ಭಾರತದಲ್ಲಿ ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 8a ಫೋನ್ ಬಿಡುಗಡೆ: ಬೆಲೆ ಎಷ್ಟು, ಏನಿದೆ ಫೀಚರ್ಸ್?

|

Updated on: May 09, 2024 | 10:22 AM

Google Pixel 8a Launched in India: ಭಾರತದಲ್ಲಿ ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 8a ಸ್ಮಾರ್ಟ್​ಫೋನ್ ಬಿಡುಗಡೆಯಾಗಿದೆ. ಇದರಲ್ಲಿ 64-ಮೆಗಾಪಿಕ್ಸೆಲ್ ಡ್ಯುಯಲ್ ಹಿಂಬದಿಯ ಕ್ಯಾಮೆರಾದೊಂದಿಗೆ 4,492mAh ಬ್ಯಾಟರಿಯನ್ನು ನೀಡಲಾಗಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ 8a ಫೋನ್ ಬಿಡುಗಡೆ: ಬೆಲೆ ಎಷ್ಟು, ಏನಿದೆ ಫೀಚರ್ಸ್?
google pixel 8a
Follow us on

ಗೂಗಲ್ ಕಂಪನಿಯ ಬಹುನಿರೀಕ್ಷಿತ ಸ್ಮಾರ್ಟ್​ಫೋನ್ ಗೂಗಲ್ ಪಿಕ್ಸೆಲ್ 8ಎ (Google Pixel 8a) ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಹಿಂದಿನ ಮಾದರಿಗೆ (ಗೂಗಲ್ ಪಿಕ್ಸೆಲ್ 7 ಎ) ಹೋಲಿಸಿದರೆ ಹೊಸ ಫೋನ್ ಹಲವಾರು ನವೀಕರಣಗಳೊಂದಿಗೆ ಅನಾವರಣಗೊಂಡಿದೆ. ಇದು ಇತ್ತೀಚಿನ ಟೆನ್ಸರ್ G3 SoC ನೊಂದಿಗೆ ರಿಫ್ರೆಶ್ ವಿನ್ಯಾಸದಿಂದ ಕೂಡಿದೆ ಮತ್ತು ಈಗಾಗಲೇ ಮಾರುಕಟ್ಟೆಯಲ್ಲಿ ಪ್ರೀಮಿಯಂ ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡುಬರುವ ಎಲ್ಲಾ AI ಸ್ಮಾರ್ಟ್ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಇದರಲ್ಲಿ 64-ಮೆಗಾಪಿಕ್ಸೆಲ್ ಡ್ಯುಯಲ್ ಹಿಂಬದಿಯ ಕ್ಯಾಮೆರಾದೊಂದಿಗೆ 4,492mAh ಬ್ಯಾಟರಿಯನ್ನು ನೀಡಲಾಗಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಗೂಗಲ್ ಪಿಕ್ಸೆಲ್ 8a ಬೆಲೆ, ಲಭ್ಯತೆ

ಗೂಗಲ್ ಪಿಕ್ಸೆಲ್ 8a ಜಾಗತಿಕವಾಗಿ 128GB ಮತ್ತು 256GB ಸಂಗ್ರಹಣೆಯ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಎರಡೂ ಶೇಖರಣಾ ರೂಪಾಂತರಗಳಿಗಾಗಿ 8GB RAM ಕೊಡಲಾಗಿದೆ. ಭಾರತದಲ್ಲಿ 128GB ರೂಪಾಂತರದ ಬೆಲೆ ರೂ. 52,999 ಮತ್ತು 256GB ಆವೃತ್ತಿಯ ಬೆಲೆ ರೂ. 59,999 ಆಗಿದೆ. ಈ ಫೋನ್ ಈಗ ಫ್ಲಿಪ್​ಕಾರ್ಟ್​ನಲ್ಲಿ ಮುಂಗಡ-ಆರ್ಡರ್​ಗೆ ಲಭ್ಯವಿದ್ದು, ಮೇ 14 ರಂದು ಬೆಳಿಗ್ಗೆ 6:30 ಕ್ಕೆ ಮಾರಾಟ ಪ್ರಾರಂಭವಾಗಲಿದೆ. ಗೂಗಲ್ ಸಹ ಈ ಫೋನಿನ ಮೇಲೆ ಆಯ್ದ ಬ್ಯಾಂಕ್ ಕಾರ್ಡ್‌ಗಳಲ್ಲಿ ಕೊಡುಗೆಗಳನ್ನು ನೀಡುತ್ತಿದೆ.

ಡ್ಯುಯಲ್ ಸಿಮ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್: ಏನದು ನೋಡಿ

ಗೂಗಲ್ ಪಿಕ್ಸೆಲ್ 8a ಫೀಚರ್ಸ್

ಗೂಗಲ್ ಪಿಕ್ಸೆಲ್ 8a ಗ್ಲಾಸ್, ಪಾಲಿಕಾರ್ಬೊನೇಟ್ (ಹಿಂಭಾಗದ ಫಲಕಗಳು) ಮತ್ತು ಅಲ್ಯೂಮಿನಿಯಂ (ಫ್ರೇಮ್) ನಿಂದ ಮಾಡಿದ ರಿಫ್ರೆಶ್ ವಿನ್ಯಾಸವನ್ನು ಹೊಂದಿದೆ. ಇದರ ವಿನ್ಯಾಸವು ಗೂಗಲ್ ಪಿಕ್ಸೆಲ್ 8 ಮತ್ತು ಗೂಗಲ್ ಪಿಕ್ಸೆಲ್ 8 ಪ್ರೊ ಸ್ಮಾರ್ಟ್‌ಫೋನ್‌ಗಳಿಗೆ ಹೋಲುತ್ತದೆ. 6.1-ಇಂಚಿನ ಸೂಪರ್ ಆಕ್ಟುವಾ ಡಿಸ್ಪ್ಲೇಯನ್ನು ಹೊಂದಿದೆ. ಈ OLED ಪ್ಯಾನೆಲ್ 120Hz ನಲ್ಲಿ ರಿಫ್ರೆಶ್ ದರದಿಂದ ಕೂಡಿದೆ. ಹಿಂದಿನ ಮಾದರಿಯಂತೆಯೇ ಕಾರ್ನಿಂಗ್‌ನ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ನೀಡಲಾಗಿದೆ.

ಕಳೆದ ವರ್ಷದಂತೆ, ಪಿಕ್ಸೆಲ್ 8a ನ SoC ಅನ್ನು ಇತ್ತೀಚಿನ ಟೆನ್ಸರ್ G3 ಗೆ (ಟೈಟಾನ್ M2 ಭದ್ರತಾ ಕೊಪ್ರೊಸೆಸರ್ ಜೊತೆಗೆ) ಅಪ್‌ಗ್ರೇಡ್ ಮಾಡಿದೆ. AI ಇಮೇಜ್ ಎಡಿಟಿಂಗ್ (ಮ್ಯಾಜಿಕ್ ಎಡಿಟರ್), ಆಡಿಯೊ ಮ್ಯಾಜಿಕ್ ಎರೇಸರ್, ಬೆಸ್ಟ್ ಟೇಕ್ ಮತ್ತು ಹೆಚ್ಚಿನವುಗಳಿವೆ. ಈ ಫೋನ್ 8GB LPDDR5x RAM ಮತ್ತು 256GB ವರೆಗಿನ UFS 3.1 ಸಂಗ್ರಹಣೆಯನ್ನು ನೀಡುತ್ತದೆ.

ಎಸ್ಸೆಮ್ಮೆಸ್ ವಂಚಕರ ಹೆಡೆಮುರಿ ಕಟ್ಟಲು ಸಂಚಾರ್ ಸಾಥಿ ಚಕ್ಷು; ಬೆಂಗಳೂರಿನ ಅದಿತಿ ಚೋಪ್ರಾ ಕಥೆ ಕೇಳಿ

ವೈ-ಫೈ 6, ಬ್ಲೂಟೂತ್ 5.3, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಜಿಪಿಎಸ್ ನ್ಯಾವಿಗೇಷನ್ ಸಿಸ್ಟಮ್‌ಗಳಿಗೆ ಬೆಂಬಲ ನೀಡುತ್ತದೆ. ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ರೀಡರ್ ಮತ್ತು ಫೇಸ್ ಅನ್‌ಲಾಕ್ ಆಯ್ಕೆ ನೀಡಲಾಗಿದೆ. ಈ ಫೋನ್ 4,492mAh ಬ್ಯಾಟರಿಯಿಂದ ಬೆಂಬಲಿತವಾಗಿದೆ ಮತ್ತು 18W ವೈರ್ಡ್ ಫಾಸ್ಟ್ ಚಾರ್ಜಿಂಗ್, 7.5W ವೈರ್‌ಲೆಸ್ ಚಾರ್ಜಿಂಗ್​ನೊಂದಿಗೆ ಬರುತ್ತದೆ.

ಕ್ಯಾಮೆರಾಗಳಿಗೆ ಸಂಬಂಧಿಸಿದಂತೆ, ಹಿಂಭಾಗದಲ್ಲಿ 64-ಮೆಗಾಪಿಕ್ಸೆಲ್ (f/1.89 ದ್ಯುತಿರಂಧ್ರ) ಪ್ರಾಥಮಿಕ ಕ್ಯಾಮೆರಾ ಮತ್ತು 13-ಮೆಗಾಪಿಕ್ಸೆಲ್ (f/2.2 ಅಪರ್ಚರ್) ಅಲ್ಟ್ರಾವೈಡ್ ಕ್ಯಾಮೆರಾ ಇದೆ. ಸೆಲ್ಫಿಗಳಿಗಾಗಿ ನೀವು 13-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಸಹ ಪಡೆಯುತ್ತೀರಿ. ಆಂಡ್ರಾಯ್ಡ್ 14 ಮೂಲಕ್ ರನ್ ಆಗುತ್ತದೆ. ಏಳು ವರ್ಷಗಳ ಸಾಫ್ಟ್‌ವೇರ್ ಮತ್ತು ಭದ್ರತಾ ನವೀಕರಣಗಳನ್ನು ಪಡೆಯುವ ಭರವಸೆ ನೀಡಿದೆ.

ಹೆಚ್ಚಿನ ತಂತ್ರಜ್ಞಾನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ