ಭಾರತದಲ್ಲಿ ಪೋಕೋ M6 5G ಸ್ಮಾರ್ಟ್​ಫೋನ್ ಬಿಡುಗಡೆ: ಇದು ಕಡಿಮೆ ಬೆಲೆಯ ಬೆಸ್ಟ್ 5ಜಿ ಫೋನ್

Poco M6 5G Launched in India: ಪ್ರಸಿದ್ಧ ಪೋಕೋ ಸಂಸ್ಥೆ ಕೈಗೆಟಕುವ ಬೆಲೆಗೆ ಹೊಸ ಪೋಕೋ M6 5G ಸ್ಮಾರ್ಟ್​ಫೋನ್ ಅನ್ನು ದೇಶದಲ್ಲಿ ರಿಲೀಸ್ ಮಾಡಿದೆ. ಇದರಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್, 5,000mAh ಬ್ಯಾಟರಿ ಸೇರಿದಂತೆ ಆಕರ್ಷಕ ಫೀಚರ್​ಗಳನ್ನು ನೀಡಲಾಗಿದೆ. ಬೆಲೆ, ವಿಶೇಷತೆ ಕುರಿತ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಪೋಕೋ M6 5G ಸ್ಮಾರ್ಟ್​ಫೋನ್ ಬಿಡುಗಡೆ: ಇದು ಕಡಿಮೆ ಬೆಲೆಯ ಬೆಸ್ಟ್ 5ಜಿ ಫೋನ್
Poco M6 5G
Follow us
Vinay Bhat
|

Updated on:Dec 23, 2023 | 12:39 PM

2023ನೇ ವರ್ಷ ಮುಗಿಯುತ್ತಿದ್ದೆ ಎನ್ನುವ ಹೊತ್ತಿಗೆ ಪ್ರಸಿದ್ಧ ಸ್ಮಾರ್ಟ್​ಫೋನ್ ತಯಾರಿಕ ಸಂಸ್ಥೆ ಪೋಕೋ ಭಾರತದಲ್ಲಿ ಒಂದರ ಹಿಂದೆ ಒಂದರಂತೆ ಆಕರ್ಷಕ ಫೋನುಗಳನ್ನು ಅನಾವರಣ ಮಾಡುತ್ತಿದೆ. ಮೊನ್ನೆಯಷ್ಟೆ ಪೋಕೋ C65 ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ್ದ ಕಂಪನಿ ಇದೀಗ ದಿಢೀರ್ ಆಗಿ ಮತ್ತೊಂದು ಹೊಸ ಪೋಕೋ M6 5G (Poco M6 5G) ಅನ್ನು ದೇಶದಲ್ಲಿ ರಿಲೀಸ್ ಮಾಡಿದೆ. ಇದು ಕೈಗೆಟುಕುವ 5G ಫೋನ್ ಎಂದು ಕಂಪನಿ ಹೇಳಿಕೊಂಡಿದೆ. ಇದರಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್, 5,000mAh ಬ್ಯಾಟರಿ ಸೇರಿದಂತೆ ಆಕರ್ಷಕ ಫೀಚರ್​ಗಳನ್ನು ನೀಡಲಾಗಿದೆ. ಹಾಗಾದರೆ ಭಾರತದಲ್ಲಿ ಪೋಕೋ M6 5G ಬೆಲೆ, ವಿಶೇಷತೆ ಕುರಿತ ಮಾಹಿತಿ ನೋಡೋಣ.

ಭಾರತದಲ್ಲಿ ಪೋಕೋ M6 5G ಬೆಲೆ, ಲಭ್ಯತೆ:

ಗ್ಯಾಲಕ್ಟಿಕ್ ಬ್ಲ್ಯಾಕ್ ಮತ್ತು ಓರಿಯನ್ ಬ್ಲೂ ಬಣ್ಣಗಳಲ್ಲಿ ಬಿಡುಗಡೆ ಆಗಿರುವ ಪೋಕೋ M6 5G ಒಟ್ಟು ಮೂರು ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಇದರ 4GB RAM + 128GB ಸ್ಟೋರೇಜ್ ಕಾನ್ಫಿಗರೇಶನ್‌ಗೆ 10,499 ರೂ. ಇದೆ. ಅಂತೆಯೆ 6GB + 128GB ಮತ್ತು 8GB + 256GB ರೂಪಾಂತರಗಳ ಬೆಲೆ ಕ್ರಮವಾಗಿ ರೂ. 11,499 ಮತ್ತು 13,499 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಡಿಸೆಂಬರ್ 26 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಲು ಲಭ್ಯವಿರುತ್ತದೆ. ಮಾರಾಟದ ಸಮಯದಲ್ಲಿ ICICI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸುವ ಮೂಲಕ 1,000 ರೂ. ಕ್ಯಾಶ್‌ಬ್ಯಾಕ್ ಕೊಡುಗೆ ಪಡೆಯಬಹುದು.

ಬಜೆಟ್ ಪ್ರಿಯರ ಬಹುನಿರೀಕ್ಷಿತ ಫೋನ್ ಪೋಕೋ C65 ಇಂದಿನಿಂದ ಖರೀದಿಗೆ ಲಭ್ಯ

ಇದನ್ನೂ ಓದಿ
Image
ಸ್ವದೇಶಿ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಲಾವಾದಿಂದ ಬಂದಿದೆ ಹೊಸ ಲಾವಾ ಸ್ಟೋರ್ಮ್
Image
ಜಾಗತಿಕವಾಗಿ ಎಕ್ಸ್​​ ಡೌನ್: ವರದಿ ಮಾಡಿದ ಸಾವಿರಾರು X ಬಳಕೆದಾರರು
Image
ಅಮೆರಿಕದಲ್ಲಿ ಆ್ಯಪಲ್ ಸ್ಮಾರ್ಟ್​ವಾಚ್​ಗೆ ನಿಷೇಧ ಸಾಧ್ಯತೆ; ಏನು ಕಾರಣ?
Image
ಹಾನರ್​ನಿಂದ ಬಜೆಟ್ ಬೆಲೆಗೆ 108MP ಕ್ಯಾಮೆರಾದ ಹಾನರ್ X8b ಬಿಡುಗಡೆ

ಪೋಕೋ M6 5G ಫೀಚರ್ಸ್:

ಪೋಕೋ M6 5G ಫೋನ್​ನಲ್ಲಿ 6.74-ಇಂಚಿನ HD+ (1,600 x 720 ಪಿಕ್ಸೆಲ್‌ಗಳು) ಡಿಸ್‌ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್, 180Hz ನ ಟಚ್ ಸ್ಯಾಂಪ್ಲಿಂಗ್ ದರ ಮತ್ತು G Corning G3 3 ರಕ್ಷಣೆ ನೀಡಲಾಗಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 6100+ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುವ ಈ ಫೋನ್ ಮಾಲಿ-G57 MC2 GPU ಜೊತೆಗೆ 8GB LPDDR4X RAM ಮತ್ತು 256GB ವರೆಗಿನ UFS 2.2 ಅಂತರ್ಗತ ಸಂಗ್ರಹಣೆಯೊಂದಿಗೆ ಬರುತ್ತದೆ. RAM ಅನ್ನು ಹೆಚ್ಚುವರಿ 8GB ವರೆಗೆ ವಿಸ್ತರಿಸಬಹುದು. ಆಂಡ್ರಾಯ್ಡ್ 13-ಆಧಾರಿತ MIUI 14 ಮೂಲಕ ರನ್ ಆಗುತ್ತದೆ.

ಕ್ಯಾಮೆರಾ ವಿಭಾಗದಲ್ಲಿ, ಪೋಕೋ M6 5G 50-ಮೆಗಾಪಿಕ್ಸೆಲ್ AI-ಬೆಂಬಲಿತ ಪ್ರಾಥಮಿಕ ಮತ್ತು ಹಿಂಭಾಗದಲ್ಲಿ ಸೆಕೆಂಡರಿ ಸಂವೇದಕವನ್ನು ಹೊಂದಿದೆ. ಮುಂಭಾಗದ ಕ್ಯಾಮೆರಾವು 5-ಮೆಗಾಪಿಕ್ಸೆಲ್ ಸಂವೇದಕದಿಂದ ಕೂಡ ಕೂಡಿದೆ. 18W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಭದ್ರತೆಗಾಗಿ, ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಫೋನ್ 3.5 ಎಂಎಂ ಆಡಿಯೊ ಜಾಕ್ ಅನ್ನು ಸಹ ಹೊಂದಿದೆ. ಇದು 5G, 4G LTE, Wi-Fi 5, ಬ್ಲೂಟೂತ್ 5.3, GPS ಮತ್ತು USB ಟೈಪ್-C ಸಂಪರ್ಕವನ್ನು ಬೆಂಬಲಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:38 pm, Sat, 23 December 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ