WhatsApp Security Warning: ವಾಟ್ಸ್ಆ್ಯಪ್ ಬಳಕೆದಾರರಿಗೆ ಭಾರತ ಸರ್ಕಾರದಿಂದ ಪ್ರಮುಖ ಭದ್ರತಾ ಎಚ್ಚರಿಕೆ: ತಕ್ಷಣ ಹೀಗೆ ಮಾಡಿ
ದೇಶದಲ್ಲಿಯೇ 400 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಮೇಲೆ ವಂಚಕರ ಕಣ್ಣುಬಿದ್ದಿದೆ. ಸಿಇಆರ್‌ಟಿ-ಇನ್ ಏಪ್ರಿಲ್ 9 ರಂದು ತಮ್ಮ ಪಿಸಿಗಳಲ್ಲಿ ವಾಟ್ಸ್ಆ್ಯಪ್ನ ಡೆಸ್ಕ್‌ಟಾಪ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿರುವ ಬಳಕೆದಾರರಿಗೆ ‘ಹೆಚ್ಚಿನ ಅಪಾಯದ' ಎಚ್ಚರಿಕೆಯನ್ನು ನೀಡಿದೆ.

ಬೆಂಗಳೂರು (ಏ. 10): ವಾಟ್ಸ್ಆ್ಯಪ್ (WhatsApp) ಅನ್ನು ಡೆಸ್ಕ್ಟಾಪ್ನಲ್ಲಿ ಬಳಸುತ್ತಿರುವ ಬಳಕೆದಾರರು ಪ್ರಮುಖ ಭದ್ರತಾ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಭಾರತ ಸರ್ಕಾರವು ಎಚ್ಚರಿಕೆ ನೀಡಿದೆ. ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ ಅಥವಾ ಸಿಇಆರ್‌ಟಿ-ಇನ್ ಏಪ್ರಿಲ್ 9 ರಂದು ತಮ್ಮ ಪಿಸಿಗಳಲ್ಲಿ ವಾಟ್ಸ್ಆ್ಯಪ್ನ ಡೆಸ್ಕ್‌ಟಾಪ್ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿರುವ ಬಳಕೆದಾರರಿಗೆ ‘ಹೆಚ್ಚಿನ ಅಪಾಯದ’ ಎಚ್ಚರಿಕೆಯನ್ನು ನೀಡಿದೆ.
ಈ ಮೂಲಕ ದೇಶದಲ್ಲಿಯೇ 400 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಮೇಲೆ ವಂಚಕರ ಕಣ್ಣುಬಿದ್ದಿದೆ. ಈ ಭದ್ರತಾ ಎಚ್ಚರಿಕೆಯ ದೊಡ್ಡ ಅಪಾಯವೆಂದರೆ, ಹ್ಯಾಕರ್‌ಗಳು ನಿಮ್ಮ ಪಿಸಿಯ ದುರ್ಬಲತೆಗಳನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾದರೆ ವಾಟ್ಸ್ಆ್ಯಪ್ ಬಳಕೆದಾರರು ದೊಡ್ಡ ವಂಚನೆಗೆ ಗುರಿಯಾಗುತ್ತಾರೆ. ದಾಳಿಕೋರರು ವಾಟ್ಸ್ಆ್ಯಪ್ ಒಳಗೆ ಪ್ರವೇಶಿಸಿ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಬಹುದು, ಈ ಮೂಲಕ ದುರ್ಬಲತೆಯನ್ನು ಬಳಸಿಕೊಳ್ಳಬಹುದು ಎಂದು ಸರ್ಕಾರ ಹೇಳಿದೆ.
ಭದ್ರತಾ ಅಪಾಯವು ಹೆಚ್ಚಾಗಿ ವಿಂಡೋಸ್ ಪಿಸಿಗಳಲ್ಲಿ ಕಾರ್ಯನಿರ್ವಹಿಸುವ ವಾಟ್ಸ್ಆ್ಯಪ್ ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗೆ ಸಂಬಂಧಿಸಿದೆ. 2.2450.6 ಕ್ಕಿಂತ ಹಿಂದಿನ ವಿಂಡೋಸ್ ಆವೃತ್ತಿಗಳಿಗಾಗಿ ವಾಟ್ಸ್ಆ್ಯಪ್ ಡೆಸ್ಕ್‌ಟಾಪ್‌ಗಳು ಈ ವಂಚನೆ ದಾಳಿಗೆ ಗುರಿಯಾಗುತ್ತವೆ ಎಂದು ಸಂಸ್ಥೆ ಹೇಳಿದೆ.
ವಾಟ್ಸ್ಆ್ಯಪ್ ಸಾರ್ವಜನಿಕರಿಗೆ ವಿವರವಾದ ಭದ್ರತಾ ಸಲಹೆಯನ್ನು ನೀಡಿದ್ದು, ವಾಟ್ಸ್ಆ್ಯಪ್ ಡೆಸ್ಕ್‌ಟಾಪ್ ಅಪ್ಲಿಕೇಶನ್ ಬಳಕೆದಾರರು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ತಕ್ಷಣವೇ ಇತ್ತೀಚಿನ ಆವೃತ್ತಿಗೆ ನವೀಕರಿಸಲು ಸಲಹೆ ನೀಡಿದೆ:
- ನೀವು ಮೈಕ್ರೋಸಾಫ್ಟ್ ಸ್ಟೋರ್‌ನಿಂದ ವಾಟ್ಸ್ಆ್ಯಪ್ ಅನ್ನು ನವೀಕರಿಸಬಹುದು
- ಮೈಕ್ರೋಸಾಫ್ಟ್ ಸ್ಟೋರ್‌ನಲ್ಲಿ ವಾಟ್ಸ್ಆ್ಯಪ್ ಮೆಸೆಂಜರ್ ಅನ್ನು ಹುಡುಕಿ
- ಅಪ್ಡೇಟ್ ಮೇಲೆ ಕ್ಲಿಕ್ ಮಾಡಿ.
ಹಾಗೆಯೆ ಸರ್ಕಾರ ಆಪಲ್ ಬಳಕೆದಾರರಿಗೆ ಕೂಡ ಎಚ್ಚರಿಕೆ ನೀಡಿದೆ. ನೀವು ಐಫೋನ್, ಐಪ್ಯಾಡ್, ಮ್ಯಾಕ್, ಆಪಲ್ TV ಅಥವಾ ಆಪಲ್ Vision Pro ನಂತಹ ಯಾವುದೇ ಆಪಲ್ ಸಾಧನವನ್ನು ಬಳಸುತ್ತಿದ್ದರೆ, ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In), ಗಂಭೀರ ಸುರಕ್ಷತಾ ಎಚ್ಚರಿಕೆಯನ್ನು ನೀಡಿದೆ.
CERT-In ವರದಿಯ ಪ್ರಕಾರ, ಆಪಲ್ ಸಾಧನಗಳಲ್ಲಿ ಅನೇಕ ಅಪಾಯಕಾರಿ ಭದ್ರತಾ ದೋಷಗಳು ಕಂಡುಬಂದಿವೆ, ಇದರ ಲಾಭವನ್ನು ಪಡೆದುಕೊಂಡು ಹ್ಯಾಕರ್‌ಗಳು ನಿಮ್ಮ ಸಾಧನವನ್ನು ಪ್ರವೇಶಿಸಿ ನಿಮ್ಮ ಡೇಟಾವನ್ನು ಕದಿಯಬಹುದು. ಇಷ್ಟೇ ಅಲ್ಲ, ಹ್ಯಾಕರ್‌ಗಳು ನಿಮ್ಮ ಸಾಧನದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಪಡೆಯಬಹುದು. ‘CIVN-2025-0071’ ಎಂಬ ಸಲಹಾ ಸಂಸ್ಥೆಯಲ್ಲಿ ಈ ಎಚ್ಚರಿಕೆ ನೀಡಲಾಗಿದ್ದು, ಈ ನ್ಯೂನತೆಗಳು iOS, macOS, iPadOS, Safari ಬ್ರೌಸರ್ ಮತ್ತು ಇತರ ಆಪಲ್ ಸಾಫ್ಟ್‌ವೇರ್‌ಗಳ ಮೇಲೆ ಪರಿಣಾಮ ಬೀರಬಹುದು ಎಂದು ಅದು ಹೇಳುತ್ತದೆ. ಬಳಕೆದಾರರು ತಮ್ಮ ಸಾಧನಗಳನ್ನು ತಕ್ಷಣವೇ ನವೀಕರಿಸಲು CERT-In ಸಲಹೆ ನೀಡಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:24 am, Thu, 10 April 25