Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp Ban: ಭಾರತದಲ್ಲಿ ಬರೋಬ್ಬರಿ 9.7 ಮಿಲಿಯನ್ ವಾಟ್ಸ್ಆ್ಯಪ್ ಖಾತೆ ನಿಷೇಧ: ಮೆಟಾದಿಂದ ದೊಡ್ಡ ಕ್ರಮ

ವಾಟ್ಸ್ಆ್ಯಪ್ ನ ಫೆಬ್ರವರಿ 2025 ರ ಸುರಕ್ಷತಾ ವರದಿಯ ಪ್ರಕಾರ, ಕಂಪನಿಯು 1.4 ಮಿಲಿಯನ್‌ಗಿಂತಲೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ, ಅವುಗಳ ಬಗ್ಗೆ ಯಾವುದೇ ಬಳಕೆದಾರರು ದೂರು ಸಹ ದಾಖಲಿಸಿಲ್ಲ. AI-ಚಾಲಿತ ಮಾಡರೇಶನ್ ಮತ್ತು ಸುಧಾರಿತ ವರದಿ ಮಾಡುವ ಸಾಧನಗಳಲ್ಲಿ ಹೂಡಿಕೆ ಮಾಡುವುದರಿಂದ ಭಾರತದಲ್ಲಿ ಈ 9.7 ಮಿಲಿಯನ್ ಖಾತೆಗಳನ್ನು ನಿಷೇಧಿಸಬಹುದು ಎಂದು ಕಂಪನಿ ಹೇಳಿದೆ.

WhatsApp Ban: ಭಾರತದಲ್ಲಿ ಬರೋಬ್ಬರಿ 9.7 ಮಿಲಿಯನ್ ವಾಟ್ಸ್ಆ್ಯಪ್ ಖಾತೆ ನಿಷೇಧ: ಮೆಟಾದಿಂದ ದೊಡ್ಡ ಕ್ರಮ
Whatsapp Ban (1)
Follow us
Vinay Bhat
|

Updated on: Apr 03, 2025 | 3:55 PM

WhatsApp Account Ban: ಭಾರತದಲ್ಲಿ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್​ನ (WhatsApp)​ ಹಲವು ಖಾತೆಗಳನ್ನು ನಿಷೇಧಿಸಲಾಗಿದೆ. IANS ವರದಿಯ ಪ್ರಕಾರ, ಫೆಬ್ರವರಿ 2025 ರಲ್ಲಿ ಭಾರತದ 9.7 ಮಿಲಿಯನ್ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸ್​ಆ್ಯಪ್​ಮಂಗಳವಾರ, ಏಪ್ರಿಲ್ 1, 2025 ರಂದು ತಿಳಿಸಿದೆ. ಈ ನಿರ್ಧಾರಕ್ಕೆ ಕಾರಣವನ್ನು ನೀಡಲಾಗಿದ್ದು, ಭಾರತದಲ್ಲಿ ವಾಟ್ಸ್​ಆ್ಯಪ್​ ಬಳಸುವ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಖಾತೆಗಳನ್ನು ಮುಚ್ಚಲಾಗಿದೆ ಎಂದು ಕಂಪನಿ ಹೇಳಿದೆ.

ವಾಟ್ಸ್​ಆ್ಯಪ್​ ಖಾತೆಗಳನ್ನು ಏಕೆ ನಿಷೇಧಿಸಿತು?

ವಾಟ್ಸ್​ಆ್ಯಪ್​ ನ ಫೆಬ್ರವರಿ 2025 ರ ಸುರಕ್ಷತಾ ವರದಿಯ ಪ್ರಕಾರ, ಕಂಪನಿಯು 1.4 ಮಿಲಿಯನ್‌ಗಿಂತಲೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ, ಅವುಗಳ ಬಗ್ಗೆ ಯಾವುದೇ ಬಳಕೆದಾರರು ದೂರು ಸಹ ದಾಖಲಿಸಿಲ್ಲ. ಭಾರತದಲ್ಲಿ ವಾಟ್ಸ್​ಆ್ಯಪ್​ 500 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ ಎಂಬುದು ಗಮನಿಸಬೇಕಾದ ಸಂಗತಿ. AI-ಚಾಲಿತ ಮಾಡರೇಶನ್ ಮತ್ತು ಸುಧಾರಿತ ವರದಿ ಮಾಡುವ ಸಾಧನಗಳಲ್ಲಿ ಹೂಡಿಕೆ ಮಾಡುವುದರಿಂದ ಭಾರತದಲ್ಲಿ ಈ 9.7 ಮಿಲಿಯನ್ ಖಾತೆಗಳನ್ನು ನಿಷೇಧಿಸಬಹುದು ಎಂದು ಕಂಪನಿ ಹೇಳಿದೆ.

ವಾಟ್ಸ್​ಆ್ಯಪ್​ ಪರವಾಗಿ ಮಾಹಿತಿ ನೀಡಿದ ವಕ್ತಾರರು, ವಾಟ್ಸ್​ಆ್ಯಪ್​ ಹಲವು ವರ್ಷಗಳಿಂದ ಕೃತಕ ಬುದ್ಧಿಮತ್ತೆಯ ಮೇಲೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಇದರೊಂದಿಗೆ, ನಮ್ಮ ಡೇಟಾ ವಿಜ್ಞಾನಿಗಳು ಮತ್ತು ತಜ್ಞರು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿರುವ ಎಲ್ಲಾ ಬಳಕೆದಾರರಿಗೆ ಸಂಪೂರ್ಣ ಸುರಕ್ಷತೆಯನ್ನು ಒದಗಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಜನರ ಸುರಕ್ಷತೆಗೆ ಧಕ್ಕೆ ತರುತ್ತಿದ್ದ ತಪ್ಪು ವಿಷಯಗಳನ್ನು ತಡೆಯಲು ವಾಟ್ಸ್​ಆ್ಯಪ್​ ಈ ಕ್ರಮ ಕೈಗೊಂಡಿದೆ.

ಇದನ್ನೂ ಓದಿ
Image
AC ಯಿಂದ ಶಬ್ದ ಬರುತ್ತಿದೆಯೇ?: ಹಾಗಾದರೆ ಈ ರೀತಿ ಮಾಡಿ, ಕೂಡಲೇ ಸರಿಯಾಗುತ್ತೆ
Image
5500mAh ಬ್ಯಾಟರಿ, ಆಕರ್ಷಕ ಕ್ಯಾಮೆರಾ: ಕಡಿಮೆ ಬೆಲೆಗೆ ಹೊಸ ಫೋನ್ ರಿಲೀಸ್
Image
ಹೊಸ ಮೊಬೈಲ್: ಏಪ್ರಿಲ್​ನಲ್ಲಿ ಬರಲಿದೆ ಆಕರ್ಷಕ ಸ್ಮಾರ್ಟ್​ಫೋನ್ಸ್
Image
ಫೋಟೋ ಎಡಿಟ್‌ ಮಾಡಿ ಕೊಡದ ChatGPT ಜೊತೆ ವಾದಕ್ಕಿಳಿದ ಯುವತಿ

ವಾಟ್ಸ್​ಆ್ಯಪ್​ ನಿಂದ ದೊಡ್ಡ ಕ್ರಮ

2021 ರ ಐಟಿ ನಿಯಮಗಳ ಪ್ರಕಾರ, ಬಳಕೆದಾರರೇ ವರದಿ ಮಾಡಿದ ಖಾತೆಗಳ ವಿರುದ್ಧ ಕಂಪನಿಯು ಹೆಚ್ಚಿನ ಕ್ರಮ ಕೈಗೊಂಡಿದೆ ಎಂದು ವಾಟ್ಸ್​ಆ್ಯಪ್​ ಹೇಳಿದೆ. ಅನುಮಾನಾಸ್ಪದ ಚಟುವಟಿಕೆಗಳನ್ನು ಪತ್ತೆ ಮಾಡುವ ಸ್ವಯಂಚಾಲಿತ ಪತ್ತೆ ವ್ಯವಸ್ಥೆಯನ್ನು ವಾಟ್ಸ್​ಆ್ಯಪ್​ ಹೊಂದಿದೆ ಎಂದು ಕಂಪನಿ ಹೇಳಿದೆ.

AC Tips: AC ಯಿಂದ ಶಬ್ದ ಬರುತ್ತಿದೆಯೇ?: ಹಾಗಾದರೆ ಈ ರೀತಿ ಮಾಡಿ, ಕೂಡಲೇ ಸರಿಯಾಗುತ್ತೆ

ವಾಟ್ಸ್​ಆ್ಯಪ್​ ಸ್ವೀಕರಿಸಿದ ಹೆಚ್ಚಿನ ದೂರುಗಳು ಸ್ಪ್ಯಾಮಿಂಗ್ ಮತ್ತು ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿವೆ. ಇದಲ್ಲದೆ, ಜನರು ತಮ್ಮ ಅನುಮತಿಯಿಲ್ಲದೆ ವಿವಿಧ ಗುಂಪುಗಳಿಗೆ ಸೇರಿಸಲ್ಪಟ್ಟ ಕೆಲವು ಪ್ರಕರಣಗಳನ್ನು ಸಹ ವರದಿ ಮಾಡಿದ್ದಾರೆ. ಈ ಎಲ್ಲಾ ದೂರುಗಳ ಬಗ್ಗೆ ತನಿಖೆ ನಡೆಸಿ, ಅಂತಹ ತಪ್ಪು ಕೆಲಸಗಳನ್ನು ಮಾಡುತ್ತಿರುವ ಖಾತೆಗಳನ್ನು ವಾಟ್ಸ್​ಆ್ಯಪ್​ ನಿಷೇಧಿಸಿದೆ.

ಜನವರಿಯಲ್ಲಿ 99 ಲಕ್ಷ ವಾಟ್ಸ್​ಆ್ಯಪ್ ಖಾತೆ ಬ್ಯಾನ್

ಈ ವರ್ಷದ ಜನವರಿಯಲ್ಲಿ 99 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸ್​ಆ್ಯಪ್ ಇತ್ತೀಚೆಗಷ್ಟೆ ತನ್ನ ಮಾಸಿಕ ವರದಿಯಲ್ಲಿ ತಿಳಿಸಿತ್ತು. ಹೆಚ್ಚುತ್ತಿರುವ ಹಗರಣಗಳು, ಸ್ಪ್ಯಾಮ್ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ನಿಲ್ಲಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ. ಜನವರಿ 1 ರಿಂದ ಜನವರಿ 30 ರವರೆಗೆ ಒಟ್ಟು 99 ಲಕ್ಷ 67 ಸಾವಿರ ಖಾತೆಗಳನ್ನು ನಿರ್ಬಂಧಿಸಲಾಗಿದೆ. ಇವುಗಳಲ್ಲಿ 13.27 ಲಕ್ಷ ಖಾತೆಗಳನ್ನು ಯಾವುದೇ ದೂರು ಸ್ವೀಕರಿಸುವ ಮೊದಲೇ ಬ್ಯಾನ್ ಮಾಡಲಾಗಿದೆ. ಜನವರಿಯಲ್ಲಿ, ವಾಟ್ಸ್​ಆ್ಯಪ್ ತನ್ನ ಬಳಕೆದಾರರಿಂದ 9,474 ದೂರುಗಳನ್ನು ಸ್ವೀಕರಿಸಿದೆ. ಇವುಗಳಲ್ಲಿ 239 ಖಾತೆಗಳ ಮೇಲೆ ಕ್ರಮ ಕೈಗೊಂಡ ಕಂಪನಿಯು ಖಾತೆಗಳನ್ನು ನಿರ್ಬಂಧಿಸುವುದು ಸೇರಿದಂತೆ ಇತರ ಕ್ರಮಗಳನ್ನು ತೆಗೆದುಕೊಂಡಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ