ಯುಎಸ್​ಬಿ ಟೈಪ್ ಎ ಮತ್ತು ಸಿ ಮಧ್ಯೆ ಏನು ವ್ಯತ್ಯಾಸ? ವಿವಿಧ ಯುಎಸ್​ಬಿ ಮತ್ತು ಕೇಬಲ್​ಗಳನ್ನು ತಿಳಿಯಿರಿ

|

Updated on: May 26, 2024 | 3:02 PM

Different types of USBs and Cables: ನಾನಾ ರೀತಿಯ ಯುಎಸ್​ಬಿ ಮತ್ತು ಕೇಬಲ್​ಗಳು ಲಭ್ಯ ಇವೆ. ಯುಎಸ್​ಬಿ ಎಂಬುದು ಕಂಪ್ಯೂಟರ್ ಹಾಗೂ ಅವುಗಳಿಗೆ ಜೋಡಿತವಾದ ಬಾಹ್ಯ ಸಾಧನಗಳನ್ನು ಸಂಪರ್ಕಿಸಲು ಇರುವ ಕೇಬಲ್ ರೀತಿಯ ಒಂದು ಸಾಧನ. ಟಿಎಸ್ ಕೇಬಲ್ ಇತ್ಯಾದಿಯವು ಆಡಿಯೋ ಕೇಬಲ್​ಗಳಾಗಿರುತ್ತವೆ. ಈ ಯುಎಸ್​ಬಿ ಮತ್ತು ಕೇಬಲ್​ಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಯುಎಸ್​ಬಿ ಟೈಪ್ ಎ ಮತ್ತು ಸಿ ಮಧ್ಯೆ ಏನು ವ್ಯತ್ಯಾಸ? ವಿವಿಧ ಯುಎಸ್​ಬಿ ಮತ್ತು ಕೇಬಲ್​ಗಳನ್ನು ತಿಳಿಯಿರಿ
ಯುಎಸ್​ಬಿ
Follow us on

ತಂತ್ರಜ್ಞಾನ ಆವಿಷ್ಕಾರಗೊಂಡಂತೆ ವಿವಿಧ ರೀತಿಯ ಮಲ್ಟಿಮೀಡಿಯಾ ಉತ್ಪನ್ನಗಳು ಹೆಚ್ಚುತ್ತಿವೆ. ತರಹಾವೇರಿ ವಿಡಿಯೋ ಮತ್ತು ಆಡಿಯೋ ಅವತರಣಿಕೆಗಳು ಸೃಷ್ಟಿಯಾಗುತ್ತಿರುತ್ತವೆ. ನಾನಾ ರೀತಿಯ ವಯರ್​ಗಳನ್ನು, ಕನೆಕ್ಟರ್​ಗಳನ್ನು ಕಾಣಬಹುದು. ಎಲೆಕ್ಟ್ರಾನಿಕ್ ಗ್ಯಾಜೆಟ್​ಗಳಲ್ಲಿ (electronic gadgets) ಬಳಸಲಾಗುವ ವಯರ್​ಗಳನ್ನು ಯುಎಸ್​ಬಿ ಮತ್ತು ಕೇಬಲ್​ಗಳೆಂದು ವರ್ಗೀಕರಿಸಬಹುದು. ಯುಎಸ್​ಬಿಯಲ್ಲಿ ನಾನಾ ರೀತಿಯದ್ದಿರುತ್ತವೆ. ಕೇಬಲ್​ನಲ್ಲೂ ನಾನಾ ರೀತಿ ಇರುತ್ತವೆ.

ಯುಎಸ್​ಬಿ ಯಾವುದು?

ಯುಎಸ್​ಬಿ ಎಂದರೆ ಯೂನಿವರ್ಸಲ್ ಸೀರಿಯಲ್ ಬಸ್. ಇದು ಕಂಪ್ಯೂಟರ್ ಹಾಗೂ ಅದರ ಬಾಹ್ಯ ಬಿಡಿಭಾಗಗಳ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತದೆ. ಉದಾಹರಣೆಗೆ, ಕೀಬೋರ್ಡ್, ಮೌಸ್ ಇತ್ಯಾದಿ. ಕನೆಕ್ಟರ್​ನ ತುದಿಯ ಆಕಾರದ ಮೇಲೆ ಯುಎಸ್​ಬಿ ಯಾವ ವಿಧ ಎಂದು ವರ್ಗೀಕರಿಸಬಹುದು.

ಯುಎಸ್​ಬಿ ಟೈಪ್ ಎ, ಬಿ, ಸಿ, ಮೈಕ್ರೋ ಬಿ, 3.0 ಇತ್ಯಾದಿ ನಾನಾ ವಿಧ ಇವೆ. ಯುಎಸ್​ಬಿ ಟೈಪ್ ಎ ಅತಿ ಹೆಚ್ಚು ಬಳಕೆಯಲ್ಲಿದೆ. ಯುಎಸ್​ಬಿ ಟೈಪ್ ಸಿ ಈಗ ಹೆಚ್ಚೆಚ್ಚು ಬಳಕೆಗೆ ಬರುತ್ತಿದೆ.

ಇದನ್ನೂ ಓದಿ: Smartphone Update: ನಿಮ್ಮ ಸ್ಮಾರ್ಟ್​ಫೋನ್ ಟೈಮ್ ಟು ಟೈಮ್ ಅಪ್​ಡೇಟ್ ಮಾಡದಿದ್ದರೆ ಏನಾಗುತ್ತೆ?

ಕೇಬಲ್​ಗಳ ವಿಧ

ಈ ಕೇಬಲ್​ಗಳು ಆಡಿಯೋ ಕನೆಕ್ಟರ್ ಆಗಿ ಬಳಕೆ ಆಗುತ್ತವೆ. ಮೊಬೈಲ್ ಇಯರ್ ಫೋನ್, ಲ್ಯಾಪ್​ಟಾಪ್ ಇಯರ್ ಫೋನ್, ಸ್ಪೀಕರ್, ಡಿವಿಡಿ ಪ್ಲೇಯರ್ ಇತ್ಯಾದಿಗಳಿಗೆ ಪ್ರತ್ಯೇಕವಾಗಿ ಕೇಬಲ್​ಗಳಿರುತ್ತವೆ. ಇವುಗಳ ಆಕಾರದಲ್ಲೂ ವ್ಯತ್ಯಾಸ ಇರುತ್ತದೆ.

ಮೊಬೈಲ್ ಇಯರ್​ಫೋನ್​ಗಳು ಟಿಎಸ್ ಕೇಬಲ್​ಗಳಾಗಿರುತ್ತವೆ. ಎಕ್ಸ್​ಎಲ್​ಆರ್, ಆರ್​ಸಿಎ, ಮಿಡಿ ಇತ್ಯಾದಿ ರೀತಿಯ ಕೇಬಲ್​ಗಳಿವೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ