ಎರಡೇ ದಿನ ಬಾಕಿ: ಭಾರತಕ್ಕೆ ಬರುತ್ತಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ A15 5G, ಗ್ಯಾಲಕ್ಸಿ A25 5G
Galaxy A15 5G and Galaxy A25 5G Launch date: ಇದೇ ಡಿಸೆಂಬರ್ 26 ರಂದು ಭಾರತದಲ್ಲಿ ಗ್ಯಾಲಕ್ಸಿ A25 5G ಮತ್ತು ಗ್ಯಾಲಕ್ಸಿ A15 5G ಸ್ಮಾರ್ಟ್‌ಫೋನ್‌ಗಳು ಅನಾವರಣಗೊಳ್ಳಲಿದೆ. ಆದಾಗ್ಯೂ, ಈ ಫೋನಿನ ನಿಖರವಾದ ಬೆಲೆ, ಫೀಚರ್ಗಳನ್ನ ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.
ಕಳೆದ ಕೆಲವು ವಾರಗಳಿಂದ ಬಹಳಷ್ಟು ರೋಚಕತೆ ಸೃಷ್ಟಿಸಿರುವ ದಕ್ಷಿಣ ಕೊರಿಯಾ ಮೂಲದ ಸ್ಯಾಮ್ಸಂಗ್ (Samsung) ಕಂಪನಿ ಮುಂಬರುವ ಸ್ಮಾರ್ಟ್ಫೋನ್ನ ಬಿಡುಗಡೆ ದಿನಾಂಕ ಇದೀಗ ಬಹಿರಂಗವಾಗಿದೆ. ಗ್ಯಾಲಕ್ಸಿ A25 5G ಮತ್ತು ಗ್ಯಾಲಕ್ಸಿ A15 5G ಸ್ಮಾರ್ಟ್‌ಫೋನ್‌ಗಳ ಭಾರತ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಕಂಪನಿ ತಿಳಿಸಿದೆ. ಇದೇ ಡಿಸೆಂಬರ್ 26 ರಂದು ಭಾರತದಲ್ಲಿ ಈ ಎರಡೂ ಫೋನುಗಳು ಅನಾವರಣಗೊಳ್ಳಲಿದೆ. ಆದಾಗ್ಯೂ, ಈ ಫೋನಿನ ನಿಖರವಾದ ಬೆಲೆ, ಫೀಚರ್ಗಳನ್ನ ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.
ವಿಯೆಟ್ನಾಂನಲ್ಲಿ, ಗ್ಯಾಲಕ್ಸಿ A25 5Gಯ 6GB+128GB ಸ್ಟೋರೇಜ್ ರೂಪಾಂತರಕ್ಕೆ VND 65,90,000, ಅಂದರೆ ಭಾರತದಲ್ಲಿ ಸುಮಾರು ರೂ 22,650 ಎನ್ನಬಹುದು. ಗ್ಯಾಲಕ್ಸಿ A15 5Gಗೆ VND 62,89,800 (ಅಂದಾಜು ರೂ 21,500). ಭಾರತದಲ್ಲಿ ಈ ಫೋನುಗಳ ಬೆಲೆ 25,000 ರೂ. ಒಳಗೆ ಇರಬಹುದು ಎನ್ನಲಾಗಿದೆ.
100W ವೇಗದ ಚಾರ್ಜರ್, ಅದ್ಭುತ ಕ್ಯಾಮೆರಾ: ಹಾನರ್ನಿಂದ ಬಂತು ಹೊಚ್ಚಹೊಸ ಸ್ಮಾರ್ಟ್‌ಫೋನ್
ಗ್ಯಾಲಕ್ಸಿ A15 5G ಫೀಚರ್ಸ್ ಏನಿರಬಹುದು?:
ಡಿಸ್ಪ್ಲೇ: ಗ್ಯಾಲಕ್ಸಿ A15 5G ಫೋನ್ 6.5-ಇಂಚಿನ FHD+ ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದೆ, ಇದು ಇನ್ಫಿನಿಟಿ U ಡಿಸ್ಪ್ಲೇ ಆಗಿದ್ದು, 90Hz ರಿಫ್ರೆಶ್ ರೇಟ್ ದರದಿಂದ ಕೂಡಿದೆ.
ಚಿಪ್ಸೆಟ್: ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6100+ SoC ಮತ್ತು Mali G57-MP2 GPU ನಿಂದ ಚಾಲಿತವಾಗಿದೆ.
ಹಿಂಬದಿಯ ಕ್ಯಾಮೆರಾಗಳು: ಈ 5G ಫೋನ್‌ನಲ್ಲಿ ಹಿಂಬದಿಯ ಕ್ಯಾಮೆರಾ ಸೆಟಪ್ 50MP ಮುಖ್ಯ ಕ್ಯಾಮೆರಾ, 5MP ಅಲ್ಟ್ರಾವೈಡ್ ಆಂಗಲ್ ಸೆನ್ಸಾರ್ ಮತ್ತು 2MP ಡೆಪ್ತ್ ಲೆನ್ಸ್ನಿಂದ ಕೂಡಿದೆ.
ಸೆಲ್ಫಿ ಕ್ಯಾಮೆರಾ: ಮುಂಭಾಗದಲ್ಲಿ, ಗ್ಯಾಲಕ್ಸಿ A15 5G ಫೋನ್ 13MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಓಎಸ್: ಗ್ಯಾಲಕ್ಸಿ A15 5G ಆಂಡ್ರಾಯ್ಡ್ 13 ಆಧಾರಿತ One UI 5 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಬ್ಯಾಟರಿ: 25W ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ.
ಗ್ಯಾಲಕ್ಸಿ A25 5G ಫೀಚರ್ಸ್ ಏನಿರಬಹುದು?:
ಡಿಸ್ಪ್ಲೇ: ಗ್ಯಾಲಕ್ಸಿ A25 5G ಫೋನ್ 6.5-ಇಂಚಿನ FHD+ ಸೂಪರ್ AMOLED ಡಿಸ್ಪ್ಲೇ, ಇನ್ಫಿನಿಟಿ U ಡಿಸ್ಪ್ಪೇ, 120Hz ರಿಫ್ರೆಶ್ ರೇಟ್ ದರದಿಂದ ಕೂಡಿದೆ.
ಚಿಪ್ಸೆಟ್: ಈ ಸ್ಮಾರ್ಟ್‌ಫೋನ್ ಎಕ್ಸಿನೊಸ್ 1280 SoC ಮತ್ತು Mali-G68 MP4 GPU ನಿಂದ ಚಾಲಿತವಾಗಿದೆ.
ಹಿಂಬದಿಯ ಕ್ಯಾಮೆರಾಗಳು: ಹಿಂಬದಿಯ ಕ್ಯಾಮೆರಾ ಸೆಟಪ್ 50MP OIS ಪ್ರಾಥಮಿಕ ಕ್ಯಾಮೆರಾ, 8MP ಅಲ್ಟ್ರಾವೈಡ್ ಲೆನ್ಸ್ ಮತ್ತು 2MP ಡೆಪ್ತ್ ಲೆನ್ಸ್ ಅನ್ನು ಒಳಗೊಂಡಿದೆ.
ಸೆಲ್ಫಿ ಕ್ಯಾಮೆರಾ: ಗ್ಯಾಲಕ್ಸಿ A25 5G ಸೆಲ್ಫಿಗಾಗಿ 13MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಓಎಸ್: ಗ್ಯಾಲಕ್ಸಿ A25 5G ಆಂಡ್ರಾಯ್ಡ್ 13 ಆಧಾರಿತ One UI 5 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಬ್ಯಾಟರಿ: ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ ಮತ್ತು 25W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ