Fire-Boltt Pristine: ಮಹಿಳೆಯರಿಗಾಗಿಯೇ ಆಕರ್ಷಕ ವಿನ್ಯಾಸ ಫೈರ್ ಬೋಲ್ಟ್ ಸ್ಮಾರ್ಟ್ವಾಚ್
ಫೈರ್ ಬೋಲ್ಟ್ ಕಂಪನಿ, ಮಹಿಳೆಯರಿಗಾಗಿಯೇ ಆಕರ್ಷಕ ವಿನ್ಯಾಸದ ಸ್ಮಾರ್ಟ್ವಾಚ್ ಪರಿಚಯಿಸಿದೆ. ಬೋಲ್ಟ್ ಸರಣಿಯಲ್ಲಿ ಹೊಸ ಫೈರ್-ಬೋಲ್ಟ್ ಪ್ರಿಸ್ಟಿನ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ನೂತನ ಸ್ಮಾರ್ಟ್ವಾಚ್ ವಿಶೇಷತೆಗಳ ವಿವರ ಇಲ್ಲಿದೆ.
ಸ್ಮಾರ್ಟ್ವಾಚ್ ಎಂದರೆ ಅದು ಎಲ್ಲ ವಯೋಮಾನದವರಿಗೂ ಒಗ್ಗುತ್ತದೆ. ಅಲ್ಲದೆ, ಪುರುಷ-ಮಹಿಳೆ, ಮಕ್ಕಳು ಹಿರಿಯರು ಎನ್ನುವ ಬೇಧವಿಲ್ಲದೆ, ಯಾರು ಬೇಕಾದರೂ ಬಳಸಬಹುದಾಗಿದೆ. ಉಳಿದಂತೆ, ಸಾಮಾನ್ಯವಾಗಿ ಚೌಕಾಕಾರದ ವಿನ್ಯಾಸದ ಡಯಲ್ನ ಸ್ಮಾರ್ಟ್ವಾಚ್ ಹೆಚ್ಚು ಬೇಡಿಕೆಯಲ್ಲಿದೆ. ಹೊಸ ಬ್ರ್ಯಾಂಡ್ಗಳ ವಾಚ್ ಮಾರುಕಟ್ಟೆ ಪ್ರವೇಶಿಸುವಾಗಲೂ ಅದೇ ರೀತಿಯ ವಿನ್ಯಾಸ ಹೊಂದಿರುತ್ತದೆ. ಈ ಬಾರಿ ಫೈರ್ ಬೋಲ್ಟ್ ಕಂಪನಿ, ಮಹಿಳೆಯರಿಗಾಗಿಯೇ ಆಕರ್ಷಕ ವಿನ್ಯಾಸದ ಸ್ಮಾರ್ಟ್ವಾಚ್ ಪರಿಚಯಿಸಿದೆ. ಬೋಲ್ಟ್ ಸರಣಿಯಲ್ಲಿ ಹೊಸ ಫೈರ್-ಬೋಲ್ಟ್ ಪ್ರಿಸ್ಟಿನ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ನೂತನ ಸ್ಮಾರ್ಟ್ವಾಚ್ ವಿಶೇಷತೆಗಳ ವಿವರ ಇಲ್ಲಿದೆ. ಬೋಲ್ಟ್ ಸ್ಮಾರ್ಟ್ವಾಚ್ ಸರಣಿಯಲ್ಲಿ ಬಂದಿರುವ ಪ್ರಿಸ್ಟಿನ್ ವಾಚ್, ಮಹಿಳೆಯರಿಗೆ ವಿಶೇಷವಾಗಿ ವಿನ್ಯಾಸದಲ್ಲಿ ರೂಪಿಸಲಾಗಿದೆ. ಸ್ಟೀಲ್ ಮೆಟಲ್ ಪ್ರಿಂಟೆಡ್ ವಿನ್ಯಾಸ ಹೊಂದಿದೆ ಫೈರ್ ಬೋಲ್ಟ್ ಪ್ರಿಸ್ಟಿನ್ ವಾಚ್, ಪಿಂಕ್, ಗೋಲ್ಡ್ ಮತ್ತು ಸಿಲ್ವರ್ ವೈಟ್ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. 1.32 ಇಂಚಿನ ವೃತ್ತಾಕಾರದ ಡಿಸ್ಪ್ಲೇ ಹೊಂದಿರುವ ಫೈರ್ ಬೋಲ್ಟ್ ಪ್ರಿಸ್ಟಿನ್, ಬ್ಲೂಟೂತ್ ಕಾಲಿಂಗ್ ಬೆಂಬಲ ಹೊಂದಿದೆ. ಫೈರ್ ಬೋಲ್ಟ್ ಸ್ಮಾರ್ಟ್ವಾಚ್ ವಿಶೇಷ ದರ ₹2,999ಕ್ಕೆ ಲಭ್ಯವಿದ್ದು, 60ಕ್ಕೂ ಅಧಿಕ ಸ್ಪೋರ್ಟ್ಸ್ ಮೋಡ್, ಹೆಲ್ತ್ ಟ್ರ್ಯಾಕಿಂಗ್ ಸೌಲಭ್ಯ ಹೊಂದಿದೆ.
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್ ಖರ್ಗೆ ವ್ಯಂಗ್ಯ
