AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಇನ್‌ಸ್ಟಾಗ್ರಾಮ್‌ನಂತೆ ಫೇಸ್‌ಬುಕ್ ಪ್ರೊಫೈಲ್‌ಗೆ ನಿಮ್ಮ ನೆಚ್ಚಿನ ಸಾಂಗ್ ಹಾಕೋದು ಹೇಗೆ?

Facebook Profile Song: ಫೇಸ್‌ಬುಕ್‌ನಲ್ಲಿ ಇನ್‌ಸ್ಟಾಗ್ರಾಮ್‌ನ ಹಲವು ಜನಪ್ರಿಯ ವೈಶಿಷ್ಟ್ಯಗಳು ಲಭ್ಯವಿದೆ, ಆದರೆ ಹೆಚ್ಚಿನ ಬಳಕೆದಾರರಿಗೆ ಅವುಗಳ ಬಗ್ಗೆ ತಿಳಿದಿಲ್ಲ. ಇದೀಗ ಇನ್‌ಸ್ಟಾಗ್ರಾಮ್ ತರಹದ ವೈಶಿಷ್ಟ್ಯವನ್ನು ಫೇಸ್‌ಬುಕ್‌ಗೆ ಸೇರಿಸಲಾಗಿದೆ. ನಿಮ್ಮ ಫೇಸ್‌ಬುಕ್ ಪ್ರೊಫೈಲ್‌ಗೆ ನಿಮ್ಮ ನೆಚ್ಚಿನ ಹಾಡನ್ನು ಸಹ ನೀವು ಸೇರಿಸಬಹುದು. ಅದು ಹೇಗೆ?, ಇಲ್ಲಿದೆ ನೋಡಿ ಮಾಹಿತಿ.

Tech Tips: ಇನ್‌ಸ್ಟಾಗ್ರಾಮ್‌ನಂತೆ ಫೇಸ್‌ಬುಕ್ ಪ್ರೊಫೈಲ್‌ಗೆ ನಿಮ್ಮ ನೆಚ್ಚಿನ ಸಾಂಗ್ ಹಾಕೋದು ಹೇಗೆ?
Facebook
Vinay Bhat
|

Updated on:Apr 06, 2025 | 12:29 PM

Share

ಬೆಂಗಳೂರು (ಏ. 05): ಮೆಟಾ ಒಡೆತನದ ಫೇಸ್​ಬುಕ್ (Facebook) ಇತ್ತೀಚೆಗಷ್ಟೆ ತನ್ನ ಆ್ಯಪ್​ಗೆ ಒಂದು ಮೋಜಿನ ವೈಶಿಷ್ಟ್ಯವನ್ನು ಸೇರಿಸಿದೆ. ಈ ಫೀಚರ್​ನ ಸಹಾಯದಿಂದ, ನಿಮ್ಮ ನೆಚ್ಚಿನ ಹಾಡುಗಳನ್ನು ಇನ್​ಸ್ಟಾಗ್ರಾಮ್ ಪ್ರೊಫೈಲ್‌ಗೆ ಸೇರಿಸಿದಂತೆ ನಿಮ್ಮ ಫೇಸ್​ಬುಕ್ ಪ್ರೊಫೈಲ್‌ಗೆ ಕೂಡ ಹಾಡುಗಳನ್ನು ಸೇರಿಸಲು ನಿಮಗೆ ಸಾಧ್ಯವಾಗುತ್ತದೆ. ಇದರರ್ಥ ಯಾರಾದರೂ ನಿಮ್ಮ ಪ್ರೊಫೈಲ್ ಅನ್ನು ತೆರೆದ ತಕ್ಷಣ, ನೀವು ಸೆಟ್ ಮಾಡಿ ಹಾಡು ಪ್ಲೇ ಆಗಲು ಪ್ರಾರಂಭಿಸುತ್ತದೆ. ಈ ವೈಶಿಷ್ಟ್ಯವನ್ನು ಮೊದಲಿಗೆ ಇನ್‌ಸ್ಟಾಗ್ರಾಮ್​ನಲ್ಲಿ ಬಿಡುಗಡೆ ಮಾಡಲಾಯಿತು. ಇದನ್ನು ಅನೇಕ ಮಂದಿ ಇಷ್ಟಪಟ್ಟರು. ಪ್ರತಿಯೊಬ್ಬರೂ ತಮ್ಮ ಪ್ರೊಫೈಲ್‌ಗೆ ತಮ್ಮ ಆಯ್ಕೆಯ ಹಾಡನ್ನು ಸೇರಿಸಲು ಪ್ರಾರಂಭಿಸಿದರು.

ಇದೀಗ ಇನ್‌ಸ್ಟಾಗ್ರಾಮ್ ತರಹದ ವೈಶಿಷ್ಟ್ಯವನ್ನು ಫೇಸ್‌ಬುಕ್‌ಗೆ ಸೇರಿಸಲಾಗಿದೆ. ನಿಮ್ಮ ಫೇಸ್‌ಬುಕ್ ಪ್ರೊಫೈಲ್‌ಗೆ ನಿಮ್ಮ ನೆಚ್ಚಿನ ಹಾಡನ್ನು ಸಹ ನೀವು ಸೇರಿಸಬಹುದು. ಫೇಸ್‌ಬುಕ್‌ನಲ್ಲಿ ಇನ್‌ಸ್ಟಾಗ್ರಾಮ್‌ನ ಹಲವು ಜನಪ್ರಿಯ ವೈಶಿಷ್ಟ್ಯಗಳು ಲಭ್ಯವಿದೆ, ಆದರೆ ಹೆಚ್ಚಿನ ಬಳಕೆದಾರರಿಗೆ ಅವುಗಳ ಬಗ್ಗೆ ತಿಳಿದಿಲ್ಲ. ಆದಾಗ್ಯೂ, ನಿಮ್ಮ ಫೇಸ್‌ಬುಕ್ ಪ್ರೊಫೈಲ್ ನಲ್ಲಿ ನೀವು ಈ ಹಾಡಿನ ವೈಶಿಷ್ಟ್ಯವನ್ನು ಸುಲಭವಾಗಿ ಬಳಸಬಹುದು. ಯಾರಾದರೂ ನಿಮ್ಮ ಪ್ರೊಫೈಲ್‌ಗೆ ಭೇಟಿ ನೀಡಿದ ತಕ್ಷಣ, ಅವರು ಈ ಹಾಡನ್ನು ಕೇಳುತ್ತಾರೆ. ಫೇಸ್‌ಬುಕ್‌ಗೆ ಹಾಡನ್ನು ಸೇರಿಸುವ ವಿಧಾನ ಹೇಗೆ ಎಂಬ ಸಂಪೂರ್ಣ ಹಂತ ಹಂತದ ಪ್ರಕ್ರಿಯೆಯನ್ನು ಇಲ್ಲಿ ತಿಳಿಯಿರಿ.

  • ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫೇಸ್‌ಬುಕ್ ಅಪ್ಲಿಕೇಶನ್ ತೆರೆಯಿರಿ. ಇದರ ನಂತರ, ನಿಮ್ಮ ಪ್ರೊಫೈಲ್ ಐಕಾನ್ ಮೇಲೆ ಕ್ಲಿಕ್ ಮಾಡಿ.
  • ಈಗ “ಪ್ರೊಫೈಲ್” ಪಕ್ಕದಲ್ಲಿರುವ ಮೂರು ಚುಕ್ಕೆಗಳ ಐಕಾನ್ ಮೇಲೆ ಕ್ಲಿಕ್ ಮಾಡಿ ಅಥವಾ ನೋಟ್ ಎಂದು ಬರೆದಿರುವ ಮೇಲೆ ಕ್ಲಿಕ್ ಮಾಡಿ.
  • ನೀವು ಕೆಳಗೆ ಸ್ಕ್ರಾಲ್ ಮಾಡಿದಾಗ, ನೀವು ಇಲ್ಲಿ ಸರ್ಚ್ ಆಯ್ಕೆಯನ್ನು ನೋಡುತ್ತೀರಿ. ಇದಾದ ನಂತರ, ಮುಂದಿನ ವಿಂಡೋದಲ್ಲಿ ಸಂಗೀತ ಆಯ್ಕೆ ಲಭ್ಯವಿರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
  • ಸಂಗೀತ ಆಯ್ಕೆಗೆ ಹೋದ ನಂತರ, ನಿಮ್ಮ ನೆಚ್ಚಿನ ಹಾಡನ್ನು ನೀವು ಹುಡುಕಬಹುದು.
  • ನಿಮ್ಮ ಪ್ರೊಫೈಲ್‌ಗೆ ಸೇರಿಸಲು ಬಯಸುವ ಯಾವುದೇ ಹಾಡಿನ ಮೇಲೆ ಟ್ಯಾಪ್ ಮಾಡಿ. ಇದಾದ ನಂತರ, ಆ ಹಾಡಿನ ಪಕ್ಕದಲ್ಲಿ ಕಾಣಿಸಿಕೊಳ್ಳುವ ಮೂರು ಚುಕ್ಕೆಗಳ ಐಕಾನ್ ಮೇಲೆ ಕ್ಲಿಕ್ ಮಾಡಿ.
  • ಇಲ್ಲಿ ನೀವು ಪಿನ್ ಟು ಪ್ರೊಫೈಲ್ ಆಯ್ಕೆಯನ್ನು ಟ್ಯಾಪ್ ಮಾಡಬೇಕು. ನೀವು ಇದನ್ನು ಮಾಡಿದ ತಕ್ಷಣ, ಹಾಡನ್ನು ನಿಮ್ಮ ಪ್ರೊಫೈಲ್‌ಗೆ ಸೇರಿಸಲಾಗುತ್ತದೆ.

Poco C71: ಬಿಡುಗಡೆ ಆಯಿತು ಐಫೋನ್ 16 ನಂತೆ ಕಾಣುವ ಹೊಸ ಸ್ಮಾರ್ಟ್​ಫೋನ್: ಬೆಲೆ ಕೇವಲ 5,999 ರೂ.

ಇದನ್ನೂ ಓದಿ
Image
ಬಿಡುಗಡೆ ಆಯಿತು ಐಫೋನ್ 16 ನಂತೆ ಕಾಣುವ ಹೊಸ ​ಫೋನ್: ಬೆಲೆ ಕೇವಲ 5,999 ರೂ.
Image
ಭಾರತದಲ್ಲಿ 3 ಸಿಮ್ ಕಾರ್ಡ್‌ಗಳನ್ನು ಹೊಂದಿರುವ ಫೋನ್ ಬಿಡುಗಡೆ: ಬೆಲೆ ಎಷ್ಟು?
Image
ಇನ್‌ಸ್ಟಾ ರೀಲ್ಸ್ ಅನ್ನು 2X ವೇಗದಲ್ಲಿ ನೋಡೋದು ಹೇಗೆ?: ಇಲ್ಲಿದೆ ಟ್ರಿಕ್
Image
ಭಾರತದಲ್ಲಿ ಬರೋಬ್ಬರಿ 9.7 ಮಿಲಿಯನ್ ವಾಟ್ಸ್ಆ್ಯಪ್ ಖಾತೆ ನಿಷೇಧ

ಮೆಟಾದ ಹೊಸ ನಿಯಮ:

ಟೆಕ್ ಕಂಪನಿಗಳ ವಿರುದ್ಧ ಯುರೋಪಿಯನ್ ಒಕ್ಕೂಟ ತೆಗೆದುಕೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಮೆಟಾ ಹೊಸ ನಿರ್ಧಾರವನ್ನು ತೆಗೆದುಕೊಂಡಿದೆ. ಮೆಟಾ ಯುರೋಪಿಯನ್ ಒಕ್ಕೂಟದ ಬಳಕೆದಾರರಿಗೆ ಮಾಸಿಕ ಶುಲ್ಕ ವಿಧಿಸಲು ನಿರ್ಧರಿಸಿದೆ. ಇದಕ್ಕಾಗಿ, ಬಳಕೆದಾರರಿಗೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಬಳಸುವುದಕ್ಕಾಗಿ ತಿಂಗಳಿಗೆ $14 ಅಂದರೆ ಸರಿಸುಮಾರು 1,190 ರೂ. ಶುಲ್ಕ ವಿಧಿಸಲಾಗುತ್ತದೆ. ಆದಾಗ್ಯೂ, ಮೆಟಾದ ಈ ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಜಾಹೀರಾತುಗಳನ್ನು ನೋಡಲು ಬಯಸದ ಬಳಕೆದಾರರಿಂದ ಈ ಶುಲ್ಕವನ್ನು ತೆಗೆದುಕೊಳ್ಳಲಾಗುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:30 pm, Sat, 5 April 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ