New Maruti Alto Mileage: ದೇಶದ ಅತಿದೊಡ್ಡ ಕಾರು ಕಂಪನಿ ಮಾರುತಿ ಸುಜುಕಿ ಇಂಡಿಯಾ ತನ್ನ ಹೊಸ ಕಾರು ಮಾರುತಿ ಆಲ್ಟೊವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಇದರಲ್ಲಿ ಹಲವು ಬದಲಾವಣೆಗಳು ಇರಲಿದ್ದು, ಇದು ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಕಾರು ಆಗಬಹುದು ಎಂದು ಹೇಳಲಾಗಿದೆ. ಈ ಕಾರು 1 ಲೀಟರ್ ಪೆಟ್ರೋಲ್ ನಲ್ಲಿ ಬರೋಬ್ಬರಿ 30 ಕಿಮೀ ಅಥವಾ ಅದಕ್ಕಿಂತ ಹೆಚ್ಚಿನ ಮೈಲೇಜ್ ನೀಡುತ್ತದೆ ಎಂದು ನಂಬಲಾಗಿದೆ. ಎಲ್ಲಾದರು ಇದರ ಸಿಎನ್‌ಜಿ ಮಾದರಿ ಬಂದರೆ ಅದು ‘ಫಾದರ್ ಆಫ್ ಮೈಲೇಜ್’ ಆಗಲಿದೆ.
ಕಳೆದ ಕೆಲವು ತಿಂಗಳುಗಳಿಂದ ಮಾರುತಿ ಆಲ್ಟೊದ 10 ನೇ ಆವೃತ್ತಿಯ ಕೆಲಸಗಳು ನಡೆಯುತ್ತಿದೆ. ಮೊದಲಿಗೆ ಈ ಕಾರನ್ನು ಜಪಾನ್‌ನಲ್ಲಿ ಬಿಡುಗಡೆ ಮಾಡಲಾಗುವುದು. ಬಳಿಕ ಈ ಕಾರು ಭಾರತದ ಮಾರುಕಟ್ಟೆಗೆ ಬರಲಿದೆ. ದೇಶದಲ್ಲಿ ಆಲ್ಟೊ ಕಾರಿಗೆ ವಿಶೇಷ ಸ್ಥಾನಮಾನವಿದೆ. ಇದನ್ನು ಭಾರತದಲ್ಲಿ ಲಾರ್ಡ್ ಆಲ್ಟೊ’ ಎಂದೂ ಕರೆಯಲಾಗುತ್ತದೆ.
ಮಾರುತಿ ತನ್ನ ಆಲ್ಟೊದ 9 ನೇ ಆವೃತ್ತಿಯನ್ನು 2021 ರಲ್ಲಿ ಬಿಡುಗಡೆ ಮಾಡಿತು. ಮೂರು ವರ್ಷಗಳ ಬಳಿಕ ಬಿಡುಗಡೆ ಮಾಡುತ್ತಿರುವ ಹೊಸ ಆಲ್ಟಾ ಇದಾಗಿದೆ. ವರದಿಯ ಪ್ರಕಾರ, ಕಂಪನಿಯು ಕಾರಿನ ತೂಕವನ್ನು 100 ಕೆಜಿಯಷ್ಟು ಕಡಿಮೆ ಮಾಡುತ್ತದೆ. ಇದರಿಂದ ಕಾರಿನ ಮೈಲೇಜ್ ಹೆಚ್ಚುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಆಲ್ಟೊದ ತೂಕ 680 ಕೆಜಿಯಿಂದ 760 ಕೆಜಿ ನಡುವೆ ಇದೆ. 100 ಕೆಜಿ ತೂಕ ಕಡಿಮೆಯಾದರೆ ಹೊಸ ತಲೆಮಾರಿನ ಕಾರಿನ ತೂಕ 580 ಕೆಜಿಯಿಂದ 660 ಕೆಜಿಗೆ ಇಳಿಕೆಯಾಗಲಿದೆ.
ಜಪಾನ್‌ನಲ್ಲಿ ಪ್ರಸ್ತುತ ಆಲ್ಟೊ ಪೆಟ್ರೋಲ್‌ನೊಂದಿಗೆ 25.2 ಕಿಮೀ/ಲೀಟರ್ ಮತ್ತು ಮಿಲ್ಡ್-ಹೈಬ್ರಿಡ್ ರೂಪಾಂತರದೊಂದಿಗೆ 27.7 ಕಿಮೀ/ಲೀಟರ್ ಇಂಧನ ದಕ್ಷತೆಯೊಂದಿಗೆ ಬರುತ್ತದೆ. ಸುಜುಕಿ ತನ್ನ ಪ್ರಸ್ತುತ ಕಾರುಗಳಿಗೆ 12V ಮಿಲ್ಡ್ ಹೈಬ್ರಿಡ್ ಸೆಟಪ್ ಅನ್ನು ಬಳಸುತ್ತದೆ. ಇದು 49 PS ನೈಸರ್ಗಿಕವಾಗಿ ಆಕಾಂಕ್ಷೆಯ ಪೆಟ್ರೋಲ್ ಎಂಜಿನ್ ಮತ್ತು 2kW ಎಲೆಕ್ಟ್ರಿಕ್ ಮೋಟಾರ್ ಅನ್ನು ಒಳಗೊಂಡಿದೆ.
ಸುಜುಕಿಯು ಹೊಸ 10ನೇ ಆವೃತ್ತಿಯ ಆಲ್ಟೊಗೆ 48V ಸೂಪರ್ N ಚಾರ್ಜ್ ವ್ಯವಸ್ಥೆಯನ್ನು ಬಳಸಬಹುದು. ಕಂಪನಿಯು 48V ಸೂಪರ್ ಎನ್ ಚಾರ್ಜ್ ವ್ಯವಸ್ಥೆಯನ್ನು ಬಳಸಿದರೆ, ಅದು ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ. ಹೊಸ ಆಲ್ಟೊದ ಇಂಧನ ದಕ್ಷತೆಯ ಶಕ್ತಿಯು ಪ್ರತಿ ಲೀಟರ್‌ಗೆ 30 ಕಿಲೋಮೀಟರ್ ಆಗಿರುತ್ತದೆ ಎಂದು ಅಂದಾಜಿಸಲಾಗಿದೆ.
ಮಾರುತಿ ಸುಜುಕಿಯ ಹಿಂದಿನ 9 ನೇ ಆವೃತ್ತಿಯ ಆಲ್ಟೊದ ಪೆಟ್ರೋಲ್ ರೂಪಾಂತರದ ಬೆಲೆ ಸುಮಾರು 5.83 ಲಕ್ಷ ರೂಪಾಯಿಗಳು ಮತ್ತು ಮಿಡ್ ಹೈಬ್ರಿಡ್ ಬೆಲೆ 6.65 ಲಕ್ಷ ರೂಪಾಯಿಗಳು ಇವೆ. ಅದೇ ಸಮಯದಲ್ಲಿ, ಮುಂದಿನ ದಿನಗಳಲ್ಲಿ ಬಿಡುಗಡೆ ಆಗಲಿರುವ ಹೊಸ ಆಲ್ಟೊದ ಆರಂಭಿಕ ಬೆಲೆ 5.46 ಲಕ್ಷ ರೂ. ಇರಬಹುದು.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ