ಸ್ಮಾರ್ಟ್‌ಫೋನ್ (Smartphone) ಬ್ರ್ಯಾಂಡ್‌ಗಳಿಗೆ ಸ್ಪರ್ಧೆ ಒಡ್ಡಲು ಮತ್ತು ದೇಸಿ ಬ್ರ್ಯಾಂಡ್ ಪ್ರಚಾರದೊಂದಿಗೆ ಮಾರುಕಟ್ಟೆ ಗೆಲ್ಲಲು ಮೈಕ್ರೋಮ್ಯಾಕ್ಸ್ ಮತ್ತೆ ಬಂದಿದೆ. ದೇಶದಲ್ಲಿ ಮೈಕ್ರೋಮ್ಯಾಕ್ಸ್ ಇನ್ ನೋಟ್ 2 (Micromax IN Note 2) ಬಿಡುಗಡೆ ಮಾಡಿ ಭಾರೀ ಸದ್ದು ಮಾಡಿದ್ದ ಕಂಪನಿ ಮೊನ್ನೆಯಷ್ಟೆ ಮೈಕ್ರೋಮ್ಯಾಕ್ಸ್ ಇನ್2ಸಿ (Micromax IN2c) ಫೋನನ್ನು ಅನಾವರಣ ಮಾಡಿತ್ತು. ಈ ಫೋನ್ ಇದೀಗ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ ಭರ್ಜರಿ ಆಫರ್ನೊಂದಿಗೆ ಮೊದಲ ಸೇಲ್ ಕಾಣುತ್ತಿದೆ. ಈ ಹೊಸ ಫೋನ್ ಕಳೆದ ವರ್ಷ ಭಾರತದಲ್ಲಿ ಲಾಂಚ್ ಆಗಿದ್ದ ಮೈಕ್ರೋಮ್ಯಾಕ್ಸ್ In 2b ಮಾದರಿಯನ್ನು ಹೋಲುತ್ತದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್, 5,000mAh ಸಾಮರ್ಥ್ಯದ ಬ್ಯಾಟರಿ ಸೇರಿದಂತೆ ಅನೇಕ ಆಯ್ಕೆಗಳನ್ನು ನೀಡಲಾಗಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ಏನು ವಿಶೇಷತೆ ಎಂಬುದನ್ನು ನೋಡೋಣ.
ಬೆಲೆ ಎಷ್ಟು?:
ಮೈಕ್ರೋಮ್ಯಾಕ್ಸ್ In 2c ಸ್ಮಾರ್ಟ್‌ಫೋನ್ ಭಾರತದಲ್ಲಿ ಒಂದು ಸ್ಟೋರೆಜ್ ಆಯ್ಕೆಯಲ್ಲಷ್ಟೆ ರಿಲೀಸ್ ಆಗಿದೆ. ಇದರ 3GB RAM ಮತ್ತು 32GB ಸ್ಟೋರೇಜ್ ರೂಪಾಂತರಕ್ಕೆ 8,499 ರೂ. ನಿಗದಿ ಮಾಡಲಾಗಿದೆ. ವಿಶೇಷ ಆಫರ್ ಕೂಡ ಘೋಷಿಸಲಾಗಿದ್ದು ಮೊದಲ ಸೇಲ್ ಪ್ರಯುಕ್ತ 7,499 ರೂ. ಗಳಿಗೆ ಈ ಫೋನನ್ನು ನಿಮ್ಮದಾಗಿಸಬಹುದು. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮತ್ತು ಮೈಕ್ರೋಮ್ಯಾಕ್ಸ್ ಅಧಿಕೃತ ಸೈಟ್‌ನಲ್ಲಿ ಇಂದಿನಿಂದ ಸೇಲ್ ಶುರುವಾಗಿದೆ.
ಏನು ವಿಶೇಷತೆ?:
ಮೈಕ್ರೋಮ್ಯಾಕ್ಸ್ ಇನ್ 2c ಸ್ಮಾರ್ಟ್‌ಫೋನ್ 720×1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.52 ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಪಡೆದುಕೊಂಡಿದೆ. ಆಕ್ಟಾ-ಕೋರ್ ಯೂನಿಸೋಕ್ T610 SoC ಪ್ರೊಸೆಸರ್ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 3GB RAM ಮತ್ತು 32GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದಲ್ಲದೆ ಮೈಕ್ರೋ SD ಕಾರ್ಡ್ ಮೂಲಕ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.
Tecno Phantom X: ಭಾರತದಲ್ಲಿ ಡ್ಯುಯಲ್-ಸೆಲ್ಪಿ ಕ್ಯಾಮೆರಾದ ಆಕರ್ಷಕ ಫೀಚರ್ನ ಹೊಸ ಫೋನ್ ಬಿಡುಗಡೆ
ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಎರಡನೇ ಕ್ಯಾಮೆರಾ ಪ್ರತ್ಯೇಕ ಡೆಪ್ತ್ ಸೆನ್ಸಾರ್‌ನೊಂದಿಗೆ ಬರಲಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು ಫೇಸ್ ಬ್ಯೂಟಿ, ನೈಟ್ ಮೋಡ್ ಮತ್ತು ಪೋರ್ಟ್ರೇಟ್ ಮೋಡ್ ಫೀಚರ್ಸ್‌ಗಳನ್ನು ಬೆಂಬಲಿಸಲಿದೆ. ಮೈಕ್ರೋಮ್ಯಾಕ್ಸ್ ಇನ್ 2c ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 10W ಪ್ರಮಾಣಿತ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸಿಂಗಲ್ ಚಾರ್ಜ್‌ನಲ್ಲಿ 16 ಗಂಟೆಗಳವರೆಗೆ ವೀಡಿಯೊ ಸ್ಟ್ರೀಮಿಂಗ್ ಅಥವಾ 50 ಗಂಟೆಗಳ ಟಾಕ್ ಟೈಮ್ ಅನ್ನು ನೀಡಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi 802.11ac, ಬ್ಲೂಟೂತ್ v5.0, USB ಟೈಪ್-C ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಸೇರಿದಂತೆ ನೂತನ ಮಾದರಿಯ ಎಲ್ಲ ಆಯ್ಕೆಗಳಿವೆ.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:10 pm, Sun, 1 May 22