Kannada News Technology Lava Blaze 5G new version 6GB RAM now available to purchase in india via flipkart technology news in kannada
Lava Blaze 5G: ವಿದೇಶಿ ಮೊಬೈಲ್ ಕಂಪನಿಗಳ ಹುಟ್ಟಡಗಿಸಿದ ಭಾರತದ ಲಾವಾ ಬ್ಲೇಜ್ ಈಗ ಖರೀದಿಗೆ ಲಭ್ಯ
ಲಾವಾ ಬ್ಲೆಜ್ 5ಜಿ (Lava Blaze 5G) ಕಳೆದ ಅಕ್ಟೋಬರ್ನಲ್ಲಿ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ 2022 ಸಮಾವೇಶದಲ್ಲಿ ಅನಾವರಣಗೊಂಡಿತ್ತು. ಇದೀಗ ಲಾವಾ ಈ ಫೋನಿನ ಮತ್ತೊಂದು ಸ್ಟೋರೇಜ್ ಆಯ್ಕೆ ಬಿಡುಗಡೆ ಮಾಡಿ ಖರೀದಿಗೆ ಸಿಗುತ್ತಿದೆ.
lava blaze 5g
Follow us on
ಮಾರುಕಟ್ಟೆಯಲ್ಲಿ ಸದಾ ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗಳನ್ನು (Smartphones) ಬಿಡುಗಡೆ ಮಾಡಿ ಸುದ್ದಿಯಾಗುವ ಭಾರತದ ಪ್ರಸಿದ್ಧ ಲಾವಾ (Lava) ಕಂಪನಿ ಕಳೆದ ವರ್ಷ ನವೆಂಬರ್ನಲ್ಲಿ ದೇಶದಲ್ಲಿ ಊಹಿಸಲಾಗದ ಬೆಲೆಗೆ ಆಕರ್ಷಕ 5ಜಿ ಫೋನನ್ನು ಪರಿಚಿಯಿಸಿತ್ತು. ಇದರ ಹೆಸರು ಲಾವಾಬ್ಲೆಜ್ 5ಜಿ (Lava Blaze 5G). ಅಕ್ಟೋಬರ್ನಲ್ಲಿ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ 2022 ಸಮಾವೇಶದಲ್ಲಿ ಕಂಪನಿಯು ಈ ಫೋನ್ ಅನ್ನು ಅನಾವರಣ ಮಾಡಿತ್ತು. ಈ ಸ್ಮಾರ್ಟ್‌ಫೋನ್ ದೇಶದ ಅತಿ ಅಗ್ಗದ 5ಜಿ ಫೋನ್ ಎನಿಸಿಕೊಂಡಿದೆ. ಈ ಮೂಲಕ ವಿದೇಶಿ ಸ್ಮಾರ್ಟ್ಫೋನ್ಗಳಿಗೆ ನಡುಕ ಹುಟ್ಟಿಸಿತ್ತು. ಮೊನ್ನೆಯಷ್ಟೆ ಲಾವಾ ಈ ಫೋನಿನ ಮತ್ತೊಂದು ಸ್ಟೋರೇಜ್ ಆಯ್ಕೆ ಬಿಡುಗಡೆ ಮಾಡಿ ಸದ್ದು ಮಾಡಿತ್ತು. ಇದೀಗ ಈ ಸ್ಟೋರೇಜ್ ಖರೀದಿಗೆ ಸಿಗುತ್ತಿದೆ.
ಹೊಸದಾಗಿ ಬಿಡುಗಡೆಗೊಂಡ ಸ್ಟೋರೇಜ್ನಿಂದ ಲಾವಾ ಬ್ಲೇಜ್ 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಈಗ ಒಟ್ಟು ಎರಡು ಮಾದರಿಯಲ್ಲಿ ಖರೀದಿಗೆ ಸಿಗುತ್ತಿದೆ. ಇದರ 4GB RAM + 128GB ಸ್ಟೋರೇಜ್ ಮಾದರಿಗೆ 9,999ರೂ. ಬೆಲೆ ಇದೆ.
ಹೊಸದಾಗಿ ಬಿಡುಗಡೆ ಆಗಿರುವ 6GB RAM + 128GB ಸ್ಟೋರೇಜ್ ಸಾಮರ್ಥ್ಯಕ್ಕೆ 11,999 ರೂ. ನಿಗದಿ ಮಾಡಲಾಗಿದೆ.
ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ ಖರೀದಿಗೆ ಸಿಗುತ್ತದೆ.
ಈ ಫೋನಿನ ಫೀಚರ್ಸ್ ಬಗ್ಗೆ ನೋಡುವುದಾದರೆ, ಇದು 720 x 1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.51 ಇಂಚಿನ HD+ IPS ಡಿಸ್‌ಪ್ಲೇಯನ್ನು ಹೊಂದಿದೆ. 90Hz ರಿಫ್ರೆಶ್ ದರಕ್ಕೆ ಬೆಂಬಲಿಸುತ್ತದೆ. ವೈಡ್‌ವೈನ್ L1 ಬೆಂಬಲವನ್ನು ಕೂಡ ಪಡೆದುಕೊಂಡಿದೆ.
7nm ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4 GB RAM ಮತ್ತು 128GB ಇನ್‌ಬಿಲ್ಟ್ ಸ್ಟೋರೇಜ್ ಅನ್ನು ಹೊಂದಿದೆ.
ಲಾವಾ ಬ್ಲೇಜ್ 5G ಸ್ಮಾರ್ಟ್‌ಫೋನ್ AI- ಬೆಂಬಲಿತ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ.
ಇದರ ಜೊತೆಗೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದರಲ್ಲಿರುವ ಕ್ಯಾಮೆರಾ ಫೀಚರ್ಸ್‌ಗಳಲ್ಲಿ AI, ಬ್ಯೂಟಿ, ಫಿಲ್ಟರ್‌ಗಳು, GIF, HDR, ಮ್ಯಾಕ್ರೋ, ಮೋಷನ್, ನೈಟ್, ಪನೋರಮಾ, ಪೋರ್ಟ್ರೇಟ್, ಸ್ಲೋ ಮೋಷನ್ ಟೈಮ್‌ಲ್ಯಾಪ್ಸ್ ನಂತಹ ವಿಭಿನ್ನ ಫೀಚರ್ಸ್‌ಗಳನ್ನು ಒಳಗೊಂಡಿದೆ.
ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 50 ಗಂಟೆಗಳ ಟಾಕ್‌ಟೈಮ್ ಮತ್ತು 25 ದಿನಗಳ ಸ್ಟ್ಯಾಂಡ್‌ಬೈ ಟೈಂ ನೀಡಲಿದೆ.
ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ಬ್ಲೂಟೂತ್ V5.1, GLONASS, 3.5mm ಆಡಿಯೋ ಜ್ಯಾಕ್, Wi-Fi 802.11 b/g/n/ac, GPRS ಮತ್ತು USB ಟೈಪ್-ಸಿ ಪೋರ್ಟ್ ಬೆಂಬಲಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.