ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In), ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡಿದೆ. ಇತ್ತೀಚಿನ ಆಂಡ್ರಾಯ್ಡ್ 13 ಸೇರಿದಂತೆ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನ ಹಲವಾರು ಆವೃತ್ತಿಗಳಲ್ಲಿ ದುರ್ಬಲತೆಗಳು ಕಂಡುಬಂದಿದೆ. ಇವುಗಳು ನಿಮ್ಮ ಸ್ಮಾರ್ಟ್ಫೋನ್ ಒಳಗಡೆ ಪ್ರವೇಶ ಪಡೆದು, ಸೂಕ್ಷ್ಮ ಮಾಹಿತಿಯನ್ನು ಕದಿಯಲು ಪ್ರಾರಂಭಿಸುತ್ತದೆ ಎಂದು ಸರ್ಕಾರ ಹೇಳಿದೆ.
CERT-In ಎಂಬುದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ. ಭಾರತದಲ್ಲಿ ನಡೆಯುವ ಸೈಬರ್ ಅಟ್ಯಾಕ್ ಅನ್ನು ಸುರಕ್ಷಿತಗೊಳಿಸುವುದು ಇದರ ಗುರಿಯಾಗಿದೆ. ಹ್ಯಾಕಿಂಗ್ ಮತ್ತು ಫಿಶಿಂಗ್ ಸೇರಿದಂತೆ ಸೈಬರ್ ಭದ್ರತೆ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ಇದು ಹೊಂದಿದೆ. CERT-In ಹೇಳಿರುವ ಪ್ರಕಾರ ಅತ್ಯಂತ ಜನಪ್ರಿಯ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಒಂದಾದ ಆಂಡ್ರಾಯ್ಡ್ OS ನ ಹಲವಾರು ಆವೃತ್ತಿಗಳಲ್ಲಿ ಅಪಾಯಗಳು ಕಂಡುಬಂದಿದೆ.
120W ಹೈಪರ್ ಚಾರ್ಜರ್, 50MP ಕ್ಯಾಮೆರಾ: ಶವೋಮಿ 12 ಪ್ರೊ ಫೋನ್ ಮೇಲೆ 38,000 ರೂ. ಡಿಸ್ಕೌಂಟ್
“ಆಂಡ್ರಾಯ್ಡ್‌ನಲ್ಲಿ ಹಲವಾರು ದುರ್ಬಲತೆಗಳು ವರದಿಯಾಗಿದೆ, ಇದನ್ನು ಬಳಸಿಕೊಂಡು ಹ್ಯಾಕರ್ಗಳು ಫೋನಿನಿಂದ ಸೂಕ್ಷ್ಮ ಮಾಹಿತಿಯನ್ನು ಕದಿಯಲು ಪ್ರಯತ್ನಿಸುತ್ತಾರೆ,” ಎಂದು ಹೇಳಿದೆ.
– CVE-2020-29374
– CVE-2022-34830
-CVE-2022-40510
– CVE-2023-20780
– CVE-2023-20950 -209623
– CVE-2023-21133
– CVE-2023-21134
– CVE-2023-21140
CVE-2023-21142
– CVE- 2023-21264
– CVE-2023-21267
– CVE-2023-21267
– CVE-312023
CVE -2023-21270
– CVE-2023-21271
– CVE-2023-21272
– CVE-2023-21273
– CVE-2023-21274
-CVE-2023-21275
– CVE-20275
– CVE-2026-212027 023 -21278
– CVE-2023-21279
– CVE-2023-21280
– CVE-2023-21281
– CVE-2023-21282
– CVE-2023-21283
– CVE-2023-21284
– CVE-2023-21285
– CVE-2023-21286
– CVE-2023-212823
– CVE-281-2023-21289
– CVE-2023-21290
– CVE-2023-21292
– CVE-2023-21626
– CVE-2023-22666
– CVE-2023-28537
CVE-20523-
CERT ಪ್ರಕಾರ ಈ ದೋಷಗಳು ಆಂಡ್ರಾಯ್ಡ್ ಆವೃತ್ತಿ 10, 11, 12, 12L ಮತ್ತು 13 ಮೇಲೆ ಪರಿಣಾಮ ಬೀರುತ್ತವೆ. ಫ್ರೇಮ್‌ವರ್ಕ್, ಆಂಡ್ರಾಯ್ಡ್ ರನ್‌ಟೈಮ್, ಸಿಸ್ಟಮ್ ಕಾಂಪೊನೆಂಟ್, ಗೂಗಲ್ ಪ್ಲೇ ಸಿಸ್ಟಮ್ ಅಪ್‌ಡೇಟ್‌ಗಳು, ಕರ್ನಲ್, ಆರ್ಮ್ ಕಾಂಪೊನೆಂಟ್‌ಗಳು ಮತ್ತು ಕ್ವಾಲ್ಕಂನಲ್ಲಿನ ದೋಷಗಳಿಂದ ಅವು ಉಂಟಾಗಿವೆ ಎಂದು ಹೇಳಿದೆ.
ರಕ್ಷಣೆ ಹೇಗೆ?:
ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳು ಸುರಕ್ಷಿತವಾಗಿರಿಸಲು, ಬಳಕೆದಾರರು ತಮ್ಮ ಸಾಧನಗಳನ್ನು ಇತ್ತೀಚಿನ ಭದ್ರತಾ ಆವೃತ್ತಿಗೆ ಅಪ್ಡೇಟ್ ಮಾಡುವಂತೆ CERT-In ಶಿಫಾರಸು ಮಾಡಿದೆ. ಇದಕ್ಕಾಗಿ ಗೂಗಲ್ ಈಗಾಗಲೇ ಅಪ್ಡೇಟ್ ಬಿಡುಗಡೆ ಮಾಡಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ