100W ವೇಗದ ಚಾರ್ಜರ್, ಅದ್ಭುತ ಕ್ಯಾಮೆರಾ: ಹಾನರ್ನಿಂದ ಬಂತು ಹೊಚ್ಚಹೊಸ ಸ್ಮಾರ್ಟ್‌ಫೋನ್
Honor 90 GT Launched: ಹಾನರ್ 90 ಸರಣಿಯ ಅಡಿಯಲ್ಲಿ ಹಾನರ್ 90 GT ಸ್ಮಾರ್ಟ್‌ಫೋನ್ ರಿಲೀಸ್ ಆಗಿದೆ. ಈ ಫೋನ್ 100W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಭದ್ರತೆಗಾಗಿ, ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.
ಪ್ರಸಿದ್ಧ ಹಾನರ್ ಕಂಪನಿ ನೂತನ ಸ್ಮಾರ್ಟ್ಫೋನ್ನೊಂದಿಗೆ ಮಾರುಕಟ್ಟೆಗೆ ಬಂದಿದೆ. ಹಾನರ್ 90 ಸರಣಿಯ ಅಡಿಯಲ್ಲಿ ಹಾನರ್ 90 GT (Honor 90 GT) ಫೋನನ್ನು ಅನಾವರಣ ಮಾಡಿದೆ. ಸಾಕಷ್ಟು ಬಲಿಷ್ಠವಾಗಿರುವ ಈ ಸ್ಮಾರ್ಟ್ಫೋನ್ನಲ್ಲಿ ಕ್ವಾಲ್ಕಂ ಸ್ನಾಪ್‌ಡ್ರಾಗನ್ 8 Gen 2 SoC ಮತ್ತು 100W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇದೆ. ಅತ್ಯುತ್ತಮ ಕ್ಯಾಮೆರಾ ಆಯ್ಕೆ ಕೂಡ ನೀಡಲಾಗಿದೆ. ಪ್ರಸ್ತುತ ಚೀನಾದಲ್ಲಿ ರಿಲೀಸ್ ಆಗಿರುವ ಈ ಸ್ಮಾರ್ಟ್‌ಫೋನ್, ಸದ್ಯದಲ್ಲೇ ಭಾರತಕ್ಕೂ ಬರಲಿದೆ. ಹಾನರ್ 90 GT ಫೋನಿನ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.
ಹಾನರ್ 90 GT ಬೆಲೆ, ಲಭ್ಯತೆ:
ಹಾನರ್ 90 GT ಸ್ಮಾರ್ಟ್ಫೋನ್ನ 12GB + 256GB ಆಯ್ಕೆಗೆ CNY 2,599 (ಭಾರತದಲ್ಲಿ ಸುಮಾರಿ ರೂ. 30,300), 16GB + 256GB ಮತ್ತು 12GB + 512GB ರೂಪಾಂತರಕ್ಕೆ ಕ್ರಮವಾಗಿ CNY 2,899 (ಸರಿಸುಮಾರು ರೂ. 33,800) ಹಾಗೂ CNY 3,199 (ಸರಿಸುಮಾರು ರೂ. 37,300). ಟಾಪ್ ಮಾಡೆಲ್ 24GB + 1TB ರೂಪಾಂತರದ ಬೆಲೆ CNY 3,699 (ಸುಮಾರು ರೂ. 43,100).
ಹಾನರ್ ಚೀನಾ ವೆಬ್‌ಸೈಟ್ ಮೂಲಕ ಈ ಫೋನ್ ಡಿಸೆಂಬರ್ 26 ರಿಂದ ಮಾರಾಟವಾಗಲಿದೆ. ಹೊಸದಾಗಿ ಬಿಡುಗಡೆಯಾದ ಹಾನರ್ ಮಾದರಿಯನ್ನು ಬರ್ನ್ ಫಾಸ್ಟ್ ಗೋಲ್ಡ್, ಜಿಟಿ ಬ್ಲೂ ಮತ್ತು ಸ್ಟಾರ್ ಬ್ಲ್ಯಾಕ್ (ಚೀನೀ ಭಾಷೆಯಿಂದ ಅನುವಾದಿಸಲಾಗಿದೆ) ಬಣ್ಣ ಆಯ್ಕೆಗಳಲ್ಲಿ ನೀಡಲಾಗುತ್ತದೆ.
ಹಾನರ್ನಿಂದ ಬಜೆಟ್ ಬೆಲೆಗೆ 108MP ಕ್ಯಾಮೆರಾದ ಹಾನರ್ X8b ಬಿಡುಗಡೆ
ಹಾನರ್ 90 GT ಫೀಚರ್ಸ್:
ಡ್ಯುಯಲ್ ಸಿಮ್ (ನ್ಯಾನೋ) ಹಾನರ್ 90 GT ಆಂಡ್ರಾಯ್ಡ್ 13-ಆಧಾರಿತ MagicOS 7.2 ಮೂಲಕ ರನ್ ಆಗುತ್ತದೆ. ಇದು 6.7-ಇಂಚಿನ ಪೂರ್ಣ-HD+ (2,664 x 1,200 ಪಿಕ್ಸೆಲ್‌ಗಳು) OLED ಪ್ಯಾನೆಲ್, 120Hz ರಿಫ್ರೆಶ್ ದರ ಹೊಂದಿದೆ. 4nm ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 Gen 2 ಚಿಪ್‌ಸೆಟ್ ಅನ್ನು Adreno 740 GPU ಜೊತೆಗೆ ಜೋಡಿಸಲಾಗಿದೆ, 24GB RAM ಮತ್ತು 1TB ವರೆಗೆ ಅಂತರ್ಗತ ಸಂಗ್ರಹಣೆಯನ್ನು ಹೊಂದಿದೆ.
ಕ್ಯಾಮೆರಾ ವಿಚಾರಕ್ಕೆ ಬಂದರೆ, ಹಾನರ್ 90 GT ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದೆ. ಇದು 50-ಮೆಗಾಪಿಕ್ಸೆಲ್ IMX800 ಪ್ರಾಥಮಿಕ ಸಂವೇದಕ ಮತ್ತು 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಜೊತೆಗೆ LED ಫ್ಲಾಷ್ ಅನ್ನು ಒಳಗೊಂಡಿದೆ. ಈ ಹ್ಯಾಂಡ್‌ಸೆಟ್‌ನ ಮುಂಭಾಗದ ಕ್ಯಾಮೆರಾ 16-ಮೆಗಾಪಿಕ್ಸೆಲ್ ಸೆನ್ಸಾರ್ನಲ್ಲಿದೆ.
100W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಭದ್ರತೆಗಾಗಿ, ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಇದು 5G, 4G, Wi-Fi, ಬ್ಲೂಟೂತ್ 5.3, GPS ಮತ್ತು USB ಟೈಪ್-C ಸಂಪರ್ಕವನ್ನು ಸಹ ಬೆಂಬಲಿಸುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ