AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ವಾಟ್ಸ್ಆ್ಯಪ್​ನಲ್ಲಿ ನೀವು ಕಳುಹಿಸಿದ ಫೋಟೋವನ್ನು ಅವರು ಸೇವ್ ಮಾಡದಂತೆ ಮಾಡೋದು ಹೇಗೆ?

WhatsApp New Update: ವಾಟ್ಸ್ಆ್ಯಪ್ ನ ಈ ಹೊಸ ವೈಶಿಷ್ಟ್ಯದೊಂದಿಗೆ, ನೀವು ಕಳುಹಿಸಿದ ಫೋಟೋಗಳು ಮತ್ತು ವಿಡಿಯೋಗಳನ್ನು ಯಾರೂ ಉಳಿಸಲು ಸಾಧ್ಯವಾಗುವುದಿಲ್ಲ, ಮತ್ತು ಬಳಕೆದಾರರು ನಿಮ್ಮ ಅನುಮತಿಯಿಲ್ಲದೆ ಚಾಟ್ ಅನ್ನು ಬೇರೆ ಯಾವುದೇ ಬಳಕೆದಾರರಿಗೆ ಫಾರ್ವರ್ಡ್ ಮಾಡಲು ಕೂಡ ಸಾಧ್ಯವಾಗುವುದಿಲ್ಲ. ಇದನ್ನು ಟೆಸ್ಟ್ ಫ್ಲೈಟ್ ಬೀಟಾ ಕಾರ್ಯಕ್ರಮದ ಅಡಿಯಲ್ಲಿ ತರಲಾಗಿದೆ.

WhatsApp: ವಾಟ್ಸ್ಆ್ಯಪ್​ನಲ್ಲಿ ನೀವು ಕಳುಹಿಸಿದ ಫೋಟೋವನ್ನು ಅವರು ಸೇವ್ ಮಾಡದಂತೆ ಮಾಡೋದು ಹೇಗೆ?
Whatsapp (3)
Vinay Bhat
|

Updated on:Apr 08, 2025 | 12:33 PM

Share

WhatsApp New Update: ಬಳಕೆದಾರರ ಗೌಪ್ಯತೆಗೆ ಸಂಬಂಧಿಸಿದಂತೆ ವಾಟ್ಸ್​ಆ್ಯಪ್ ನಲ್ಲಿ (WhatsApp) ಮತ್ತೊಂದು ದೊಡ್ಡ ನವೀಕರಣ ಸದ್ಯದಲ್ಲೇ ಬರಲಿದೆ. ಈ ಹೊಸ ಅಪ್‌ಡೇಟ್ ಬಂದ ನಂತರ, ನಿಮ್ಮ ಅನುಮತಿಯಿಲ್ಲದೆ ಯಾರೂ ನೀವು ಕಳುಹಿಸಿದ ಫೋಟೋ ಅಥವಾ ವಿಡಿಯೋವನ್ನು ಅವರ ಮೊಬೈಲ್ ಫೋನ್‌ನಲ್ಲಿ ಸೇವ್ ಮಾಡಲು ಸಾಧ್ಯವಾಗುವುದಿಲ್ಲ. wabetainfo ಪ್ರಕಾರ, ಇದು ಹೊಸ iOS ಅಪ್‌ಡೇಟ್ ಆಗಿದ್ದು, ಇದನ್ನು ಟೆಸ್ಟ್ ಫ್ಲೈಟ್ ಬೀಟಾ ಕಾರ್ಯಕ್ರಮದ ಅಡಿಯಲ್ಲಿ ತರಲಾಗಿದೆ. ಇದು iOS ನಲ್ಲಿ ವಾಟ್ಸ್​ಆ್ಯಪ್ ನವೀಕರಣದ 25.10.10.70 ಆವೃತ್ತಿಯಾಗಿದೆ.

ಖಾಸಗಿ ವಿಚಾರದಲ್ಲಿ ಕಠಿಣವಾಗುತ್ತಿದೆ ವಾಟ್ಸ್​ಆ್ಯಪ್:

ವಾಟ್ಸ್​ಆ್ಯಪ್ ನ ಈ ಹೊಸ ವೈಶಿಷ್ಟ್ಯದೊಂದಿಗೆ, ನೀವು ಕಳುಹಿಸಿದ ಫೋಟೋಗಳು ಮತ್ತು ವಿಡಿಯೋಗಳನ್ನು ಯಾರೂ ಉಳಿಸಲು ಸಾಧ್ಯವಾಗುವುದಿಲ್ಲ, ಮತ್ತು ಬಳಕೆದಾರರು ನಿಮ್ಮ ಅನುಮತಿಯಿಲ್ಲದೆ ಚಾಟ್ ಅನ್ನು ಬೇರೆ ಯಾವುದೇ ಬಳಕೆದಾರರಿಗೆ ಫಾರ್ವರ್ಡ್ ಮಾಡಲು ಕೂಡ ಸಾಧ್ಯವಾಗುವುದಿಲ್ಲ. ವಾಟ್ಸ್​ಆ್ಯಪ್ ನ ಈ ಸುಧಾರಿತ ಚಾಟ್ ಗೌಪ್ಯತೆ ವೈಶಿಷ್ಟ್ಯ, ನಿಮ್ಮ ಚಾಟ್ ಹೆಚ್ಚಿನ ಮಟ್ಟಿಗೆ ಖಾಸಗಿಯಾಗುತ್ತದೆ. ವಾಟ್ಸ್​ಆ್ಯಪ್ ನ ಈ ನವೀಕರಣವು ಪ್ರಸ್ತುತ ಟೆಸ್ಟ್ ಫ್ಲೈಟ್ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಈ ವೈಶಿಷ್ಟ್ಯವನ್ನು ಪರೀಕ್ಷಿಸಿದ ನಂತರ, ಇದನ್ನು ಬಳಕೆದಾರರಿಗೆ ನೀಡಲಾಗುತ್ತದೆ.

ನಿಮ್ಮ ಫೋನ್‌ನಲ್ಲಿ ನೀವು ಅನುಮತಿಸಿದರೆ ಮಾತ್ರ ವಾಟ್ಸ್​ಆ್ಯಪ್ ಬಳಕೆದಾರರು ಈ ವೈಶಿಷ್ಟ್ಯವನ್ನು ಬಳಸಲು ಸಾಧ್ಯವಾಗುತ್ತದೆ. ನೀವು ಈ ಸೆಟ್ಟಿಂಗ್ ಅನ್ನು ಆನ್ ಮಾಡಲು ಬಯಸುವ ವ್ಯಕ್ತಿಗೆ, ಅವರ ಪ್ರೊಫೈಲ್‌ಗೆ ಹೋಗಿ ಮತ್ತು ಚಾಟ್ ಗೌಪ್ಯತೆ ಆಯ್ಕೆಯನ್ನು ಕ್ಲಿಕ್ ಮಾಡಿ. ಈ ವೈಶಿಷ್ಟ್ಯವು ವೈಯಕ್ತಿಕ ಚಾಟ್ ಮತ್ತು ಗ್ರೂಪ್ ಚಾಟ್ ಎರಡಕ್ಕೂ ಅನ್ವಯಿಸುತ್ತದೆ. ವಾಟ್ಸ್​ಆ್ಯಪ್ ನಲ್ಲಿರುವ ಈ ವೈಶಿಷ್ಟ್ಯವು ಕಣ್ಮರೆಯಾಗುತ್ತಿರುವ ಸಂದೇಶಗಳಂತಿದೆ. ಅದನ್ನು ಆನ್ ಮಾಡುವುದರಿಂದ, ನಿರ್ದಿಷ್ಟ ಸಮಯದ ನಂತರ ನಿಮ್ಮ ಚಾಟ್ ಸ್ವಯಂಚಾಲಿತವಾಗಿ ಅಳಿಸಲ್ಪಡುತ್ತದೆ.

ಇದನ್ನೂ ಓದಿ
Image
ಚಾರ್ಜ್ ಮಾಡೋವಾಗ ಫೋನ್ ಬಿಸಿಯಾಗುತ್ತಿದ್ದರೆ ಅದು ನಕಲಿ ಚಾರ್ಜರ್ ಆಗಿರಬಹುದು
Image
ಏರ್‌ಟೆಲ್-ಜಿಯೋ-ವಿಐ, ನಿಮ್ಮ ಪ್ರದೇಶದಲ್ಲಿ ಯಾವ ನೆಟ್‌ವರ್ಕ್ ಉತ್ತಮವಾಗಿದೆ?
Image
ಈಗ ವಾಟ್ಸ್ಆ್ಯಪ್​ನಲ್ಲೂ ರೀಲ್ಸ್ ನೋಡಬಹುದು: ಹೇಗೆ?
Image
ಇನ್‌ಸ್ಟಾದಂತೆ FB ಪ್ರೊಫೈಲ್‌ಗೆ ನಿಮ್ಮ ನೆಚ್ಚಿನ ಸಾಂಗ್ ಹಾಕೋದು ಹೇಗೆ?

Tech Tips: ಚಾರ್ಜ್ ಮಾಡೋವಾಗ ಫೋನ್ ಬಿಸಿಯಾಗುತ್ತಿದ್ದರೆ ಅದು ನಕಲಿ ಚಾರ್ಜರ್ ಆಗಿರಬಹುದು: ಹೀಗೆ ಗುರುತಿಸಿ

ವಾಟ್ಸ್​ಆ್ಯಪ್ ನಲ್ಲಿ ಚಾಟ್ ಲಾಕ್:

ವಾಟ್ಸ್​ಆ್ಯಪ್ ನಲ್ಲಿ ಚಾಟ್ ಲಾಕ್ ವೈಶಿಷ್ಟ್ಯವೂ ಲಭ್ಯವಿದೆ. ಇದರೊಂದಿಗೆ ನೀವು ನಿಮ್ಮ ಚಾಟ್ ಪಟ್ಟಿಯಿಂದ ಚಾಟ್ ಅನ್ನು ಹೈಡ್ ಮಾಡಬಹುದು. ಈ ಚಾಟ್ ಅನ್ನು ಹುಡುಕಲು, ನೀವು ಸರ್ಚ್ ಲಿಸ್ಟ್​ನಲ್ಲಿ ಪಾಸ್‌ವರ್ಡ್ ಅನ್ನು ನಮೂದಿಸಬೇಕಾಗುತ್ತದೆ, ಈ ಪಾಸ್​ವರ್ಡ್ ನೀವು ನಿಮ್ಮ ಚಾಟ್ ಹೈಡ್ ಮಾಡುವಾಗ ನಮೋದಿಸಬೇಕಾಗುತ್ತದೆ, ಪಾಸ್​ವರ್ಡ್ ಹಾಕಿದ ನಂತರವೇ ನೀವು ಹೈಡ್ ಮಾಡಿದ ಚಾಟ್ ಅನ್‌ಲಾಕ್ ಆಗುತ್ತದೆ.

ಇದರ ಜೊತೆಗೆ ವಾಟ್ಸ್​ಆ್ಯಪ್ ತನ್ನ ಬಳಕೆದಾರರಿಗೆ ಧ್ವನಿ ಕರೆಯನ್ನು ಸ್ವೀಕರಿಸುವ ಮೊದಲು ತಮ್ಮ ಮೈಕ್ರೊಫೋನ್ ಅನ್ನು ಮ್ಯೂಟ್ ಮಾಡಲು ಅನುಮತಿಸುತ್ತದೆ. ಇದರಿಂದ ಬಳಕೆದಾರರು ಕರೆಯನ್ನು ತೆಗೆದುಕೊಳ್ಳುವ ಮೊದಲು ತಮ್ಮ ಮೈಕ್ರೊಫೋನ್ ಅನ್ನು ಆಫ್ ಮಾಡಬಹುದು ಮತ್ತು ಕರೆಯನ್ನು ಮ್ಯೂಟ್ ಮಾಡಬಹುದು. ವಿಡಿಯೋ ಕರೆ ಸ್ವೀಕರಿಸುವ ಸಮಯದಲ್ಲಿ, “ನಿಮ್ಮ ವಿಡಿಯೋವನ್ನು ಆಫ್ ಮಾಡಿ” ಆಯ್ಕೆಯನ್ನು ಕಾಣಬಹುದು. ಇದರರ್ಥ ಕಾಲ್ ವಾಯ್ಸ್ ಮೋಡ್‌ನಲ್ಲಿ ಮಾತ್ರ ಬರುತ್ತದೆ. ಇದಲ್ಲದೆ, ಇದು ವಿಡಿಯೋ ಕರೆಗಳಿಗೆ ಎಮೋಜಿ ಪ್ರತಿಕ್ರಿಯೆಗಳನ್ನು ನೀಡುವ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:32 pm, Tue, 8 April 25

ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ