Instagram: 16 ವರ್ಷದೊಳಗಿನ ಮಕ್ಕಳಿಗಾಗಿ ಇನ್​ಸ್ಟಾಗ್ರಾಮ್​ನಲ್ಲಿ ಹೊಸ ನಿಯಮ: ಪೋಷಕರೇ ತಿಳಿದುಕೊಳ್ಳಿ

|

Updated on: Apr 12, 2025 | 11:10 AM

ಇನ್‌ಸ್ಟಾಗ್ರಾಮ್ ಮಾಡಿದ ಬದಲಾವಣೆಗಳ ಪ್ರಕಾರ, 16 ವರ್ಷದೊಳಗಿನ ಮಕ್ಕಳು ಇನ್‌ಸ್ಟಾಗ್ರಾಮ್‌ನಲ್ಲಿ ನೇರ ಪ್ರಸಾರ ಮಾಡಲು ಮೊದಲು ಪೋಷಕರ ಅನುಮತಿಯನ್ನು ಪಡೆಯಬೇಕು. ಅವರ ಅನುಮತಿಯಿಲ್ಲದೆ ಲೈವ್ ಆಯ್ಕೆಯನ್ನು ಬಳಸಲಾಗುವುದಿಲ್ಲ. ಪೋಷಕರ ಅನುಮತಿಯಿಲ್ಲದೆ 16 ವರ್ಷ ವಯಸ್ಸಿನವರಿಗೆ ನೇರ ಸಂದೇಶಗಳಲ್ಲಿ ನಗ್ನತೆಯನ್ನು ಹೊಂದಿರುವ ವಿಷಯವು ಗೋಚರಿಸುವುದಿಲ್ಲ.

Instagram: 16 ವರ್ಷದೊಳಗಿನ ಮಕ್ಕಳಿಗಾಗಿ ಇನ್​ಸ್ಟಾಗ್ರಾಮ್​ನಲ್ಲಿ ಹೊಸ ನಿಯಮ: ಪೋಷಕರೇ ತಿಳಿದುಕೊಳ್ಳಿ
Instagram
Follow us on

ಬೆಂಗಳೂರು (ಏ. 12): ಇನ್‌ಸ್ಟಾಗ್ರಾಮ್… ಈ ಸಾಮಾಜಿಕ ಮಾಧ್ಯಮ ವೇದಿಕೆಯ ಬಗ್ಗೆ ತಿಳಿದಿಲ್ಲದವರೇ ಇಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಇನ್‌ಸ್ಟಾಗ್ರಾಮ್ (Instagram) ಬಳಸುತ್ತಾರೆ. ಟಿಕ್ ಟಾಕ್ ನಿಷೇಧವಾದ ಬಳಿಕ ಇನ್‌ಸ್ಟಾಗ್ರಾಮ್ ನಂಬಲಾಗದಷ್ಟು ಜನಪ್ರಿಯವಾಯಿತು. ಆದರೆ, ಇದರಲ್ಲಿ ಬರುವ ವಿವಿಧ ರೀಲ್ಸ್, ವಿಡಿಯೋಗಳು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಇದನ್ನು ಗಮನಿಸಿದ ಇನ್‌ಸ್ಟಾಗ್ರಾಮ್, ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಇನ್ನು ಮುಂದೆ 16 ವರ್ಷದೊಳಗಿನ ಮಕ್ಕಳಿಗೆ ಲೈವ್ ಮಾಡಲು ಅವಕಾಶ ಇರುವುದಿಲ್ಲ.

ಇನ್‌ಸ್ಟಾಗ್ರಾಮ್ ಮಾಡಿದ ಬದಲಾವಣೆಗಳ ಪ್ರಕಾರ, 16 ವರ್ಷದೊಳಗಿನ ಮಕ್ಕಳು ಇನ್‌ಸ್ಟಾಗ್ರಾಮ್‌ನಲ್ಲಿ ನೇರ ಪ್ರಸಾರ ಮಾಡಲು ಮೊದಲು ಪೋಷಕರ ಅನುಮತಿಯನ್ನು ಪಡೆಯಬೇಕು. ಅವರ ಅನುಮತಿಯಿಲ್ಲದೆ ಲೈವ್ ಆಯ್ಕೆಯನ್ನು ಬಳಸಲಾಗುವುದಿಲ್ಲ. ಪೋಷಕರ ಅನುಮತಿಯಿಲ್ಲದೆ 16 ವರ್ಷ ವಯಸ್ಸಿನವರಿಗೆ ನೇರ ಸಂದೇಶಗಳಲ್ಲಿ ನಗ್ನತೆಯನ್ನು ಹೊಂದಿರುವ ವಿಷಯವು ಗೋಚರಿಸುವುದಿಲ್ಲ. ಮೆಟಾ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಇದನ್ನು ಬಹಿರಂಗಪಡಿಸಿದೆ.

16 ವರ್ಷದೊಳಗಿನ ಹದಿಹರೆಯದವರು ತಮ್ಮ ಪೋಷಕರ ಅನುಮತಿ ನೀಡದ ಹೊರತು ಇನ್​ಸ್ಟಾ ಲೈವ್ ಅನ್ನು ಬಳಸುವಂತಿಲ್ಲ. ನೇರ ಸಂದೇಶಗಳಲ್ಲಿ, “ನಗ್ನತೆಯಿರುವ ಚಿತ್ರಗಳನ್ನು ಮಸುಕುಗೊಳಿಸಲಾಗುತ್ತದೆ. ನೀವು ಅದನ್ನು ವೀಕ್ಷಿಸಲು ಪ್ರಯತ್ನಿಸಿದರೂ, ನಿಮಗೆ ಸಾಧ್ಯವಾಗುವುದಿಲ್ಲ. ಅದನ್ನು ಆಫ್ ಮಾಡಲು ಯಾವುದೇ ಆಯ್ಕೆಯಿಲ್ಲ,” ಎಂದು ಮೆಟಾ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ, ಇದಕ್ಕೆ ಪೋಷಕರ ಅನುಮತಿಯೂ ಬೇಕಾಗುತ್ತದೆ.

ಇದನ್ನೂ ಓದಿ
ಫೇಸ್‌ಬುಕ್‌ನಲ್ಲಿ ಲಾಕ್ ಆಗಿರುವ ಪ್ರೊಫೈಲ್‌ನ ಫೋಟೋ ನೋಡುವುದು ಹೇಗೆ?
ಫ್ಲಿಪ್​ಕಾರ್ಟ್​​ನಲ್ಲಿ ದಾಖಲೆಯ ಇಳಿಕೆ ಕಂಡ ಐಫೋನ್ 16 ಬೆಲೆ: ಎಷ್ಟು ನೋಡಿ
5600mAh ಬ್ಯಾಟರಿ-50MP ಸೆಲ್ಫಿ ಕ್ಯಾಮೆರಾ: ವಿವೋ V50e ಫೋನ್ ಬಿಡುಗಡೆ
ವಾಟ್ಸ್ಆ್ಯಪ್ ಬಳಕೆದಾರರಿಗೆ ಭಾರತ ಸರ್ಕಾರದಿಂದ ಪ್ರಮುಖ ಭದ್ರತಾ ಎಚ್ಚರಿಕೆ

16 ವರ್ಷದೊಳಗಿನ ಬಳಕೆದಾರರಿಗೆ ಸುರಕ್ಷತಾ ಕ್ರಮಗಳನ್ನು ಫೇಸ್‌ಬುಕ್ ಮತ್ತು ಮೆಸೆಂಜರ್‌ಗೆ ವಿಸ್ತರಿಸುತ್ತಿರುವುದಾಗಿ ಸಾಮಾಜಿಕ ಮಾಧ್ಯಮ ಕಂಪನಿ ಬಹಿರಂಗಪಡಿಸಿದೆ. ಸಾಮಾಜಿಕ ಮಾಧ್ಯಮಗಳು ಯುವಜನರ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಮೇಲ್ವಿಚಾರಣೆ ಮಾಡುತ್ತದೆ. ಪೋಷಕರು ತಮ್ಮ ಮಕ್ಕಳ ಆನ್‌ಲೈನ್ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ಹೆಚ್ಚಿನ ಆಯ್ಕೆಗಳನ್ನು ನೀಡಲು ಮೆಟಾ ಸೆಪ್ಟೆಂಬರ್‌ನಲ್ಲಿ ಇನ್‌ಸ್ಟಾಗ್ರಾಮ್‌ಗಾಗಿ ತನ್ನ ಹದಿಹರೆಯದ ಖಾತೆ ಎಂಬ ಪ್ರೊಗ್ರಾಂ ಪ್ರಾರಂಭಿಸಿತು.

Tech Tips: ಫೇಸ್‌ಬುಕ್‌ನಲ್ಲಿ ಲಾಕ್ ಆಗಿರುವ ಪ್ರೊಫೈಲ್‌ನ ಫೋಟೋ ನೋಡುವುದು ಹೇಗೆ?, ಇಲ್ಲಿದೆ ಟ್ರಿಕ್

ಸಾಮಾಜಿಕ ಮಾಧ್ಯಮದ ಹಾನಿಯಿಂದ ಮಕ್ಕಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಕಿಡ್ಸ್ ಆನ್‌ಲೈನ್ ಸೇಫ್ಟಿ ಆಕ್ಟ್ (KOSA) ನಂತಹ ಕಾನೂನುಗಳನ್ನು ಜಾರಿಗೆ ತರುವಲ್ಲಿ ಕೆಲವು ಯುಎಸ್ ಶಾಸಕರು ಬಹಳ ಸಕ್ರಿಯರಾಗಿರುವ ಸಮಯದಲ್ಲಿ ಮೆಟಾದಿಂದ ಈ ನಿರ್ಧಾರವು ಬಂದಿದೆ. ಮೆಟಾ ಜೊತೆಗೆ, ಟಿಕ್‌ಟಾಕ್ (ಬೈಟ್‌ಡ್ಯಾನ್ಸ್) ಮತ್ತು ಯೂಟ್ಯೂಬ್ (ಗೂಗಲ್) ನಂತಹ ಕಂಪನಿಗಳು ಸಾಮಾಜಿಕ ಮಾಧ್ಯಮ ವ್ಯಸನಕ್ಕೆ ಸಂಬಂಧಿಸಿದಂತೆ ಮಕ್ಕಳು ಮತ್ತು ಶಾಲೆಗಳಿಂದ ನೂರಾರು ಮೊಕದ್ದಮೆಗಳನ್ನು ಎದುರಿಸುತ್ತಿವೆ.

ಮಾಹಿತಿಯ ಪ್ರಕಾರ, 2023 ರಲ್ಲಿ, ಕ್ಯಾಲಿಫೋರ್ನಿಯಾ ಮತ್ತು ನ್ಯೂಯಾರ್ಕ್ ಸೇರಿದಂತೆ 33 ಯುಎಸ್ ರಾಜ್ಯಗಳು ಮೆಟಾ ತನ್ನ ಪ್ಲಾಟ್‌ಫಾರ್ಮ್‌ಗಳ ಅಪಾಯಕಾರಿ ಸ್ವರೂಪದ ಬಗ್ಗೆ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿ ಮೊಕದ್ದಮೆ ಹೂಡಿದ್ದವು.

ಸದ್ಯ ಮೆಟಾ ಪ್ಲಾಟ್‌ಫಾರ್ಮ್‌ಗಳು ಈಗ ಫೇಸ್‌ಬುಕ್ ಮತ್ತು ಮೆಸೆಂಜರ್‌ನಲ್ಲಿ ಕೂಡ ತನ್ನ ‘ಟೀನ್ ಅಕೌಂಟ್ಸ್’ ವೈಶಿಷ್ಟ್ಯವನ್ನು ಜಾರಿಗೆ ತಂದಿವೆ. ಆನ್‌ಲೈನ್ ಅಪಾಯಗಳಿಂದ ಯುವ ಬಳಕೆದಾರರನ್ನು ರಕ್ಷಿಸಲು ಮೆಟಾ ಏನನ್ನೂ ಮಾಡುತ್ತಿಲ್ಲ ಎಂದು ಬಹಳ ಸಮಯದಿಂದ ಆರೋಪ ಕೇಳಿ ಬಂದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ