AI Aadhaar card: AI ಯಿಂದ ನಕಲಿ ಆಧಾರ್ ಕಾರ್ಡ್ ತಯಾರಿಸಬಹುದು: ಡುಪ್ಲಿಕೇಟ್ ಅನ್ನು ಗುರುತಿಸುವುದು ಹೇಗೆ?
ಆಧಾರ್ ಎಂಬುದು 12-ಅಂಕಿಯ ವಿಶಿಷ್ಟ ಐಡಿಯಾಗಿದ್ದು, ಆತ ಮಗುವಾಗಿರಲಿ ಅಥವಾ ವಯಸ್ಕನಾಗಿರಲಿ ಇದನ್ನು ಭಾರತ ಸರ್ಕಾರವು ಪ್ರತಿಯೊಬ್ಬ ನಾಗರಿಕನಿಗೆ ನೀಡುತ್ತದೆ. ಆದರೆ, ಕೃತಕ ಬುದ್ಧಿಮತ್ತೆ (AI) ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸುತ್ತದೆ ಎಂಬ ವಿಚಾರ ಬಹಿರಂಗವಾಗಿದೆ. ಇದು ಸೈಬರ್ ಸುರಕ್ಷತೆಯ ಬಗ್ಗೆ ಹೊಸ ಕಳವಳಗಳನ್ನು ಹುಟ್ಟುಹಾಕಿದೆ.

ಬೆಂಗಳೂರು (ಏ. 08): ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (Artificial Intelligence) ವೇಗವಾಗಿ ಅಭಿವೃದ್ಧಿ ಹೊಂದಿದೆ. ಮೊನ್ನೆಯಷ್ಟೆ, AI ರಚಿಸಿದ ಇಮೇಜ್ ಘಿಬ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈಗಲೂ ಇದು ಟ್ರೆಂಡಿಂಗ್ನಲ್ಲಿದೆ. ಅದೇ ಸಮಯದಲ್ಲಿ, ಕೃತಕ ಬುದ್ಧಿಮತ್ತೆ (AI) ನಕಲಿ ಆಧಾರ್ ಕಾರ್ಡ್‌ಗಳನ್ನು ಸಹ ಸೃಷ್ಟಿಸಿದೆ, ಇದು ಗಂಭೀರ ಸಮಸ್ಯೆಗೆ ಕಾರಣವಾಗಿದೆ. ಇತ್ತೀಚೆಗೆ, ಲಿಂಕ್ಡ್ಇನ್ ಬಳಕೆದಾರರೊಬ್ಬರು ಆಧಾರ್ ಕಾರ್ಡ್ ರಚಿಸಬಹುದೇ ಎಂದು ಪರಿಶೀಲಿಸಲು ChatGPT ಅನ್ನು ಬಳಸಿದರು. ಆಗ ಬಂದ ಫಲಿತಾಂಶವು ಎಲ್ಲರ ಆಘಾತಕ್ಕೆ ಕಾರಣವಾಗಿದೆ. ಇದು ಸೈಬರ್ ಸುರಕ್ಷತೆಯ ಬಗ್ಗೆ ಹೊಸ ಕಳವಳಗಳನ್ನು ಹುಟ್ಟುಹಾಕಿದೆ.
ಆಧಾರ್ ಎಂಬುದು 12-ಅಂಕಿಯ ವಿಶಿಷ್ಟ ಐಡಿಯಾಗಿದ್ದು, ಆತ ಮಗುವಾಗಿರಲಿ ಅಥವಾ ವಯಸ್ಕನಾಗಿರಲಿ ಇದನ್ನು ಭಾರತ ಸರ್ಕಾರವು ಪ್ರತಿಯೊಬ್ಬ ನಾಗರಿಕನಿಗೆ ನೀಡುತ್ತದೆ. ಇದು ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ಮಾಹಿತಿಯ ಆಧಾರದ ಮೇಲೆ ನಿಮ್ಮ ಗುರುತನ್ನು ಸಾಬೀತುಪಡಿಸುತ್ತದೆ.
ನಕಲಿ ಮತ್ತು ನಿಜವಾದ ಆಧಾರ್ ಕಾರ್ಡ್‌ಗಳನ್ನು ಹೇಗೆ ಗುರುತಿಸುವುದು ಎಂಬುದನ್ನು ನೋಡುವುದಾದರೆ, AI ಬಳಸಿ ಮಾಡಿದ ಆಧಾರ್ ಕಾರ್ಡ್‌ನಲ್ಲಿ ನಿಜವಾದ ಫೋಟೋವನ್ನು ಅಪ್‌ಲೋಡ್ ಮಾಡಿದರೂ, ಫೋಟೋ ಸಾಮಾನ್ಯವಾಗಿ ತಿರುಚಿದಂತೆ ಕಾಣುತ್ತದೆ. ಮೂಲ ಕಾರ್ಡ್‌ನಲ್ಲಿರುವ ಪಾಸ್‌ಪೋರ್ಟ್ ಗಾತ್ರದ ಫೋಟೋ ಸ್ಪಷ್ಟ ಮತ್ತು ನಿಖರವಾಗಿರುತ್ತದೆ.
ನಕಲಿ ಕಾರ್ಡ್‌ನಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಬರೆಯಲಾದ ಅಕ್ಷರಗಳ ಗಾತ್ರ, ಶೈಲಿ ಮತ್ತು ಜೋಡಣೆ ವಿಭಿನ್ನವಾಗಿರಬಹುದು. ನಿಜವಾದ ಆಧಾರ್ ಕಾರ್ಡ್‌ಗಳಲ್ಲಿ, ಕೊಲನ್ (:), ಸ್ಲ್ಯಾಷ್ (/), ಅಲ್ಪವಿರಾಮ (,) ಇತ್ಯಾದಿಗಳನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಬಳಸಲಾಗುತ್ತದೆ, ಆದರೆ ನಕಲಿ ಕಾರ್ಡ್‌ಗಳಲ್ಲಿ, ಇವು ಅನಿಯಮಿತವಾಗಿ ಕಾಣಿಸಬಹುದು.
WhatsApp: ವಾಟ್ಸ್ಆ್ಯಪ್ನಲ್ಲಿ ನೀವು ಕಳುಹಿಸಿದ ಫೋಟೋವನ್ನು ಅವರು ಸೇವ್ ಮಾಡದಂತೆ ಮಾಡೋದು ಹೇಗೆ?
ನಿಜವಾದ ಕಾರ್ಡ್‌ನಲ್ಲಿ ಆಧಾರ್ ಮತ್ತು ಭಾರತ ಸರ್ಕಾರದ ಲೋಗೋದ ಗುಣಮಟ್ಟ ಮತ್ತು ಸ್ಥಾನವು ಸ್ಪಷ್ಟವಾಗಿ ಗೋಚರಿಸುತ್ತದೆ ಆದರೆ ನಕಲಿ ಕಾರ್ಡ್‌ನಲ್ಲಿ ಅದು ಮಸುಕಾಗಿರಬಹುದು ಅಥವಾ ವಿರೂಪಗೊಂಡಿರಬಹುದು. ನಕಲಿ ಮತ್ತು ನೈಜ ಕಾರ್ಡ್‌ಗಳನ್ನು ಗುರುತಿಸಲು ಅತ್ಯಂತ ಪ್ರಮುಖ ಮಾರ್ಗವೆಂದರೆ QR ಕೋಡ್ ಅನ್ನು ಸ್ಕ್ಯಾನ್ ಮಾಡುವುದು. ಮೂಲ QR ಕೋಡ್ ಅನ್ನು ಸ್ಕ್ಯಾನ್ ಮಾಡುವುದರಿಂದ UIDAI ವೆಬ್‌ಸೈಟ್‌ಗೆ ಸಂಬಂಧಿಸಿದ ಸರಿಯಾದ ಮಾಹಿತಿ ನಿಮಗೆ ಸಿಗುತ್ತದೆ.
ಇದಲ್ಲದೆ, ನೀವು UIDAI ವೆಬ್‌ಸೈಟ್‌ನಿಂದ ಆಧಾರ್‌ನ ಸಿಂಧುತ್ವವನ್ನು ಸಹ ಪರಿಶೀಲಿಸಬಹುದು. ಇದಕ್ಕಾಗಿ, ಮೊದಲು ವೆಬ್‌ಸೈಟ್‌ಗೆ ಹೋಗಿ: https://myaadhaar.uidai.gov.in/verifyAadhaar . ಇದಾದ ನಂತರ ‘Check Aadhaar Validity’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಈಗ 12 ಅಂಕಿಯ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ.
ಆಧಾರ್ ನಿಜವಾಗಿದ್ದರೆ, ಡಿಸ್ಪ್ಲೇ ಮೇಲೆ “ಆಧಾರ್ ಪರಿಶೀಲನೆ ಪೂರ್ಣಗೊಂಡಿದೆ” ಎಂದು ಕಾಣಿಸುತ್ತದೆ ಮತ್ತು ಹೆಸರು, ಲಿಂಗ ಮತ್ತು ರಾಜ್ಯದ ವಿವರಗಳು ಗೋಚರಿಸುತ್ತವೆ. ಈ ವಿವರಗಳನ್ನು ನಿಮ್ಮ ಕಾರ್ಡ್‌ನೊಂದಿಗೆ ಹೊಂದಿಸಿ, ಅವು ಹೊಂದಿಕೆಯಾದರೆ, ಕಾರ್ಡ್ ನಿಜವಾಗಿರುತ್ತದೆ. VID ಎಂಬುದು 16-ಅಂಕಿಯ ತಾತ್ಕಾಲಿಕ ಸಂಖ್ಯೆಯಾಗಿದ್ದು, ಅದನ್ನು ನೀವೇ ರಚಿಸಬಹುದು ಮತ್ತು ಅದನ್ನು ನಿಮ್ಮ ಮೂಲ ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾಗಿರುತ್ತದೆ.
ಆಧಾರ್ ಹೊಂದಿರುವವರು ಮಾತ್ರ ಸ್ವತಃ ವಿಐಡಿ ರಚಿಸಬಹುದು. ಬೇರೆ ಯಾವುದೇ ಸಂಸ್ಥೆ, ಅಪ್ಲಿಕೇಶನ್ ಅಥವಾ ಸೇವಾ ಪೂರೈಕೆದಾರರು ನಿಮಗಾಗಿ VID ಅನ್ನು ರಚಿಸಲು ಸಾಧ್ಯವಿಲ್ಲ. ಒಮ್ಮೆ ಜನರೇಟ್ ಆದ ನಂತರ, ಅದನ್ನು ನಿಮ್ಮ ನೋಂದಾಯಿತ ಮೊಬೈಲ್‌ಗೆ SMS ಮೂಲಕ ಕಳುಹಿಸಲಾಗುತ್ತದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:02 pm, Tue, 8 April 25