AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಲ್ಯಾಪ್​ಟಾಪ್​- ಡೆಸ್ಕ್ ಟಾಪ್​ನಲ್ಲಿ ವಾಟ್ಸ್ಆ್ಯಪ್ ಚಾಟ್ ಹೈಡ್ ಮಾಡುವುದು ಹೇಗೆ?

WhatsApp Tips and Trick: ವಾಟ್ಸ್ಆ್ಯಪ್ ಈಗಾಗಲೇ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಚಾಟ್‌ಗಳನ್ನು ಮರೆಮಾಡುವ, ಆನ್‌ಲೈನ್ ಸ್ಟೇಟಸ್ ಅನ್ನು ಮರೆಮಾಡುವುದು ಮತ್ತು ಡಿಸ್ಪ್ಲೇ ಫೋಟೋವನ್ನು ಮರೆಮಾಡುವಂತಹ ಅನೇಕ ಗೌಪ್ಯತೆ ವೈಶಿಷ್ಟ್ಯಗಳನ್ನು ಒದಗಿಸಿದೆ. ಆದರೆ ವಾಟ್ಸ್ಆ್ಯಪ್ ವೆಬ್‌ನಲ್ಲಿ ಇನ್ನೂ ನಿಮ್ಮ ಚಾಟ್‌ಗಳನ್ನು ಇತರರಿಂದ ಮರೆಮಾಡಬಹುದಾದ ಯಾವುದೇ ಆಯ್ಕೆ ಇಲ್ಲ.

Tech Tips: ಲ್ಯಾಪ್​ಟಾಪ್​- ಡೆಸ್ಕ್ ಟಾಪ್​ನಲ್ಲಿ ವಾಟ್ಸ್ಆ್ಯಪ್ ಚಾಟ್ ಹೈಡ್ ಮಾಡುವುದು ಹೇಗೆ?
Whatsapp Web Tricks
Vinay Bhat
|

Updated on: Jun 20, 2025 | 3:08 PM

Share

ಬೆಂಗಳೂರು (ಜೂ. 20): ಇಂದಿನ ಡಿಜಿಟಲ್ ಯುಗದಲ್ಲಿ, ಸ್ನೇಹಿತರೊಂದಿಗೆ ಮಾತನಾಡಲು ಅಥವಾ ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ವಾಟ್ಸ್​ಆ್ಯಪ್ (WhatsApp) ಒಂದು ನಮ್ಮ ದೈನಂದಿನ ಸಂಭಾಷಣೆಗಳ ಪ್ರಮುಖ ಭಾಗವಾಗಿದೆ. ಆದರೆ ನೀವು ಕಚೇರಿ ಅಥವಾ ವೃತ್ತಿಪರ ಜಾಗದಲ್ಲಿ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ವಾಟ್ಸ್​ಆ್ಯಪ್​​​​ ವೆಬ್ ಬಳಸುತ್ತಿದ್ದರೆ, ನಿಮ್ಮ ಖಾಸಗಿ ಚಾಟ್‌ಗಳು ಬೇರೆಯವರಿಗೆ ಗೋಚರಿಸಬಹುದು, ಇದು ನಿಮ್ಮ ತೊಂದರೆಗೆ ಕಾರಣವಾಗಬಹುದು. ವಾಟ್ಸ್​ಆ್ಯಪ್​​​​ ಈಗಾಗಲೇ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಚಾಟ್‌ಗಳನ್ನು ಮರೆಮಾಡುವ, ಆನ್‌ಲೈನ್ ಸ್ಟೇಟಸ್ ಅನ್ನು ಮರೆಮಾಡುವುದು ಮತ್ತು ಡಿಸ್​ಪ್ಲೇ ಫೋಟೋವನ್ನು ಮರೆಮಾಡುವಂತಹ ಅನೇಕ ಗೌಪ್ಯತೆ ವೈಶಿಷ್ಟ್ಯಗಳನ್ನು ಒದಗಿಸಿದೆ. ಆದರೆ ವಾಟ್ಸ್​ಆ್ಯಪ್​​​​ ವೆಬ್‌ನಲ್ಲಿ ಇನ್ನೂ ನಿಮ್ಮ ಚಾಟ್‌ಗಳನ್ನು ಇತರರಿಂದ ಮರೆಮಾಡಬಹುದಾದ ಯಾವುದೇ ಆಯ್ಕೆ ಇಲ್ಲ.

ಪರಿಹಾರವೇನು?

ನೀವು ಗೂಗಲ್ ಕ್ರೋಮ್ ಬ್ರೌಸರ್‌ನಲ್ಲಿ ವಾಟ್ಸ್​ಆ್ಯಪ್​​​​ ವೆಬ್ ಅನ್ನು ಬಳಸುತ್ತಿದ್ದರೆ, ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ಇಲ್ಲದೆ ಸರಳ ಕ್ರೋಮ್ ಎಕ್ಸ್​​ಟೆನ್ಶನ್ ಸಹಾಯದಿಂದ ನಿಮ್ಮ ಚಾಟ್‌ಗಳನ್ನು ಇತರರಿಂದ ರಕ್ಷಿಸಬಹುದು. ಈ ವಿಧಾನವು ಕಚೇರಿ ಕೆಲಸಗಾರರಿಗೆ ವಿಶೇಷವಾಗಿ ಉಪಯುಕ್ತವಾಗಿದೆ, ಹೀಗಾಗಿ ಹತ್ತಿರದಲ್ಲಿ ಕುಳಿತಿರುವ ಜನರು ನಿಮ್ಮ ಡಿಸ್​ಪ್ಲೇಯನ್ನ ನೋಡಿದರೂ ಅವರಿಗೆ ಏನೂ ಕಾಣುವುದಿಲ್ಲ.

ಇದನ್ನೂ ಓದಿ
Image
ಇತಿಹಾಸದಲ್ಲೇ ಅತಿ ದೊಡ್ಡ ಆನ್‌ಲೈನ್ ಕಳ್ಳತನ: 16 ಬಿಲಿಯನ್ ಪಾಸ್‌ವರ್ಡ್ ಲೀಕ್
Image
ಕೊನೆಗೂ ಸೂಪರ್ ಫಾಸ್ಟ್ ವೇಗದಲ್ಲಿ ಬಿಎಸ್ಎನ್ಎಲ್ 5G ಸೇವೆ ಪ್ರಾರಂಭ
Image
Tech Tips: ನಿಮಗೆ ಯಾರ ಕಾಲ್ ಬಂತೆಂದು ಫೋನ್ ಧ್ವನಿ ಮೂಲಕ ಹೇಳುತ್ತೆ
Image
ಡೊನಾಲ್ಡ್ ಟ್ರಂಪ್ ಕಂಪನಿಯಿಂದ ಬರುತ್ತಿದೆ ಟ್ರಂಪ್ T1 ಸ್ಮಾರ್ಟ್​ಫೋನ್

Privacy Extension For WhatsApp Web ಡೌನ್‌ಲೋಡ್ ಮಾಡುವುದು ಹೇಗೆ

  • ಮೊದಲು ಕ್ರೋಮ್ ಬ್ರೌಸರ್ ತೆರೆಯಿರಿ ಮತ್ತು ಗೂಗಲ್​ನಲ್ಲಿ WhatsApp ವೆಬ್‌ಗಾಗಿ ಗೌಪ್ಯತೆ ವಿಸ್ತರಣೆ (Privacy Extension For WhatsApp Web) ಎಂದು ಸರ್ಚ್ ಮಾಡಿ.
  • ನಂತರ ಗೂಗಲ್​ನಲ್ಲಿ ಕಾಣಿಸಿಕೊಂಡ ಸರಿಯಾದ ಲಿಂಕ್ ಅನ್ನು ಆಯ್ಕೆ ಮಾಡಿ, ಆ ನಿಮ್ಮನ್ನು ಆ ಎಕ್ಸ್​ಟೆನ್ಶನ್ ಪುಟಕ್ಕೆ ಕರೆದೊಯ್ಯುತ್ತದೆ.
  • ಪುಟದ ಬಲಭಾಗದಲ್ಲಿರುವ Chrome ಗೆ ಸೇರಿಸಿ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ಎಕ್ಸ್​ಟೆನ್ಶನ್ ಆ್ಯಡ್ ಮೇಲೆ ಟ್ಯಾಪ್ ಮಾಡಿ.
  • ಈಗ ಈ ಎಕ್ಸ್​ಟೆನ್ಶನ್ ನಿಮ್ಮ ಬ್ರೌಸರ್‌ನಲ್ಲಿ ಸ್ಥಾಪಿಸಲ್ಪಡುತ್ತದೆ.
  • ಅದನ್ನು ಹೇಗೆ ಬಳಸುವುದು?
  • ಒಮ್ಮೆ ಸ್ಥಾಪಿಸಿದ ನಂತರ, ಕ್ರೋಮ್​ನ ಮೇಲಿನ ಬಲಭಾಗದಲ್ಲಿರುವ Extensions ಐಕಾನ್ ಮೇಲೆ ಕ್ಲಿಕ್ ಮಾಡಿ.
  • ಇಲ್ಲಿ ವಾಟ್ಸ್​ಆ್ಯಪ್​​ ವೆಬ್‌ಗಾಗಿ ಗೌಪ್ಯತೆ ವಿಸ್ತರಣೆಯನ್ನು ಆಯ್ಕೆಮಾಡಿ.
  • ಈಗ ಒಂದು ಪಟ್ಟಿ ತೆರೆಯುತ್ತದೆ, ಅದರಲ್ಲಿ ನೀವು ವಿಭಿನ್ನ ವಿಷಯಗಳನ್ನು ಮರೆಮಾಡಲು ಟಾಗಲ್ ಬಟನ್ ಅನ್ನು ಆನ್ ಮಾಡಬಹುದು.

Biggest Data Breach: ಇತಿಹಾಸದಲ್ಲಿಯೇ ಅತಿ ದೊಡ್ಡ ಆನ್‌ಲೈನ್ ಕಳ್ಳತನ: 16 ಬಿಲಿಯನ್ ಜನರ ಪಾಸ್‌ವರ್ಡ್‌ಗಳು ಸೋರಿಕೆ

ಉದಾಹರಣೆಗೆ, ನಿಮ್ಮ ಪ್ರೊಫೈಲ್ ಫೋಟೋ ಗೋಚರಿಸಬಾರದು ಎಂದು ನೀವು ಬಯಸಿದರೆ, ಆ ಆಯ್ಕೆಯನ್ನು ಆನ್ ಮಾಡಿ. ನೀವು ಬಯಸಿದರೆ, ಸಂದೇಶಗಳು, ಹೆಸರು, ಚಾಟ್‌ಗಳು ಅಥವಾ QR ಕೋಡ್‌ನಂತಹ ಮಾಹಿತಿಯನ್ನು ಸಹ ನೀವು ಮಸುಕುಗೊಳಿಸಬಹುದು.

ಒಮ್ಮೆ ಸೆಟ್ಟಿಂಗ್‌ಗಳನ್ನು ಸೇವ್ ಮಾಡಿದ ನಂತರ, ನೀವು ಮುಂದಿನ ಬಾರಿ ವಾಟ್ಸ್​ಆ್ಯಪ್​​ ವೆಬ್ ಅನ್ನು ತೆರೆದಾಗ, ನಿಮ್ಮ ಖಾಸಗಿ ಮಾಹಿತಿಯು ಇತರರ ಕಣ್ಣಿನಿಂದ ಮಸುಕಾಗಿರುತ್ತದೆ. ಈ ರೀತಿಯಾಗಿ ವಾಟ್ಸ್​ಆ್ಯಪ್​​ ವೆಬ್​ನಲ್ಲಿ ನಿಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಬಹುದು.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ