Fastrack Limitless FS1: ಟ್ರೆಂಡಿಂಗ್ ಮತ್ತು ಸ್ಟೈಲಿಶ್ ವಿನ್ಯಾಸದಲ್ಲಿ ಬರುತ್ತಿದೆ ಸ್ಮಾರ್ಟ್ವಾಚ್
ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಲಿಮಿಟ್ಲೆಸ್ ಎಫ್ಎಸ್1 ಬ್ಲೂಟೂತ್ ಕಾಲಿಂಗ್ ಬೆಂಬಲ ಹೊಂದಿದೆ. ಫಾಸ್ಟ್ಟ್ರ್ಯಾಕ್ ಲಿಮಿಟ್ಲೆಸ್ ಎಫ್ಎಸ್1 ವಾಚ್ 1.95 ಇಂಚಿನ ಡಿಸ್ಪ್ಲೇ ಹೊಂದಿದೆ.
ಇದು ಸ್ಮಾರ್ಟ್ ಯುಗ. ದಿನವೂ ಹೊಸ ಹೊಸ ಸ್ಮಾರ್ಟ್ ಗ್ಯಾಜೆಟ್ಗಳು ಮಾರುಕಟ್ಟೆಗೆ ಪ್ರವೇಶಿಸುತ್ತವೆ. ಸ್ಮಾರ್ಟ್ವಾಚ್ನಿಂದ ತೊಡಗಿ, ಸ್ಮಾರ್ಟ್ಫೋನ್ ವರೆಗೆ ವಿವಿಧ ಬ್ರ್ಯಾಂಡ್ಗಳು ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಮಾದರಿಗಳನ್ನು ಪರಿಚಯಿಸುತ್ತವೆ. ಫಾಸ್ಟ್ಟ್ರ್ಯಾಕ್ ಕಂಪನಿ, ಲಿಮಿಟ್ಲೆಸ್ ಹೆಸರಿನಲ್ಲಿ ಆಕರ್ಷಕ ವಿನ್ಯಾಸದ ಹೊಸ ಸ್ಮಾರ್ಟ್ವಾಚ್ ಬಿಡುಗಡೆ ಮಾಡಿದೆ. ಫಾಸ್ಟ್ಟ್ರ್ಯಾಕ್, ಲಿಮಿಟ್ಲೆಸ್ ಎಫ್ಎಸ್1 ಬಿಡುಗಡೆಯಾಗಿದ್ದು, ಗ್ಯಾಜೆಟ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ನೂತನ ಸ್ಮಾರ್ಟ್ವಾಚ್ ವೈಶಿಷ್ಟ್ಯಗಳು, ತಾಂತ್ರಿಕ ವಿವರ ಇಲ್ಲಿದೆ. ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಲಿಮಿಟ್ಲೆಸ್ ಎಫ್ಎಸ್1 ಬ್ಲೂಟೂತ್ ಕಾಲಿಂಗ್ ಬೆಂಬಲ ಹೊಂದಿದೆ. ಫಾಸ್ಟ್ಟ್ರ್ಯಾಕ್ ಲಿಮಿಟ್ಲೆಸ್ ಎಫ್ಎಸ್1 ವಾಚ್ 1.95 ಇಂಚಿನ ಡಿಸ್ಪ್ಲೇ ಹೊಂದಿದೆ. ಫಾಸ್ಟ್ಟ್ರ್ಯಾಕ್ ಸ್ಮಾರ್ಟ್ವಾಚ್ ಮಾರುಕಟ್ಟೆಯಲ್ಲಿ ಕಪ್ಪು, ನೀಲಿ ಮತ್ತು ಗುಲಾಬಿ ಬಣ್ಣದಲ್ಲಿ ಲಭ್ಯವಿದೆ. ಅಮೆಜಾನ್ ಮೂಲಕ ಫಾಸ್ಟ್ಟ್ರ್ಯಾಕ್ ಲಿಮಿಟ್ಲೆಸ್ ಎಫ್ಎಸ್1 ದೊರೆಯಲಿದ್ದು, 300mAh ಬ್ಯಾಟರಿ ಬೆಂಬಲ ಹೊಂದಿದೆ. ಭಾರತದಲ್ಲಿ ಲಿಮಿಟ್ಲೆಸ್ ಎಫ್ಎಸ್1 ₹1,995 ದರ ಹೊಂದಿದ್ದು, ಹೃದಯ ಬಡಿತ ಮಾಪನ ಸಹಿತ ಹಲವು ಆರೋಗ್ಯ ಟ್ರ್ಯಾಕಿಂಗ್ಗೆ ಸಹಾಯಕವಾಗಿದೆ.