ಬೆಲೆ 6,999 ರೂ., 5000mAh ಬ್ಯಾಟರಿ, ಭಾರತದಲ್ಲಿ ಮೋಟೋ G04 ಫೋನ್ ಮಾರಾಟ ಪ್ರಾರಂಭ

|

Updated on: Feb 22, 2024 | 2:38 PM

Moto G04 Sale Start in India: ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಮೋಟೋ G04 ಫೋನಿನ ಮೊದಲ ಮಾರಾಟ ಆರಂಭವಾಗಿದೆ. ಈ ಫೋನಿನ 4GB + 64GB RAM ಮಾದರಿಗೆ ಕೇವಲ 6,999 ರೂ. ನಿಗದಿ ಮಾಡಲಾಗಿದೆ. ಈ ಫೋನಿನಲ್ಲಿ ಯುನಿಸಾಕ್ T606 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ.

ಬೆಲೆ 6,999 ರೂ., 5000mAh ಬ್ಯಾಟರಿ, ಭಾರತದಲ್ಲಿ ಮೋಟೋ G04 ಫೋನ್ ಮಾರಾಟ ಪ್ರಾರಂಭ
Moto G04
Follow us on

ಪ್ರಸಿದ್ಧ ಮೋಟೋರೊಲ ಕಂಪನಿ ಇತ್ತೀಚೆಗಷ್ಟೆ ಭಾರತದಲ್ಲಿ ತನ್ನ ಹೊಸ ಸ್ಮಾರ್ಟ್‌ಫೋನ್ ಮೋಟೋ G04 ಅನ್ನು ಬಿಡುಗಡೆ ಮಾಡಿತ್ತು. ಇದೀಗ ಇಂದಿನಿಂದ ಈ ಫೋನಿನ ಮೊದಲ ಮಾರಾಟವು ಪ್ರಾರಂಭವಾಗಿದೆ. ಮೋಟೋ G04 ಫೋನಿನ ಬೆಲೆ 8,000 ರೂ. ಕ್ಕಿಂತ ಕಡಿಮೆ ಆಗಿದೆ. ಇದು 8 GB RAM ಅನ್ನು ಹೊಂದಿದೆ. 90 Hz ರಿಫ್ರೆಶ್ ದರ ಮತ್ತು 128 GB ಸಂಗ್ರಹಣೆಯೊಂದಿಗೆ ಬಿಡುಗಡೆ ಆಗಿತ್ತು. ಈ ಸ್ಮಾರ್ಟ್‌ಫೋನ್ ಇತ್ತೀಚಿನ ಆಂಡ್ರಾಯ್ಡ್ 14 ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಹಲವು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಬೆಲೆ ಹಾಗೂ ಸಂಪೂರ್ಣ ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಮೋಟೋ G04 ಬೆಲೆ, ಕೊಡುಗೆಗಳು:

ಮೋಟೋ G04 ನ 4GB + 64GB RAM ಮಾದರಿ ಮತ್ತು 8GB + 128GB ಮಾದರಿಗೆ ಕ್ರಮವಾಗಿ ರೂ. 6,999 ಮತ್ತು ರೂ. 7,999 ಇದೆ. ಈ ಫೋನ್ ಇಂದಿನಿಂದ ಫ್ಲಿಪ್‌ಕಾರ್ಟ್‌ನಲ್ಲಿ ಕಾನ್ಕಾರ್ಡ್ ಬ್ಲಾಕ್, ಸೀ ಗ್ರೀನ್, ಸ್ಟೇನ್ ಬ್ಲೂ ಮತ್ತು ಸನ್‌ರೈಸ್ ಆರೆಂಜ್‌ ಬಣ್ಣದ ಆಯ್ಕೆಗಳಲ್ಲಿ ಪಡೆಯಬಹುದು. ಮೊದಲ ಸೇಲ್ ಪ್ರಯುಕ್ತ ಕಂಪನಿಯು 750 ರೂಪಾಯಿಗಳ ವಿನಿಮಯ ಬೋನಸ್ ಅನ್ನು ನೀಡುತ್ತಿದೆ.

ನಿಬ್ಬೆರಗಾಗಿಸುವ ಕ್ಯಾಮೆರಾ, ಬಲಿಷ್ಠ ಪ್ರೊಸೆಸರ್: ಭಾರತದಲ್ಲಿ ಐಕ್ಯೂ ನಿಯೋ 9 ಪ್ರೊ ಫೋನ್ ಬಿಡುಗಡೆ

ಮೋಟೋ G04 ಫೀಚರ್ಸ್:

ಮೋಟೋ G04 ಇತ್ತೀಚಿನ ಆಂಡ್ರಾಯ್ಡ್ OS 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.5-ಇಂಚಿನ LCD ಡಿಸ್ಪ್ಲೇಯನ್ನು ಹೊಂದಿದೆ, 90 Hz ನ ರಿಫ್ರೆಶ್ ದರವನ್ನು ನೀಡುತ್ತದೆ. ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಫೇಸ್ ಅನ್‌ಲಾಕ್‌ನಂತಹ ವೈಶಿಷ್ಟ್ಯಗಳನ್ನು ಫೋನ್‌ನಲ್ಲಿ ಒದಗಿಸಲಾಗಿದೆ.

ಈ ಫೋನಿನಲ್ಲಿ ಯುನಿಸಾಕ್ T606 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಇದೇ ಪ್ರೊಸೆಸರ್ ಇತ್ತೀಚೆಗೆ ಬಿಡುಗಡೆಯಾದ ಐಟೆಲ್ P55 ಪ್ಲಸ್ ನಲ್ಲಿಯೂ ಇದೆ. ಈ ಫೋನ್ ಅನ್ನು 4GB ಮತ್ತು 8GB RAM ನಲ್ಲಿ ತರಲಾಗಿದೆ. ವರ್ಚುವಲ್ RAM ವೈಶಿಷ್ಟ್ಯದ ಸಹಾಯದಿಂದ RAM ಅನ್ನು 8 GB ವರೆಗೆ ಹೆಚ್ಚಿಸಬಹುದು. ಇದು 128 GB ವರೆಗೆ ಆಂತರಿಕ ಸಂಗ್ರಹಣೆಯನ್ನು ಹೊಂದಿದೆ.

ಫ್ರೆಂಡ್ ಚಾರ್ಜರ್ ಮೂಲಕ ನೀವು ನಿಮ್ಮ ಸ್ಮಾರ್ಟ್​ಫೋನ್ ಚಾರ್ಜ್ ಮಾಡುತ್ತೀರಾ?

ಮೋಟೋ G04 5000mAh ಬ್ಯಾಟರಿ ಹೊಂದಿದ್ದು 15W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಚಾರ್ಜಿಂಗ್ ಪೋರ್ಟ್ ಯುಎಸ್‌ಬಿ ಟೈಪ್-ಸಿ ಆಗಿದೆ. ಕ್ಯಾಮೆರಾಗಳ ಬಗ್ಗೆ ಮಾತನಾಡುತ್ತಾ, ಮೋಟೋ G04 16-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು LED ಫ್ಲ್ಯಾಷ್‌ನೊಂದಿಗೆ ಹೊಂದಿದೆ. ಇದು 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.

ಆದಾಗ್ಯೂ, ಇಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ, ಈ ಸಾಧನವು ಯಾವುದೇ ಆಂಡ್ರಾಯ್ಡ್ ಅಪ್‌ಗ್ರೇಡ್ ಅನ್ನು ಪಡೆಯುವುದಿಲ್ಲ. ಭದ್ರತಾ ಪ್ಯಾಚ್ ನವೀಕರಣಗಳನ್ನು 2 ವರ್ಷಗಳವರೆಗೆ ಒದಗಿಸಲಾಗುತ್ತದೆ. ಇತರ ವೈಶಿಷ್ಟ್ಯಗಳ ಬಗ್ಗೆ ಮಾತನಾಡುತ್ತಾ, ಮೋಟೋ G04 ಡ್ಯುಯಲ್ ಸಿಮ್ ಸ್ಲಾಟ್, 4G VoLTE, Wi-Fi 802.11ac, ಬ್ಲೂಟೂತ್ 5.0, GPS, 3.5mm ಆಡಿಯೋ ಜಾಕ್ ಅನ್ನು ಸಹ ಹೊಂದಿದೆ. ಸೈಡ್ ಫೇಸಿಂಗ್ ಫಿಂಗರ್‌ಪ್ರಿಂಟ್ ಸೆನ್ಸರ್ ಕೂಡ ಈ ಫೋನ್‌ನಲ್ಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ