itel King Signal: ಒಂದಲ್ಲ.. ಎರಡಲ್ಲ.. ಭಾರತದಲ್ಲಿ 3 ಸಿಮ್ ಕಾರ್ಡ್‌ಗಳನ್ನು ಹೊಂದಿರುವ ಫೋನ್ ಬಿಡುಗಡೆ: ಬೆಲೆ ಎಷ್ಟು?
ನೀವು ಕೇವಲ ಕರೆಗಾಗಿ ಅಗ್ಗದ ಮತ್ತು ಬಾಳಿಕೆ ಬರುವ ಫೀಚರ್ ಫೋನ್ ಖರೀದಿಸಲು ಬಯಸಿದರೆ ಈ ಐಟೆಲ್ ಕಿಂಗ್ ಸಿಗ್ನಲ್ ಖರೀದಿಸಬಹುದು. ಈ ಫೋನಿನಲ್ಲಿ ನೆಟ್‌ವರ್ಕ್ ಸಂಪರ್ಕಕ್ಕಾಗಿ ಕಂಪನಿಯು ಅತ್ಯುತ್ತಮ ತಂತ್ರಜ್ಞಾನವನ್ನು ಬಳಸಿದೆ. ವಿಶೇಷ ಎಂದರೆ ಇದರಲ್ಲಿ 3 ಸಿಮ್ ಕಾರ್ಡ್‌ಗಳನ್ನು ಬಳಸಬಹುದು. ಈ ಫೋನ್ ಅನ್ನು ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಐಟೆಲ್ ಬಿಡುಗಡೆ ಮಾಡಿದೆ.

ಬೆಂಗಳೂರು (ಏ. 01): ಮೊಬೈಲ್ ಮಾರುಕಟ್ಟೆ ಇಂದು ವಿಶಾಲವಾಗಿ ಬೆಳೆದುಕೊಂಡಿದೆ. ಫೋನ್ ಇಲ್ಲಿದೆ ಇರುವ ಜನರು ಯಾರೂ ಇಲ್ಲದಂತಾಗಿದೆ. ಕಾಲಕಾಲಕ್ಕೆ ಈ ಫೋನ್‌ನಲ್ಲಿ ಸಾಕಷ್ಟು ಬದಲಾವಣೆ ಕೂಡ ಆಗುತ್ತಿರುತ್ತವೆ. ಇಂದು ಲಭ್ಯವಿರುವ ಹೆಚ್ಚಿನ ಮೊಬೈಲ್ ಫೋನ್‌ಗಳು ಅಥವಾ ಸ್ಮಾರ್ಟ್‌ಫೋನ್‌ಗಳು (Smartphones) ಡ್ಯುಯಲ್ ಸಿಮ್ ಬೆಂಬಲವನ್ನು ಹೊಂದಿವೆ. ಆದರೆ ಈಗ ಅಂತಹದ್ದೇ ಒಂದು ಫೋನ್ ಭಾರತೀಯ ಮಾರುಕಟ್ಟೆಯಲ್ಲೂ ಬಿಡುಗಡೆಯಾಗಿದ್ದು, ವಿಶೇಷ ಎಂದರೆ ಇದರಲ್ಲಿ 3 ಸಿಮ್ ಕಾರ್ಡ್‌ಗಳನ್ನು ಬಳಸಬಹುದು. ಈ ಫೋನ್ ಅನ್ನು ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಐಟೆಲ್ ಬಿಡುಗಡೆ ಮಾಡಿದೆ. ಆ ಫೋನಿನ ಹೆಸರು ಐಟೆಲ್ ಕಿಂಗ್ ಸಿಗ್ನಲ್.
ನೀವು ಕೇವಲ ಕರೆಗಾಗಿ ಅಗ್ಗದ ಮತ್ತು ಬಾಳಿಕೆ ಬರುವ ಫೀಚರ್ ಫೋನ್ ಖರೀದಿಸಲು ಬಯಸಿದರೆ ಈ ಐಟೆಲ್ ಕಿಂಗ್ ಸಿಗ್ನಲ್ ಖರೀದಿಸಬಹುದು. ಈ ಫೋನಿನಲ್ಲಿ ನೆಟ್‌ವರ್ಕ್ ಸಂಪರ್ಕಕ್ಕಾಗಿ ಕಂಪನಿಯು ಅತ್ಯುತ್ತಮ ತಂತ್ರಜ್ಞಾನವನ್ನು ಬಳಸಿದೆ. ಐಟೆಲ್‌ನ ಈ ಫೋನ್ ಕಡಿಮೆ ನೆಟ್‌ವರ್ಕ್ ಕವರೇಜ್‌ನಲ್ಲಿ ಶೇ. 510 ದೀರ್ಘ ಕರೆ ಅವಧಿಯನ್ನು ಮತ್ತು ಇತರ ಬ್ರಾಂಡ್‌ಗಳಿಗಿಂತ ಶೇ. 62 ರಷ್ಟು ವೇಗದ ಸಂಪರ್ಕವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.
ಐಟೆಲ್ ಕಿಂಗ್ ಸಿಗ್ನಲ್ ಬೆಲೆ:
ಐಟೆಲ್ ಕಿಂಗ್ ಸಿಗ್ನಲ್ ಅನ್ನು ಕಂಪನಿಯು 1399 ರೂ. ಗಳಿಗೆ ಬಿಡುಗಡೆ ಮಾಡಿದೆ. ಕಂಪನಿಯು ಇದನ್ನು ಆರ್ಮಿ ಗ್ರೀನ್, ಕಪ್ಪು ಮತ್ತು ನೇರಳೆ ಕೆಂಪು ಸೇರಿದಂತೆ ಹಲವು ಬಣ್ಣಗಳಲ್ಲಿ ಅನಾವರಣ ಮಾಡಿದೆ. ಈ ಫೀಚರ್ ಫೋನ್‌ನಲ್ಲಿ ಕಂಪನಿಯು ಗ್ರಾಹಕರಿಗೆ 13 ತಿಂಗಳ ಖಾತರಿಯನ್ನು ನೀಡುತ್ತಿದೆ.
Instagram Reels: ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಅನ್ನು 2X ವೇಗದಲ್ಲಿ ನೋಡೋದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್
ಐಟೆಲ್ ಕಿಂಗ್ ಸಿಗ್ನಲ್ ನ ಫೀಚರ್ಸ್:
ಐಟೆಲ್ ಕಿಂಗ್ ಸಿಗ್ನಲ್ ನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು 2 ಇಂಚಿನ ಡಿಸ್ಪ್ಲೇ ಹೊಂದಿದೆ. ಕಂಪನಿಯು ಇದರಲ್ಲಿ 1500mAh ದೊಡ್ಡ ಬ್ಯಾಟರಿಯನ್ನು ಒದಗಿಸಿದೆ. ವಿಶೇಷವೆಂದರೆ ಐಟೆಲ್ ತನ್ನಲ್ಲಿ ಚಾರ್ಜ್ ಮಾಡಲು ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಅನ್ನು ಒದಗಿಸಿದೆ. ಐಟೆಲ್‌ನ ಈ ಫೀಚರ್ ಫೋನ್ ಸೂಪರ್ ಬ್ಯಾಟರಿ ಮೋಡ್ ಅನ್ನು ಕೂಡ ಬೆಂಬಲಿಸುತ್ತದೆ. ಕಂಪನಿಯು ಈ ಫೋನಿನ ಹಿಂಭಾಗದಲ್ಲಿ VGA ಕ್ಯಾಮೆರಾವನ್ನು ಒದಗಿಸಿದೆ. ಈ ಫೋನ್‌ನಲ್ಲಿ ಕಂಪನಿಯು ಟಾರ್ಚ್, ಆಟೋ ಕಾಲ್ ರೆಕಾರ್ಡಿಂಗ್‌ನಂತಹ ವೈಶಿಷ್ಟ್ಯಗಳನ್ನು ಒದಗಿಸಿದೆ. ನೀವು ಮೈಕ್ರೋ SD ಕಾರ್ಡ್ ಮೂಲಕ ಇದರ ಸಂಗ್ರಹಣೆಯನ್ನು 32GB ವರೆಗೆ ಹೆಚ್ಚಿಸಬಹುದು.
ಈ ಫೋನ್ ವೈರ್‌ಲೆಸ್ FM (ರೆಕಾರ್ಡಿಂಗ್) ಅನ್ನು ಬೆಂಬಲಿಸುತ್ತದೆ. ಫೋನ್ ಬೆಳ್ಳಿ ಲೇಪಿತವಾಗಿದೆ. ಈ ಫೋನಿನಲ್ಲಿ ಟಾರ್ಚ್, ಆಟೋ ಕಾಲ್ ರೆಕಾರ್ಡಿಂಗ್, ಫೋನ್‌ಬುಕ್/ ಮೆಸೇಜ್ನಂತಹ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಇದು 2000 ಕಾಂಟೆಕ್ಟ್ ಅನ್ನು ಬೆಂಬಲಿಸುತ್ತದೆ. ಈ ಫೋನ್‌ನಲ್ಲಿ ಮ್ಯೂಸಿಕ್ ಪ್ಲೇಯರ್ ಮತ್ತು ವಿಡಿಯೋ ಪ್ಲೇಯರ್ ಕೂಡ ಲಭ್ಯವಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ