ಟೆಲಿಕಾಂ ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ (Reliance Jio) OTT ಪ್ರಿಯರಿಗಾಗಿ ಈಗಾಗಲೇ ಅನೇಕ ಉತ್ತಮ ಯೋಜನೆಗಳನ್ನು ಹೊಂದಿದೆ. ಇದರ ನಡುವೆ ಕಂಪನಿಯು ಮತ್ತೊಂದು ಹೊಸ ರೀಚಾರ್ಜ್ ಪ್ಲಾನ್ ಅನ್ನು ಪ್ರಾರಂಭಿಸಿದೆ. ಜಿಯೋದ ಈ ನೂತನ ಯೋಜನೆ ಸಾಕಷ್ಟು ಪ್ರಯೋಜನಕಾರಿ ಆಗಿದೆ. ಮುಖ್ಯವಾಗಿ ಜಿಯೋ ಈ ಯೋಜನೆಯೊಂದಿಗೆ ನಿಮಗೆ ಒಂದು ವರ್ಷದ ವರೆಗೆ ಅಮೆಜಾನ್ ಪ್ರೈಮ್ ವಿಡಿಯೋದ ಪ್ರಯೋಜನವನ್ನು ನೀಡುತ್ತದೆ.
ರಿಲಯನ್ಸ್ ಜಿಯೋದ ಈ ಹೊಸ ಯೋಜನೆಯ ಬೆಲೆ 3227 ರೂ. ಆಗಿದೆ. ಈ ಜಿಯೋ ಯೋಜನೆಯಲ್ಲಿ ಎಷ್ಟು ಡೇಟಾವನ್ನು ಪಡೆಯಬಹುದು?, ಎಷ್ಟು ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ?. ಇಲ್ಲಿದೆ ನೋಡಿ ಮಾಹಿತಿ.
ಜಿಯೋದ 3227 ರೂ. ಪ್ಲಾನ್ನಲ್ಲಿ ನೀವು ಪ್ರತಿದಿನ 2 GB ಹೈ-ಸ್ಪೀಡ್ ಡೇಟಾದ ಪ್ರಯೋಜನವನ್ನು ಪಡೆಯುತ್ತೀರಿ, ಆದರೆ ಮಿತಿ ಮುಗಿದ ನಂತರ, ವೇಗವು 64Kbps ಗೆ ಕಡಿಮೆಯಾಗುತ್ತದೆ. ಇದರೊಂದಿಗೆ, ಸ್ಥಳೀಯ ಮತ್ತು STD ಕರೆ ಮಾಡುವ ಸೌಲಭ್ಯ ಯಾವುದೇ ನೆಟ್ವರ್ಕ್ಗೆ ಉಚಿತವಾಗಿದೆ. ದಿನಕ್ಕೆ 100 SMS ನ ಪ್ರಯೋಜನವನ್ನು ಸಹ ಪಡೆಯುತ್ತೀರಿ.
WhatsApp New Feature: ವಾಟ್ಸ್ಆ್ಯಪ್ನಿಂದ ಬಂತು ಊಹಿಸಲಾಗದ ಫೀಚರ್: ಒಂದೆ ಆ್ಯಪ್ನಲ್ಲಿ ಎರಡು ಅಕೌಂಟ್
ರಿಲಯನ್ಸ್ ಜಿಯೋದ ಈ ಪ್ರಿಪೇಯ್ಡ್ ಪ್ಲಾನ್ ಅನ್ನು ನೀವು 365 ದಿನಗಳ ದೀರ್ಘಾವಧಿಯ ವ್ಯಾಲಿಡಿಟಿಯೊಂದಿಗೆ ಪಡೆಯುತ್ತೀರಿ. 365 ದಿನಗಳ ವ್ಯಾಲಿಡಿಟಿಯ ಪ್ರಕಾರ ಮತ್ತು ಪ್ರತಿದಿನ 2 ಜಿಬಿ ಡೇಟಾ ಎಂದರೆ ಒಟ್ಟು 730 ಜಿಬಿ ಹೈ-ಸ್ಪೀಡ್ ಡೇಟಾದ ಪ್ರಯೋಜನವನ್ನು ಪಡೆಯುತ್ತೀರಿ. ಒಮ್ಮೆ ರಿಚಾರ್ಜ್ ಮಾಡಿದರೆ ಮತ್ತೆ ಒಂದು ವರ್ಷ ಯಾವುದೇ ಟೆನ್ಶನ್ ಇರುವುದಿಲ್ಲ.
ಈ 3227 ರೂ. ಯೋಜನೆಯೊಂದಿಗೆ, ರಿಲಯನ್ಸ್ ಜಿಯೋ ನಿಮಗೆ 1 ವರ್ಷಕ್ಕೆ ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್, ಜಿಯೋ ಸಿನಿಮಾ, ಜಿಯೋ ಟಿವಿ ಮತ್ತು ಜಿಯೋ ಕ್ಲೌಟ್ಗೆ ಉಚಿತ ಪ್ರವೇಶವನ್ನು ಪಡೆಯಬಹುದು. ನಿಮ್ಮ ಪ್ರದೇಶದಲ್ಲಿ ಜಿಯೋ 5G ಸೇವೆಯನ್ನು ಹೊಂದಿದ್ದರೆ ಮತ್ತು ನಿಮ್ಮದು 5G ಫೋನ್ ಆಗದ್ದರೆ, ಈ ಯೋಜನೆಯೊಂದಿಗೆ ನೀವು ಅನಿಯಮಿತ ಟ್ರೂ 5G ಡೇಟಾವನ್ನು ಆನಂದಿಸಬಹುದು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Sun, 22 October 23