ನಿಮಗಿದು ಗೊತ್ತೇ?. ಕಳೆದ 6 ತಿಂಗಳುಗಳಲ್ಲಿ ನೀವು ಯಾವಾಗ ಮತ್ತು ಯಾರೊಂದಿಗೆ ಕಾಲ್ನಲ್ಲಿ ಮಾತನಾಡಿದ್ದೀರಿ ಎಂಬುದನ್ನು ತಿಳಿದುಕೊಳ್ಳಬಹುದು. ನೀವು ರಿಲಯನ್ಸ್ ಜಿಯೋ (Reliance Jio) ಕಂಪನಿಯ ಬಳಕೆದಾರರಾಗಿದ್ದರೆ, ನಿಮ್ಮ ಕಾಲ್ ಹಿಸ್ಟರಿಯನ್ನು ತಿಳಿದುಕೊಳ್ಳಲು ಬಯಸಿದರೆ ಮೈ ಜಿಯೋ ಅಪ್ಲಿಕೇಶನ್ ನಿಮಗೆ ಸಹಾಯ ಮಾಡುತ್ತದೆ. ಆದರೆ ಈ ಅಪ್ಲಿಕೇಶನ್ ಅನ್ನು ಫೋನ್‌ನಲ್ಲಿ ಇನ್ಸ್ಟಾಲ್ ಮಾಡಿದ ನಂತರ, ನಿಮ್ಮ ಫೋನ್ ಬೇರೆ ಯಾವುದೇ ಮೂರನೇ ಕೈಗೆ ಸಿಗದಂತೆ ಜೋಪಾನವಾಗಿ ಕಾಪಾಡಿಕೊಳ್ಳಬೇಕು.
ಏಕೆಂದರೆ ನಿಮ್ಮ ಫೋನ್ ಬೇರೊಬ್ಬರ ಕೈಗೆ ಸಿಕ್ಕರೆ, ಆ ವ್ಯಕ್ತಿಯು ಈ ಅಪ್ಲಿಕೇಶನ್‌ನ ಸಹಾಯದಿಂದ ಕಳೆದ 6 ತಿಂಗಳ ನಿಮ್ಮ ಕಾಲ್ ಹಿಸ್ಟರಿಯನ್ನು ಕದಿಯಬಹುದು. ನೀವು ಯಾವ ದಿನ ಯಾರಿಗೆ ಕಾಲ್ ಮಾಡಿದ್ದೀರಿ ಅಥವಾ ಯಾರ ಕರೆ ಸ್ವೀಕರಿಸಿದ್ದೀರಿ ಎಂಬ ಎಲ್ಲಾ ವಿವರಗಳು ಹಿಸ್ಟರಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ಅಷ್ಟೇ ಅಲ್ಲ, ಈ ಆ್ಯಪ್‌ನ ಕಾಲ್ ಹಿಸ್ಟರಿ ನೀವು ಯಾವ ನಂಬರ್‌ಗೆ ಎಷ್ಟು ಮಾತನಾಡಿದ್ದೀರಿ ಎಂಬುದನ್ನು ಸಹ ಬಹಿರಂಗಪಡಿಸುತ್ತದೆ.
WhatsApp Ban: ಶಾಕಿಂಗ್: ಭಾರತದ ಬರೋಬ್ಬರಿ 71 ಲಕ್ಷಕ್ಕೂ ಅಧಿಕ ವಾಟ್ಸ್ಆ್ಯಪ್ ಅಕೌಂಟ್ ಬ್ಯಾನ್
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ