Ghibli Style Image: ಇಂಟರ್ನೆಟ್ನಲ್ಲಿ ಸಂಚಲನ ಸೃಷ್ಟಿಸಿದ ಘಿಬ್ಲಿ ಇಮೇಜ್: ಇದನ್ನು ಉಚಿತವಾಗಿ ಬಳಸುವುದು ಹೇಗೆ?
ChatGPT ಯ ಈ ವೈಶಿಷ್ಟ್ಯದ ಮೂಲಕ, ಬಳಕೆದಾರರು ತಮ್ಮ ನೆಚ್ಚಿನ ಫೋಟೋಗಳು, ಸಿನಿಮಾ ನಟರ ಫೋಟೋಗಳು ಅಥವಾ ಜನಪ್ರಿಯ ಮೀಮ್‌ಗಳನ್ನು ಸ್ಟುಡಿಯೋ ಘಿಬ್ಲಿ ತರಹದ ಚಿತ್ರಗಳಾಗಿ ಪರಿವರ್ತಿಸುತ್ತಿದ್ದಾರೆ. ನೀವು ಕೂಡ ಘಿಬ್ಲಿ ಚಿತ್ರವನ್ನು ರಚಿಸಬಹುದು, ಅದು ಕೂಡ ಉಚಿತವಾಗಿ. ಘಿಬ್ಲಿ ಫೋಟೋವನ್ನು ಕ್ರಿಯೆಟ್ ಮಾಡೋದು ಹೇಗೆ? ಮತ್ತು ಸ್ಟುಡಿಯೋ ಘಿಬ್ಲಿ ಎಂದರೇನು? ಎಂಬ ಕುರಿತ ಮಾಹಿತಿ ಇಲ್ಲಿದೆ.

ಬೆಂಗಳೂರು (ಮಾ. 28): ಇತ್ತೀಚಿನ ದಿನಗಳಲ್ಲಿ AI ತಂತ್ರಜ್ಞಾನವು ಇಂಟರ್ನೆಟ್ (Internet) ಅನ್ನು ಪ್ರಾಬಲ್ಯಗೊಳಿಸುತ್ತಿದೆ. ಇದರಲ್ಲಿ ಹೊಸದೇನೋ ಬಂದು ಟ್ರೆಂಡ್ ಸೃಷ್ಟಿಸುತ್ತಿರುತ್ತದೆ. ಬಳಿಕ ಅದನ್ನ ಎಲ್ಲರೂ ಅನುಸರಿಸುತ್ತಾರೆ ಮತ್ತು ಸಾಮಾಜಿಕ ಮಾಧ್ಯಮ ಪೂರ್ತಿ ಅದರದ್ದೇ ಹವಾ. ಅದರಂತೆ ಈಗ ಇಂಟರ್ನೆಟ್ನಲ್ಲಿ ಘಿಬ್ಲಿ ಸ್ಟೈಲ್ ಇಮೇಜ್ ಧೂಳೆಬ್ಬಿಸುತ್ತಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸ್ಟುಡಿಯೋ ಘಿಬ್ಲಿ ಶೈಲಿಯ ಫೋಟೋಗಳು ಚರ್ಚೆಯ ವಿಷಯವಾಗಿದೆ. ಎಲ್ಲರೂ ಘಿಬ್ಲಿ ಶೈಲಿಯ ಚಿತ್ರವನ್ನು ರಚಿಸುತ್ತಿದ್ದಾರೆ. ChatGPT ಯ ಈ ಹೊಸ ಇಮೇಜ್ ಸೃಷ್ಟಿ ಸಾಧನವು ಲಕ್ಷಾಂತರ ಮೊಬೈಲ್ ಬಳಕೆದಾರರಿಗೆ ಹೊಸ ಅನುಭವವನ್ನು ನೀಡಿದೆ.
ChatGPT ಯ ಈ ವೈಶಿಷ್ಟ್ಯದ ಮೂಲಕ, ಬಳಕೆದಾರರು ತಮ್ಮ ನೆಚ್ಚಿನ ಫೋಟೋಗಳು, ಸಿನಿಮಾ ನಟರ ಫೋಟೋಗಳು ಅಥವಾ ಜನಪ್ರಿಯ ಮೀಮ್‌ಗಳನ್ನು ಸ್ಟುಡಿಯೋ ಘಿಬ್ಲಿ ತರಹದ ಚಿತ್ರಗಳಾಗಿ ಪರಿವರ್ತಿಸುತ್ತಿದ್ದಾರೆ. ನೀವು ಕೂಡ ಘಿಬ್ಲಿ ಚಿತ್ರವನ್ನು ರಚಿಸಬಹುದು, ಅದು ಕೂಡ ಉಚಿತವಾಗಿ. ಘಿಬ್ಲಿ ಫೋಟೋವನ್ನು ಕ್ರಿಯೆಟ್ ಮಾಡೋದು ಹೇಗೆ? ಮತ್ತು ಸ್ಟುಡಿಯೋ ಘಿಬ್ಲಿ ಎಂದರೇನು? ಎಂಬ ಕುರಿತ ಮಾಹಿತಿ ಇಲ್ಲಿದೆ.
It’s been 24 hours since OpenAI unexpectedly shook the AI image world with 4o image generation.
Here are the 14 most mindblowing examples so far (100% AI-generated):
1. Studio ghibli style memespic.twitter.com/E38mBnPnQh
— Barsee 🐶 (@heyBarsee) March 26, 2025
ಈ ಜನರು ಮಾತ್ರ ChatGPT ಮೂಲಕ ಘಿಬ್ಲಿ ಚಿತ್ರಗಳನ್ನು ರಚಿಸಬಹುದು:
ChatGPT ಯ ಈ ಹೊಸ ವೈಶಿಷ್ಟ್ಯವನ್ನು GPT-4 ಟರ್ಬೊದಲ್ಲಿ ಕಾರ್ಯನಿರ್ವಹಿಸುವ ChatGPT ಪ್ಲಸ್ ಹೊಂದಿರುವವರು ಮತ್ತು DALL-E ಮೂಲಕ ಮಾತ್ರ ಬಳಸಬಹುದು. ಆದಾಗ್ಯೂ, ಹೊಸ ಬಳಕೆದಾರರು ಈ AI ಇಮೇಜ್ ಜನರೇಟರ್ ಅನ್ನು ಬಳಸಲು ಬಯಸಿದರೆ, ಈ ಸೌಲಭ್ಯವನ್ನು ಪಡೆಯಲು ಅವರು ತಿಂಗಳಿಗೆ $20 (ಸುಮಾರು ರೂ. 1,712) ಪಾವತಿಸಬೇಕಾಗುತ್ತದೆ. ChatGPT ನಲ್ಲಿ ಸ್ಟುಡಿಯೋ ಘಿಬ್ಲಿ ತರಹದ ಚಿತ್ರಗಳನ್ನು ರಚಿಸಲು, ನೀವು ‘ಇದನ್ನು ಘಿಬ್ಲಿ ಶೈಲಿಯ ಫೋಟೋವನ್ನಾಗಿ ಪರಿವರ್ತಿಸಬಹುದೇ?’, ‘ಸ್ಟುಡಿಯೋ ಘಿಬ್ಲಿ’ ಎಂದು ಟೈಪ್ ಮಾಡಬಹುದು.
AC White Color: ಎಸಿ ಬಿಳಿ ಬಣ್ಣದಲ್ಲೇ ಏಕೆ ಬರುತ್ತದೆ ಗೊತ್ತೇ?: ಈ ರಹಸ್ಯ ನಿಮ್ಮನ್ನು ಅಚ್ಚರಿಗೊಳಿಸುತ್ತೆ
ಸ್ಟುಡಿಯೋ ಘಿಬ್ಲಿ ಶೈಲಿಯ ಚಿತ್ರಗಳನ್ನು ಉಚಿತವಾಗಿ ರಚಿಸುವುದು ಹೇಗೆ?:
ChatGPT ಹೊರತುಪಡಿಸಿ, ನೀವು ಇದನ್ನು ಉಚಿತವಾಗಿ ಮಾಡಲು ಕೆಲ ಆ್ಯಪ್ಗಳಿವೆ. ಫ್ರೀ ಆಗಿ ಘಿಬ್ಲಿ ಚಿತ್ರಗಳನ್ನು ರಚಿಸಲು ಮೊದಲ ಸಾಧನವೆಂದರೆ ಮಿಡ್‌ಜರ್ನಿ, ಇಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲು ಸ್ಟುಡಿಯೋ ಘಿಬ್ಲಿ-ಪ್ರೇರಿತ, ಹಯಾವೊ ಮಿಯಾಜಾಕ್ ಮತ್ತು ಇತರ ಕೀವರ್ಡ್‌ಗಳನ್ನು ಬಳಸಬಹುದು. ಇದರೊಂದಿಗೆ ನಿಮ್ಮ ಚಿತ್ರವು ಘಿಬ್ಲಿ ಶೈಲಿಯಾಗುತ್ತದೆ.
View this post on Instagram
ಇದಲ್ಲದೆ, Leonardo.ai ಘಿಬ್ಲಿ ಚಿತ್ರಗಳನ್ನು ರಚಿಸಲು ಉತ್ತಮ ಆಯ್ಕೆಯಾಗಿದೆ. ಇಲ್ಲಿ ನೀವು ಉಚಿತ ಕ್ರೆಡಿಟ್‌ಗಳನ್ನು ಪಡೆಯುತ್ತೀರಿ ಮತ್ತು ವಿವರವಾದ AI ಚಿತ್ರಗಳು ಮತ್ತು ವೀಡಿಯೊಗಳನ್ನು ರಚಿಸುವ ಅವಕಾಶವನ್ನು ಪಡೆಯುತ್ತೀರಿ. ವೆಬ್ ಅಪ್ಲಿಕೇಶನ್ ಬಳಸಿಕೊಂಡು ನೀವು ಕೆಲವು ಅದ್ಭುತವಾದ ಸ್ಟುಡಿಯೋ ಘಿಬ್ಲಿ-ಪ್ರೇರಿತ ಚಿತ್ರಗಳನ್ನು ರಚಿಸಬಹುದು. ನೀವು ನೀಡುವ ಪ್ರಾಂಪ್ಟ್‌ಗಳು ನಿಖರವಾಗಿವೆಯೆ ಎಂದು ಖಚಿತಪಡಿಸಿಕೊಳ್ಳಬೇಕು ಮತ್ತು ಸರಿಯಾದ ಫಲಿತಾಂಶಗಳನ್ನು ಪಡೆಯುವವರೆಗೆ ಚಿತ್ರಗಳನ್ನು ರಚಿಸುವುದನ್ನು ಮುಂದುವರಿಸಬೇಕು.
ನೀವು ಘಿಬ್ಲಿ ಶೈಲಿಯ ಚಿತ್ರಗಳನ್ನು ಉಚಿತವಾಗಿ ರಚಿಸಲು ಬಯಸಿದರೆ ಎಲೋನ್ ಮಸ್ಕ್ ಅವರ ಗ್ರೋಕ್ AI ಅನ್ನು ಕೂಡ ಬಳಸಬಹುದು. Grok AI ChatGPT ಯಷ್ಟು ನಿಖರವಾದ ಚಿತ್ರಗಳನ್ನು ರಚಿಸಲು ಸಾಧ್ಯವಾಗದಿದ್ದರೂ, ನೀವು ಅದನ್ನು ಉಚಿತವಾಗಿ ಅನುಭವಿಸಬಹುದು. ಗೂಗಲ್ ಎಐ ಸ್ಟುಡಿಯೋದ ಇತ್ತೀಚಿನ ಜೆಮಿನಿಯಲ್ಲಿಯೂ ಘಿಬ್ಲಿ ಶೈಲಿಯ ಚಿತ್ರಗಳನ್ನು ರಚಿಸಬಹುದು.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ