AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ವರ್ಷ 2024ಕ್ಕೆ ಜಿಯೋದಿಂದ ಬಂಪರ್ ಆಫರ್: ಪ್ರಿಪೇಯ್ಡ್ ಬಳಕೆದಾರರು ಫುಲ್ ಖುಷ್

Jio Happy New Offer 2024: ಜಿಯೋ ಹ್ಯಾಪಿ ನ್ಯೂ ಆಫರ್ 2024: ನೀವು ರಿಲಯನ್ಸ್ ಜಿಯೋದ ಪ್ರಿಪೇಯ್ಡ್ ಬಳಕೆದಾರರಾಗಿದ್ದರೆ, ಕಂಪನಿಯು ನಿಮಗಾಗಿ ಉತ್ತಮ ಕೊಡುಗೆಯನ್ನು ತಂದಿದೆ. ಹೊಸ ವರ್ಷಕ್ಕೂ ಮುನ್ನ ಕಂಪನಿಯು ಬಳಕೆದಾರರಿಗೆ ಹೊಸ ವರ್ಷದ ಉಡುಗೊರೆಯನ್ನು ಘೋಷಿಸಿದೆ, ಏನು ಆಫರ್?, ಇದರ ಲಾಭವೇನು?. ಇಲ್ಲಿದೆ ಮಾಹಿತಿ.

ಹೊಸ ವರ್ಷ 2024ಕ್ಕೆ ಜಿಯೋದಿಂದ ಬಂಪರ್ ಆಫರ್: ಪ್ರಿಪೇಯ್ಡ್ ಬಳಕೆದಾರರು ಫುಲ್ ಖುಷ್
Jio New Year 2024 offer
Vinay Bhat
|

Updated on: Dec 24, 2023 | 12:25 PM

Share

ಹೊಸ ವರ್ಷ 2024 ಬರುವ ಮುನ್ನವೇ ದೇಶದ ನಂಬರ್ ಒನ್ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ (Reliance Jio) ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಹೊಸ ವರ್ಷದ ಉಡುಗೊರೆಗಳನ್ನು ನೀಡಿದೆ. ಕಂಪನಿಯು ತನ್ನ ದೀರ್ಘಾವಧಿಯ ರೂ. 2999 ಪ್ರಿಪೇಯ್ಡ್ ಯೋಜನೆಯೊಂದಿಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ. ನೀವು ರಿಲಯನ್ಸ್ ಜಿಯೋ ಬಳಕೆದಾರರಾಗಿದ್ದರೆ ಮತ್ತು ದೀರ್ಘಾವಧಿ ವ್ಯಾಲಿಡಿಟಯ ಯೋಜನೆಯನ್ನು ಹುಡುಕುತ್ತಿದ್ದರೆ ಜಿಯೋದ ಈ 2999 ರೂ. ಯೋಜನೆಯು ತುಂಬಾ ಉಪಯುಕ್ತವಾಗಿರುತ್ತದೆ.

ಜಿಯೋದ ರೂ. 2999 ಪ್ಲಾನ್‌ನೊಂದಿಗೆ ಹೊಸ ವರ್ಷದ ಕೊಡುಗೆಯ ಅಡಿಯಲ್ಲಿ ಯಾವ ಪ್ರಯೋಜನಗಳನ್ನು ಪಡೆಯಬಹುದು?. ಇಲ್ಲಿದೆ ಮಾಹಿತಿ.

ರಿಲಯನ್ಸ್ ಜಿಯೋದ 2999 ರೂ. ಯೋಜನೆಯು 365 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ, ಆದರೆ ಜಿಯೋದ ಹೊಸ ವರ್ಷದ ಕೊಡುಗೆಯ ಅಡಿಯಲ್ಲಿ, ರೂ. 2999 ಯೋಜನೆಯನ್ನು ಖರೀದಿಸುವ ಬಳಕೆದಾರರಿಗೆ ಈಗ 24 ದಿನಗಳ ಹೆಚ್ಚುವರಿ ಮಾನ್ಯತೆಯ ಲಾಭವನ್ನು ನೀಡಲಾಗುತ್ತಿದೆ.

ಇದನ್ನೂ ಓದಿ
Image
ಒಂದೇ ಇಯರ್‌ಬಡ್‌ಗಳಲ್ಲಿ 2 ಹಾಡುಗಳನ್ನು ಕೇಳುವುದು ಹೇಗೆ?: ಇಲ್ಲಿದೆ ಟ್ರಿಕ್
Image
ಭಾರತದಲ್ಲಿ ಬಜೆಟ್ ಬೆಲೆಗೆ ಒಪ್ಪೋ A59 5G ಫೋನ್ ರಿಲೀಸ್
Image
100W ವೇಗದ ಚಾರ್ಜರ್, ಅದ್ಭುತ ಕ್ಯಾಮೆರಾ: ಹಾನರ್​ನಿಂದ ಬಂತು ಹೊಸ ​ಫೋನ್
Image
ಭಾರತದಲ್ಲಿ ಪೋಕೋ M6 5G ಬಿಡುಗಡೆ: ಇದು ಕಡಿಮೆ ಬೆಲೆಯ ಬೆಸ್ಟ್ 5ಜಿ ಫೋನ್

ಸ್ವದೇಶಿ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಲಾವಾದಿಂದ ಬಂದಿದೆ ಹೊಸ ಲಾವಾ ಸ್ಟೋರ್ಮ್ 5G: ಹೇಗಿದೆ ಗೊತ್ತೇ?

ಇದೀಗ 2999 ರೂ. ಗಳ ಈ ಜಿಯೋ ಪ್ರಿಪೇಯ್ಡ್ ಯೋಜನೆಯೊಂದಿಗೆ, ಬಳಕೆದಾರರು ಒಟ್ಟು 389 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಪಡೆಯಬಹುದು (365 ದಿನಗಳು ಮತ್ತು 24 ದಿನಗಳ ಹೆಚ್ಚುವರಿ ಮಾನ್ಯತೆ). ಅದರ ಪ್ರಕಾರ ನೋಡಿದರೆ, ಈ ಯೋಜನೆಯಲ್ಲಿ ನಿಮ್ಮ ದೈನಂದಿನ ಖರ್ಚು 7.70 ರೂ. ಆಗಿದೆ.

ಇದರ ಹೊರತಾಗಿ, ಈ ಯೋಜನೆಯಲ್ಲಿ ಲಭ್ಯವಿರುವ ಇತರ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಮೊದಲಿನಂತೆ, ಈ ಯೋಜನೆಯು ನಿಮಗೆ ಪ್ರತಿದಿನ 2.5 GB ಹೈ ಸ್ಪೀಡ್ ಡೇಟಾವನ್ನು ನೀಡುತ್ತದೆ. ಡೇಟಾ ಮಿತಿ ಮುಗಿದ ನಂತರ, ವೇಗವು 64 Kbps ಗೆ ಕಡಿಮೆಯಾಗುತ್ತದೆ. ನಿಮ್ಮ ಪ್ರದೇಶದಲ್ಲಿ ಜಿಯೋ 5G ಸೇವೆ ಲಭ್ಯವಿದ್ದರೆ, ಈ ಯೋಜನೆಯೊಂದಿಗೆ ನೀವು ಅನಿಯಮಿತ 5G ಡೇಟಾದ ಪ್ರಯೋಜನವನ್ನು ಪಡೆಯಬಹುದು. ಡೇಟಾದ ಹೊರತಾಗಿ, ಅನಿಯಮಿತ ಉಚಿತ ಧ್ವನಿ ಕರೆ ಮತ್ತು ಪ್ರತಿದಿನ 100 SMS ಗಳ ಪ್ರಯೋಜನವನ್ನು ನೀಡುತ್ತದೆ.

ಜಿಯೋ 2999 ರೂ. ಯೋಜನೆಯೊಂದಿಗೆ, ನಿಮಗೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ಗೆ ಉಚಿತ ಪ್ರವೇಶವನ್ನು ನೀಡಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ ರೂ. 2999 ಪ್ಲಾನ್‌ನೊಂದಿಗೆ ನಿಮಗೆ ಜಿಯೋ ಸಿನಿಮಾದ ಪ್ರೀಮಿಯಂ ಚಂದಾದಾರಿಕೆಯನ್ನು ನೀಡಲಾಗುವುದಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ