Realme Narzo 80 Series: ಭಾರತದಲ್ಲಿಂದು ಬಹುನಿರೀಕ್ಷಿತ ರಿಯಲ್ ಮಿ ನಾರ್ಜೊ 80 ಸರಣಿ ಫೋನ್ ಬಿಡುಗಡೆ: ಏನಿದೆ ಫೀಚರ್ಸ್?
Realme Narzo 80 Pro 5G and Narzo 80x 5G: ರಿಯಲ್ ಮಿ ನಾರ್ಜೊ 80 ಪ್ರೊ 5G ಮತ್ತು ನಾರ್ಜೊ 80x 5G ಮೀಡಿಯಾ ಟೆಕ್ ಡೈಮೆನ್ಸಿಟಿ ಚಿಪ್‌ಸೆಟ್‌ನೊಂದಿಗೆ ಬರಲಿದ್ದು, ಅಮೆಜಾನ್ ಮತ್ತು ರಿಯಲ್ ಮಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾರಾಟವಾಗಲಿದೆ. ಉತ್ತಮ ಗೇಮಿಂಗ್‌ಗಾಗಿ ಸ್ಮಾರ್ಟ್‌ಫೋನ್‌ನಲ್ಲಿ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಸಹ ಸೇರಿಸಲಾಗಿದೆ.

ಬೆಂಗಳೂರು (ಏ. 09): ಪ್ರಸಿದ್ಧ ರಿಯಲ್ ಮಿ ಕಂಪನಿ ಇಂದು ಭಾರತದಲ್ಲಿ ತನ್ನ ಎರಡು ಹೊಸ ಸ್ಮಾರ್ಟ್ಫೋನ್ ಅನ್ನು ಅನಾವರಣ ಮಾಡಲಿದೆ. ಇದು ರಿಯಲ್ ಮಿ ನಾರ್ಜೊ 80 ಸರಣಿಯ (Realme Narzo 80 Series) ಹೊಸ 5G ಫೋನ್ ಆಗಿದೆ. ಇದರಲ್ಲಿ ರಿಯಲ್ ಮಿ ನಾರ್ಜೊ 80 ಪ್ರೊ 5G ಮತ್ತು ನಾರ್ಜೊ 80x 5G ಫೋನ್ ಇದೆ. ಬಿಡುಗಡೆಗೂ ಮುನ್ನ ಕಂಪನಿಯು ಈ ಎರಡೂ ಮಾದರಿಗಳ ಮಾರಾಟ, ಬೆಲೆ, ಸ್ಟೂಡೆಂಟ್ ಆಫರ್ ಮತ್ತು ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ.
ಎರಡೂ ಹ್ಯಾಂಡ್‌ಸೆಟ್‌ಗಳು ಮೀಡಿಯಾ ಟೆಕ್ ಡೈಮೆನ್ಸಿಟಿ ಚಿಪ್‌ಸೆಟ್‌ನೊಂದಿಗೆ ಬರಲಿದ್ದು, ಅಮೆಜಾನ್ ಮತ್ತು ರಿಯಲ್ ಮಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾರಾಟವಾಗಲಿದೆ. ಉತ್ತಮ ಗೇಮಿಂಗ್‌ಗಾಗಿ ಸ್ಮಾರ್ಟ್‌ಫೋನ್‌ನಲ್ಲಿ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಸಹ ಸೇರಿಸಲಾಗಿದೆ. ರಿಯಲ್ ಮಿ ಹೇಳುವಂತೆ ಪ್ರೊ ಮಾದರಿಯು 90fps ನಲ್ಲಿ BGMI ಮೊಬೈಲ್ ಗೇಮ್ ಅನ್ನು ಆಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ರಿಯಲ್ ಮಿ ನಾರ್ಜೊ 80 ಸರಣಿಯ ಮಾರಾಟ ದಿನಾಂಕ, ಕೊಡುಗೆಗಳು:
ರಿಯಲ್ ಮಿ ನಾರ್ಜೊ 80 ಸರಣಿಯ ಅಧಿಕೃತ ಬಿಡುಗಡೆ ಏಪ್ರಿಲ್ 9 ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದ್ದು, ಇದನ್ನು ಅಮೆಜಾನ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದರ ನಂತರ, ನಾರ್ಜೊ 80 ಪ್ರೊ 5G ಗಾಗಿ ಅರ್ಲಿ ಬರ್ಡ್ ಸೇಲ್ ಏಪ್ರಿಲ್ 9 ರಂದು ಸಂಜೆ 6 ರಿಂದ ಬೆಳಿಗ್ಗೆ 12 ರವರೆಗೆ ಅಮೆಜಾನ್ ಮತ್ತು ಕಂಪನಿಯ ವೆಬ್‌ಸೈಟ್‌ನಲ್ಲಿ ನಡೆಯಲಿದೆ.
ಅದೇ ಸಮಯದಲ್ಲಿ, ನಾರ್ಜೊ 80 ಪ್ರೊ 5G ಮತ್ತು ನಾರ್ಜೊ 80x 5G ಎರಡರ ಸೀಮಿತ ಅವಧಿಯ ಮಾರಾಟವು ಏಪ್ರಿಲ್ 11 ರಂದು ಸಂಜೆ 6 ರಿಂದ ಮಧ್ಯರಾತ್ರಿ 12 ರವರೆಗೆ ಇರುತ್ತದೆ.
AI Aadhaar card: AI ಯಿಂದ ನಕಲಿ ಆಧಾರ್ ಕಾರ್ಡ್ ತಯಾರಿಸಬಹುದು: ಡುಪ್ಲಿಕೇಟ್ ಅನ್ನು ಗುರುತಿಸುವುದು ಹೇಗೆ?
ರಿಯಲ್ ಮಿ ನಾರ್ಜೊ 80 ಸರಣಿಯ ಬೆಲೆ (ನಿರೀಕ್ಷಿತ):
ನಾರ್ಜೊ 80 ಪ್ರೊ 5G ಬೆಲೆ 20,000 ರೂ. ಗಿಂತ ಕಡಿಮೆ ಇರಲಿದೆ ಎಂದು ರಿಯಲ್ ಮಿ ದೃಢಪಡಿಸಿದೆ, ಆದರೆ ನಾರ್ಜೊ 80x 5G ಬೆಲೆ 13,000 ರೂ. ಗಿಂತ ಕಡಿಮೆ ಇರಲಿದೆ. ಇದರಿಂದ ಕಂಪನಿಯು ಈ ಫೋನ್‌ಗಳನ್ನು ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಬಿಡುಗಡೆ ಮಾಡಲಿದೆ ಎಂಬುದು ಸ್ಪಷ್ಟವಾಗಿದೆ.
ರಿಯಲ್ ಮಿ ನಾರ್ಜೊ 80 ಸರಣಿಯ ಸ್ಟೂಡೆಂಟ್ ಆಫರ್:
ರಿಯಲ್ ಮಿ ವಿದ್ಯಾರ್ಥಿಗಳಿಗೆ ವಿಶೇಷ ಪ್ರಯೋಜನವನ್ನು ಘೋಷಿಸಿದೆ. ನಾರ್ಜೊ 80 ಪ್ರೊ 5G ಖರೀದಿಸುವ ಅರ್ಹ ವಿದ್ಯಾರ್ಥಿಗಳಿಗೆ 1,299 ರೂ. ಮೌಲ್ಯದ ಒಂದು ವರ್ಷದ ಸ್ಕ್ರೀನ್ ಡ್ಯಾಮೇಜ್ ಪ್ರೊಟೆಕ್ಷನ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಈ ಕೊಡುಗೆಯನ್ನು ಪಡೆಯಲು, ವಿದ್ಯಾರ್ಥಿಗಳು ಏಪ್ರಿಲ್ 9 ರಿಂದ ಏಪ್ರಿಲ್ 18 ರ ನಡುವೆ ಫೋನ್ ಖರೀದಿಸಬೇಕು ಮತ್ತು ಏಪ್ರಿಲ್ 28 ರೊಳಗೆ ತಮ್ಮ ವಿದ್ಯಾರ್ಥಿ ಗುರುತನ್ನು ಪರಿಶೀಲಿಸಬೇಕು. ಪರಿಶೀಲನೆ ಪೂರ್ಣಗೊಂಡ ನಂತರ, ಅವರ ಖಾತೆಗೆ ಕೂಪನ್ ಅನ್ನು ಸೇರಿಸಲಾಗುತ್ತದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ