ಹೊಸ ಮೊಬೈಲ್ ಬೇಕಿದ್ರೆ ಸ್ವಲ್ಪ ಕಾಯಿರಿ: ಏಪ್ರಿಲ್‌ನಲ್ಲಿ ಬರಲಿದೆ ಆಕರ್ಷಕ ಸ್ಮಾರ್ಟ್ಫೋನ್ಸ್
Smartphone Launching in April 2025: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್25 ಎಡ್ಜ್ ಅತ್ಯಂತ ತೆಳುವಾದ ಫೋನ್ ಆಗಲಿದ್ದು, ಏಪ್ರಿಲ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಫೋನ್ 6.7-ಇಂಚಿನ AMOLED ಡಿಸ್ಪ್ಲೇ, 8 ಎಲೈಟ್ ಚಿಪ್‌ಸೆಟ್‌ನೊಂದಿಗೆ ಸಜ್ಜುಗೊಂಡಿದೆ. ಇದು 200MP ಪ್ರಾಥಮಿಕ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 12MP ಅಲ್ಟ್ರಾ-ವೈಡ್ ಆಂಗಲ್ ಅನ್ನು ಹೊಂದಬಹುದು.

ಬೆಂಗಳೂರು (ಏ. 01): ನೀವು ಹೊಸ ಸ್ಮಾರ್ಟ್‌ಫೋನ್ (Smartphone) ಖರೀದಿಸಲು ಯೋಚಿಸುತ್ತಿದ್ದರೆ ಏಪ್ರಿಲ್‌ನಲ್ಲಿ ಹಲವು ಉತ್ತಮ ಮೊಬೈಲ್ಗಳು ಬಿಡುಗಡೆಯಾಗಲಿವೆ. ಇವುಗಳಲ್ಲಿ ಸ್ಯಾಮ್‌ಸಂಗ್‌ನ ಇಲ್ಲಿಯವರೆಗಿನ ಅತ್ಯಂತ ತೆಳುವಾದ ಫೋನ್ ಮತ್ತು ಬಜೆಟ್ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು ಕೂಡ ಸೇರಿವೆ. ಒಂದುವೇಳೆ ನೀವು ಪ್ರೀಮಿಯಂ ಫೋನ್ ಖರೀದಿಸುವ ಪ್ಲಾನ್ ನಲ್ಲಿದ್ದರೆ, ನಿಮಗೆ ಇನ್ನೂ ಆಯ್ಕೆಗಳಿವೆ. ಬಜೆಟ್ ಬೆಲೆಯ ಫೋನ್ ಖರೀದಿಸ ಬೇಕು ಎಂದಿದ್ದರೆ ಅದುಕೂಡ ರಿಲೀಸ್ ಆಗಲಿದೆ. ಏಪ್ರಿಲ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಫೋನ್‌ಗಳು ಯಾವುದು ಎಂಬುದರ ಪಟ್ಟಿ ಇಲ್ಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್25 ಎಡ್ಜ್
ಇದು ಸ್ಯಾಮ್‌ಸಂಗ್‌ನ ಅತ್ಯಂತ ತೆಳುವಾದ ಫೋನ್ ಆಗಲಿದ್ದು, ಏಪ್ರಿಲ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದು ಬಿಐಎಸ್ ಪ್ರಮಾಣೀಕರಣವನ್ನು ಪಡೆದಿದ್ದು, ಭಾರತಕ್ಕೆ ಬರಲು ದಾರಿ ಸುಗಮವಾಗಿದೆ. ಈ ಫೋನ್ 6.7-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿರುತ್ತದೆ ಮತ್ತು ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ನೊಂದಿಗೆ ಸಜ್ಜುಗೊಂಡಿದೆ. ಇದು 200MP ಪ್ರಾಥಮಿಕ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 12MP ಅಲ್ಟ್ರಾ-ವೈಡ್ ಆಂಗಲ್ ಅನ್ನು ಹೊಂದಬಹುದು. ಇದು ಮೂರು ಬಣ್ಣಗಳ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದ್ದು, ಇದರ ಆರಂಭಿಕ ಬೆಲೆ 87,900 ರೂ. ಎಂದು ಹೇಳಲಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ52 2018
ಈ ಫೋನ್ ಏಪ್ರಿಲ್ 11 ರಂದು ಬಿಡುಗಡೆಯಾಗಲಿದ್ದು, ಇದು ಶಕ್ತಿಯುತ 7300mAh ಬ್ಯಾಟರಿಯನ್ನು ಹೊಂದಿದೆ. ಇದುವರೆಗಿನ ಅತಿದೊಡ್ಡ ಬ್ಯಾಟರಿಯೊಂದಿಗೆ ಬರಲಿರುವ ಸ್ಮಾರ್ಟ್‌ಫೋನ್ ಇದಾಗಲಿದೆ. ಇದು ವಿವೋ Y300 Pro ನ ಮರುಬ್ರಾಂಡೆಡ್ ಆವೃತ್ತಿಯಾಗಿದ್ದು, ಮಾರ್ಚ್ 31 ರಂದು ಚೀನಾದಲ್ಲಿ ಬಿಡುಗಡೆಯಾಗಲಿದೆ. ಗ್ಲೇಸಿಯರ್ ಸಿಲ್ವರ್ ಮತ್ತು ಸ್ಟೆಲ್ಲಾರ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಬರುವ ಈ ಫೋನ್‌ನ ಆರಂಭಿಕ ಬೆಲೆ ರೂ. 21,999 ಆಗಿರಬಹುದು.
Tech Tips: ವಾಟ್ಸ್ಆ್ಯಪ್ ಸ್ಟೇಟಸ್‌ನಲ್ಲಿ ಹಾಡನ್ನು ಹಾಕುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್
ಮೊಟೊರೊಲಾ ಎಡ್ಜ್ 60 ಫ್ಯೂಷನ್
ಮೊಟೊರೊಲಾ ತನ್ನ ಎಡ್ಜ್ 60 ಶ್ರೇಣಿಯನ್ನು ಭಾರತಕ್ಕೆ ತರುತ್ತಿದ್ದು, ಏಪ್ರಿಲ್ 2 ರಂದು ಈ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಫೋನ್ 4 ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ ಮತ್ತು ಇದು ಹಿಂಭಾಗದಲ್ಲಿ 50MP ಮುಖ್ಯ ಸಂವೇದಕದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಇದು 5500mAh ಬ್ಯಾಟರಿಯೊಂದಿಗೆ ಬರಲಿದ್ದು, ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರ ಅಧಿಕೃತ ಬೆಲೆ ಇನ್ನೂ ಬಹಿರಂಗಗೊಂಡಿಲ್ಲ.
ಐಕ್ಯೂ Z10 5G
ಈ ಹೊಸ ಪೀಳಿಗೆಯ Z ಸರಣಿಯ ಸ್ಮಾರ್ಟ್‌ಫೋನ್ ಕೆಲವು ಆಕರ್ಷಕ ವೈಶಿಷ್ಟ್ಯಗಳಿಂದ ಸುದ್ದಿ ಆಗುತ್ತಲೇ ಇದೆ. ಈ ಮಧ್ಯಮ-ಶ್ರೇಣಿಯ ಸ್ಮಾರ್ಟ್‌ಫೋನ್ 8GB RAM ನೊಂದಿಗೆ ಜೋಡಿಸಲಾದ ಸ್ನಾಪ್‌ಡ್ರಾಗನ್ 7s Gen 3 ಪ್ರೊಸೆಸರ್‌ನಿಂದ ಚಾಲಿತವಾಗುವ ಸಾಧ್ಯತೆಯಿದೆ. ಇದು 5000nits ಗರಿಷ್ಠ ಹೊಳಪಿನೊಂದಿಗೆ ಕ್ವಾಡ್ ಕರ್ವ್ಡ್ ಡಿಸ್ಪ್ಲೇಯನ್ನು ಹೊಂದಿದೆ ಎಂದು ದೃಢಪಡಿಸಲಾಗಿದೆ. ಇದರ ಬೆಲೆ ಎಷ್ಟೆಂದು ಬಹಿರಂಗಗೊಂಡಿಲ್ಲ.
ವಿವೋ ವಿ50ಇ
ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಮತ್ತೊಂದು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ವಿವೋ ವಿ50ಇ. ಇದು ಕ್ಯಾಮೆರಾ ಕೇಂದ್ರಿತ ಸ್ಮಾರ್ಟ್‌ಫೋನ್ ಆಗಿದೆ. ಈ ಫೋನ್ನಲ್ಲಿ 50MP ಸೋನಿ IMX882 ಸೆನ್ಸರ್‌ನೊಂದಿಗೆ 50MP ಮುಖ್ಯ ಕ್ಯಾಮೆರಾವನ್ನು ಒಳಗೊಂಡಿರುವ ಅಪ್‌ಗ್ರೇಡ್ ಮಾಡಿದ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಪಡೆಯುತ್ತೀರಿ. ವೆಡ್ಡಿಂಗ್ ಪೋರ್ಟ್ರೇಟ್ ಸ್ಟುಡಿಯೋ, ಮಲ್ಟಿಫೋಕಲ್ ಪೋರ್ಟ್ರೇಟ್‌ಗಳು ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡಬಹುದು. ಆದ್ದರಿಂದ, ಇದು ಕ್ಯಾಮೆರಾ ಪ್ರಿಯರಿಗೆ ಉತ್ತಮ ಆಯ್ಕೆ ಆಗಬಹುದು.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ