ್ಕೆ ಮಾಡುವ ಆಯ್ಕೆಯನ್ನು ನೀಡಲಾಗುತ್ತದೆ. ಬಳಕೆಯಲ್ಲಿ ಇಲ್ಲದ ಸಿಮ್ ಕಾರ್ಡ್ ಅನ್ನು ಅಥವಾ ಫ್ಲ್ಯಾಗ್ ಮಾಡಲಾದ ಮೊಬೈಲ್ ಸಂಪರ್ಕಗಳನ್ನು ಡೇಟಾಬೇಸ್ನಿಂದ ತೆಗೆದುಹಾಕಲು ಟೆಲಿಕಾಂ ಆಪರೇಟರ್ಗಳು ಡಿಒಟಿಗೆ ತಿಳಿಸಿದೆ. ಕೇಂದ್ರ ಸರ್ಕಾರದ ಇತ್ತೀಚಿನ ಆದೇಶದ ಪ್ರಕಾರ ಗ್ರಾಹಕರಿಗೆ ಅವರು ಉಳಿಸಿಕೊಳ್ಳಲು ಬಯಸುವ ಸಿಮ್ನ್ನು ಆಯ್ಕೆ ಮಾಡಲು ಹಾಗೂ ಉಳಿದ ಸಿಮ್ಗಳನ್ನು ನಿಷ್ಕ್ರಿಯಗೊಳಿಸಲು ಆಯ್ಕೆ ನೀಡಲಾಗುತ್ತದೆ.
“ಹೊರಹೋಗುವ (ಡೇಟಾ ಸೇವೆಗಳನ್ನು ಒಳಗೊಂಡಂತೆ) ಫ್ಲಾಗ್ ಮಾಡಲಾದ ಮೊಬೈಲ್ ಸಂಪರ್ಕದ ಸೌಲಭ್ಯಗಳನ್ನು 30 ದಿನಗಳಲ್ಲಿ ಸ್ಥಗಿತಗೊಳಿಸಲಾಗುತ್ತದೆ ಮತ್ತು ಚಂದಾದಾರರು ಪರಿಶೀಲನೆಗೆ ಹಾಜರಾಗಿದ್ದರೆ ಮತ್ತು ಶರಣಾಗಲು, ವರ್ಗಾಯಿಸಲು ಅವರ ಆಯ್ಕೆಯನ್ನು ಚಲಾಯಿಸಿದರೆ ಒಳಬರುವ ಸೇವೆಯನ್ನು 45 ದಿನಗಳಲ್ಲಿ ಸ್ಥಗಿತಗೊಳಿಸಲಾಗುತ್ತದೆ. ಯಾವುದೇ ಚಂದಾದಾರರು ಮರು-ಪರಿಶೀಲನೆಗೆ ಬಾರದಿದ್ದಲ್ಲಿ, ಫ್ಲ್ಯಾಗ್ ಮಾಡಿದ ಸಂಖ್ಯೆಯನ್ನು ಡಿಸೆಂಬರ್ 7 ರಿಂದ ಎಣಿಸಲು 60 ದಿನಗಳಲ್ಲಿ ನಿಷ್ಕ್ರಿಯಗೊಳಿಸಲಾಗುತ್ತದೆ. ಅಂತರರಾಷ್ಟ್ರೀಯ ರೋಮಿಂಗ್‌ನಲ್ಲಿರುವ ಅಥವಾ ದೈಹಿಕ ಅಂಗವೈಕಲ್ಯ ಅಥವಾ ಚಂದಾದಾರರು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ, ಹೆಚ್ಚುವರಿ 30 ದಿನಗಳನ್ನು ಒದಗಿಸಲಾಗುತ್ತದೆ” ಎಂದು ಆದೇಶವು ಹೇಳಿದೆ.
ಇತ್ತೀಚೆಗಷ್ಟೆ ದೂರಸಂಪರ್ಕ (DOP) ಇಲಾಖೆಯು ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್‌ಮೆಂಟ್ ಮತ್ತು ಗ್ರಾಹಕ ರಕ್ಷಣೆ ಅಥವಾ TAFCOP ಎಂದು ಕರೆಯಲಾಗುವ ಹೊಸ ಪೋರ್ಟಲ್ ಅನ್ನು ಪರಿಚಯಿಸಿತ್ತು. ಇದರ ಮೂಲಕ ಬಳಕೆದಾರರು ತಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿರುವ ಎಲ್ಲಾ ಫೋನ್‌ಗಳನ್ನು ಪರಿಶೀಲಿಸಲು ಇದರಿಂದ ಸಾಧ್ಯವಾಗುತ್ತದೆ.
Google Year in Search 2021: 2021 ರಲ್ಲಿ ಗೂಗಲ್ನಲ್ಲಿ ಜನರು ಅತಿ ಹೆಚ್ಚು ಸರ್ಚ್ ಮಾಡಿದ ವಿಷಯ ಏನು ಗೊತ್ತೇ?
(Central government order to disconnect the phone connections of people with more than nine sim cards)