WhatsApp Ban: ಒಂದಲ್ಲ.. ಎರಡಲ್ಲ..: ಭಾರತದಲ್ಲಿ ಬರೋಬ್ಬರಿ 99 ಲಕ್ಷ ವಾಟ್ಸ್ಆ್ಯಪ್ ಖಾತೆ ಬ್ಯಾನ್
ಐಟಿ ಕಾಯ್ದೆಯಡಿಯಲ್ಲಿ ವಾಟ್ಸ್ಆ್ಯಪ್ ನಿಯಮಿತ ವರದಿಗಳನ್ನು ಸಲ್ಲಿಸಬೇಕಾಗುತ್ತದೆ. ಇದರಲ್ಲಿ, ಕಂಪನಿಯು ತನ್ನ ಬಳಕೆದಾರರಿಗೆ ಸುರಕ್ಷಿತ ಮತ್ತು ಸುಭದ್ರ ವೇದಿಕೆಯನ್ನು ಒದಗಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಈ ವರ್ಷ ಜನವರಿ 1 ರಿಂದ ಜನವರಿ 30 ರವರೆಗೆ ಒಟ್ಟು 99 ಲಕ್ಷ 67 ಸಾವಿರ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಬೆಂಗಳೂರು (ಮಾ. 22): ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ಅನ್ನು ಇಂದು ವಿಶ್ವದಾದ್ಯಂತ ಕೋಟ್ಯಾಂತರ ಮಂದಿ ಉಪಯೋಗಿಸುತ್ತಿದ್ದಾರೆ. ಭಾರತದಲ್ಲಿ ವಾಟ್ಸ್ಆ್ಯಪ್ಗೆ ಅತಿ ಹೆಚ್ಚು ಬಳಕೆದಾರರಿದ್ದಾರೆ. ಆದರೆ, ಇದೀಗ ಶಾಕಿಂಗ್ ಮಾಹಿತಿಯೊಂದು ಹೊರಬಿದ್ದಿದೆ. ಈ ವರ್ಷದ ಜನವರಿಯಲ್ಲಿ 99 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವಾಟ್ಸ್ಆ್ಯಪ್ ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ. ಹೆಚ್ಚುತ್ತಿರುವ ಹಗರಣಗಳು, ಸ್ಪ್ಯಾಮ್ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ನಿಲ್ಲಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ. ಮೆಟಾ ಒಡೆತನದ ಈ ತ್ವರಿತ ಸಂದೇಶ ಕಳುಹಿಸುವ ವೇದಿಕೆಯು, ಯಾವುದೇ ಬಳಕೆದಾರರು ನಿಯಮಗಳನ್ನು ಉಲ್ಲಂಘಿಸಿದರೆ, ಭವಿಷ್ಯದಲ್ಲಿ ಹೆಚ್ಚಿನ ಖಾತೆಗಳನ್ನು ನಿಷೇಧಿಸಲಾಗುವುದು ಎಂದು ಹೇಳಿದೆ.
ವಾಟ್ಸ್ಆ್ಯಪ್ ನಿಯಮಿತವಾಗಿ ವರದಿಗಳನ್ನು ನೀಡಬೇಕು:
ಐಟಿ ಕಾಯ್ದೆಯಡಿಯಲ್ಲಿ ವಾಟ್ಸ್ಆ್ಯಪ್ ನಿಯಮಿತ ವರದಿಗಳನ್ನು ಸಲ್ಲಿಸಬೇಕಾಗುತ್ತದೆ. ಇದರಲ್ಲಿ, ಕಂಪನಿಯು ತನ್ನ ಬಳಕೆದಾರರಿಗೆ ಸುರಕ್ಷಿತ ಮತ್ತು ಸುಭದ್ರ ವೇದಿಕೆಯನ್ನು ಒದಗಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಈ ವರ್ಷ ಜನವರಿ 1 ರಿಂದ ಜನವರಿ 30 ರವರೆಗೆ ಒಟ್ಟು 99 ಲಕ್ಷ 67 ಸಾವಿರ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಇವುಗಳಲ್ಲಿ 13.27 ಲಕ್ಷ ಖಾತೆಗಳನ್ನು ಯಾವುದೇ ದೂರು ಸ್ವೀಕರಿಸುವ ಮೊದಲೇ ಬ್ಯಾನ್ ಮಾಡಲಾಗಿದೆ. ಜನವರಿಯಲ್ಲಿ, ವಾಟ್ಸ್ಆ್ಯಪ್ ತನ್ನ ಬಳಕೆದಾರರಿಂದ 9,474 ದೂರುಗಳನ್ನು ಸ್ವೀಕರಿಸಿದೆ. ಇವುಗಳಲ್ಲಿ 239 ಖಾತೆಗಳ ಮೇಲೆ ಕ್ರಮ ಕೈಗೊಂಡ ಕಂಪನಿಯು ಖಾತೆಗಳನ್ನು ನಿರ್ಬಂಧಿಸುವುದು ಸೇರಿದಂತೆ ಇತರ ಕ್ರಮಗಳನ್ನು ತೆಗೆದುಕೊಂಡಿದೆ.
ಕಂಪನಿಯು ಈ ಮೂರು ವಿಧಾನಗಳಲ್ಲಿ ಖಾತೆಗಳನ್ನು ನಿರ್ಬಂಧಿಸುತ್ತದೆ:
ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿರುವ ಖಾತೆಗಳನ್ನು ಗುರುತಿಸಲು ಮತ್ತು ನಿಷೇಧಿಸಲು ಬಹು-ಪದರದ ವ್ಯವಸ್ಥೆಯನ್ನು ಹೊಂದಿದೆ ಎಂದು ವಾಟ್ಸ್ಆ್ಯಪ್ ಹೇಳಿದೆ. ಇದರ ಪತ್ತೆ ವ್ಯವಸ್ಥೆಯು ಸೈನ್-ಅಪ್ ಸಮಯದಲ್ಲಿಯೇ ಅನುಮಾನಾಸ್ಪದ ಖಾತೆಗಳನ್ನು ಫ್ಲ್ಯಾಗ್ ಮಾಡುತ್ತದೆ ಮತ್ತು ನಿಷೇಧಿಸುತ್ತದೆ. ಇದಲ್ಲದೆ, ಈ ವ್ಯವಸ್ಥೆಯು ಬೃಹತ್ ಅಥವಾ ಸ್ಪ್ಯಾಮ್ ಸಂದೇಶಗಳನ್ನು ಕಳುಹಿಸುವ ಖಾತೆಗಳನ್ನು ಪತ್ತೆಹಚ್ಚುತ್ತದೆ ಮತ್ತು ಅವುಗಳನ್ನು ನಿರ್ಬಂಧಿಸುತ್ತದೆ. ಮೂರನೆಯ ವಿಧಾನವೆಂದರೆ ಬಳಕೆದಾರರ ಪ್ರತಿಕ್ರಿಯೆ. ಬಳಕೆದಾರರಿಂದ ದೂರುಗಳು ಬಂದರೆ, ಕಂಪನಿಯು ತನಿಖೆ ನಡೆಸಿ ಖಾತೆಗಳನ್ನು ನಿರ್ಬಂಧಿಸುತ್ತದೆ.
ನೀವು ಈ ಕೆಲಸಗಳನ್ನು ಮಾಡಿದರೆ ನಿಮ್ಮ ಖಾತೆಯನ್ನು ನಿರ್ಬಂಧಿಸಲಾಗುತ್ತದೆ:
ನೀವು ವಾಟ್ಸ್ಆ್ಯಪ್ ನ ನೀತಿಗಳನ್ನು ಉಲ್ಲಂಘಿಸಿದರೆ, ನಿಮ್ಮ ಖಾತೆಯನ್ನು ಸಹ ನಿರ್ಬಂಧಿಸಬಹುದು. ಕೆಟ್ಟ ಅಥವಾ ಸ್ಪ್ಯಾಮ್ ಸಂದೇಶಗಳನ್ನು ಕಳುಹಿಸುವ, ವಂಚನೆ ಮಾಡಲು ಪ್ರಯತ್ನಿಸುವ ಮತ್ತು ವದಂತಿಗಳನ್ನು ಹರಡುವ ಖಾತೆಗಳಿಗೆ ಕಂಪನಿಯು ವಿಶೇಷ ಗಮನ ನೀಡುತ್ತದೆ ಮತ್ತು ಇವುಗಳನ್ನು ತಕ್ಷಣವೇ ನಿರ್ಬಂಧಿಸಲಾಗುತ್ತದೆ. ಹೀಗಾಗಿ ವಾಟ್ಸ್ಆ್ಯಪ್ ನಲ್ಲಿ ನೀವು ಯಾರಿಗಾದರು ಮೆಸೇಜ್ ಕಳುಹಿಸುವ ಮುನ್ನ ಅಥವಾ ಯಾವುದಾದರು ಮೆಸೇಜ್ ಅನ್ನು ಫಾರ್ವಡ್ ಮಾಡುವ ಮುನ್ನ ಎಚ್ಚರ ವಹಿಸಿ. ಇಲ್ಲವಾದಲ್ಲಿ ನಿಮ್ಮ ಖಾತೆ ಕೂಡ ಬ್ಯಾನ್ ಆಗಬಹುದು.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ