Google Pixel Fold: ಗ್ಯಾಜೆಟ್ ಲೋಕಕ್ಕೆ ಬಂತು ಗೂಗಲ್ ಫೋಲ್ಡಿಂಗ್ ಫೋನ್
ಗೂಗಲ್ ಪಿಕ್ಸೆಲ್ ಸರಣಿಯ ಫೋನ್ಗಳು ಕ್ಯಾಮೆರಾಗೆ ಹೆಸರುವಾಸಿ, ಜತೆಗೆ ಶುದ್ಧ ಸಾಫ್ಟ್ವೇರ್, ಅತ್ಯುತ್ತಮ ಆ್ಯಂಡ್ರಾಯ್ಡ್ ಫೋನ್ ಬೇಕು ಎನ್ನುವವರಿಗೆ ಬೆಸ್ಟ್ ಆಯ್ಕೆಯಾಗಿದೆ. ಹೊಸ ಫೋನ್ ವಿಶೇಷತೆಗಳು ಇಲ್ಲಿವೆ.
ಗೂಗಲ್ ಕಂಪನಿಯ ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ ಫೋಲ್ಡ್ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಗೂಗಲ್ನ ವಾರ್ಷಿಕ ಡೆವಲಪರ್ ಸಮ್ಮೇಳನ, Google I/O 2023ರಲ್ಲಿ ಗೂಗಲ್ ಸಂಸ್ಥೆಯ ಚೊಚ್ಚಲ ಮಡಚುವ ಫೋನ್ ಅನಾವರಣಗೊಂಡಿದೆ. ಹಲವು ವಿಶೇಷತೆಗಳಿರುವ ಈ ಫೋನ್ನ ವಿನ್ಯಾಸ ಅದ್ಭುತವಾಗಿದ್ದು ಟೆಕ್ ಪ್ರಿಯರ ಕಣ್ಣು ಕುಕ್ಕುತ್ತಿದೆ. ಇದು ಟೆನ್ಸರ್ G2 ಚಿಪ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆಕರ್ಷಕ ಕ್ಯಾಮೆರಾ ಫೀಚರ್ಸ್ ಕೂಡ ನೀಡಲಾಗಿದೆ. ಗೂಗಲ್ ಪಿಕ್ಸೆಲ್ ಸರಣಿಯ ಫೋನ್ಗಳು ಕ್ಯಾಮೆರಾಗೆ ಹೆಸರುವಾಸಿ, ಜತೆಗೆ ಶುದ್ಧ ಸಾಫ್ಟ್ವೇರ್, ಅತ್ಯುತ್ತಮ ಆ್ಯಂಡ್ರಾಯ್ಡ್ ಫೋನ್ ಬೇಕು ಎನ್ನುವವರಿಗೆ ಬೆಸ್ಟ್ ಆಯ್ಕೆಯಾಗಿದೆ. ಹೊಸ ಫೋನ್ ವಿಶೇಷತೆಗಳು ಇಲ್ಲಿವೆ.
Follow Us
Latest Videos