ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಈಗ ಅನೇಕ ಕಂಪನಿಗಳು ಹುಟ್ಟುಕೊಂಡಿದ್ದು ತಿಂಗಳಿಗೆ ಕಡಿಮೆ ಎಂದರೂ 6-8 ಮೊಬೈಲ್ಗಳು ಬಿಡುಗಡೆ ಆಗುತ್ತಿದೆ. ಇದರಲ್ಲಿ ಕೆಲವೇ ಕೆಲವು ಯಶಸ್ಸು ಸಾಧಿಸಿದರೆ ಇನ್ನೂ ಕೆಲ ಫೋನ್ಗಳು ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ. ಇವುಗಳ ನಡುವೆ ಇದೀಗ ಜನಪ್ರಿಯ ಮೋಟೋರೊಲಾ ಕಂಪನಿ ಹೊಸ ಮೋಟೋರೊಲಾ ಎಡ್ಜ್ 30 ಫ್ಯೂಷನ್ (Motorola Edge 30 Fusion) ಫೋನ್ ಲಾಂಚ್ ಮಾಡಿದೆ. ಇತರೆ ಫೋನ್ಗಳಿಗೆ ಹೋಲಿಸಿದರೆ ಸಾಕಷ್ಟು ವಿಶೇಷತೆಯಿಂದ ಕೂಡಿರುವ ಈ ಸ್ಮಾರ್ಟ್ಫೋನ್ನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888+ SoC ಪ್ರೊಸೆಸರ್ ಅಳವಡಿಸಲಾಗಿದೆ. ಸದ್ಯಕ್ಕೆ ಅರ್ಜೆಂಟೀನಾ, ಬ್ರೆಜಿಲ್ ಮತ್ತು ಯೂರೋಪ್‌ನಲ್ಲಿ ಅನಾವರಣಗೊಂಡಿರುವ ಈ ಫೋನ್ ಕೆಲವೇ ದಿನಗಳಲ್ಲಿ ಭಾರತಕ್ಕೂ ಕಾಲಿಡಲಿದೆ.
ಮೋಟೋರೊಲಾ ಎಡ್ಜ್ 30 ಫ್ಯೂಷನ್ ಸ್ಮಾರ್ಟ್‌ಫೋನ್ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದರ ಬೆಲೆ EUR 599.99, ಅಂದರೆ ಭಾರತದಲ್ಲಿ ಈ ಫೋನ್ ಸುಮಾರು 50,000ರೂ. ಗೆ ಮಾರಾಟ ಕಾಣಬಹುದು. ಇದು ಅರೋರಾ ವೈಟ್, ಕಾಸ್ಮಿಕ್ ಗ್ರೇ, ನೆಪ್ಚೂನ್ ಬ್ಲೂ ವೆಗಾನ್ ಲೆದರ್ ಮತ್ತು ಸೋಲಾರ್ ಗೋಲ್ಡ್ ಬಣ್ಣಗಳಲ್ಲಿ ದೊರೆಯಲಿದೆ.
ಈ ಸ್ಮಾರ್ಟ್‌ಫೋನಿನ ಫೀಚರ್ಸ್ ಬಗ್ಗೆ ನೋಡುವುದಾದರೆ, ಇದು 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.55 ಇಂಚಿನ ಕರ್ವ್ಡ್ ಎಂಡ್‌ಲೆಸ್ ಎಡ್ಜ್ ಪೋಲ್ಡ್ ಡಿಸ್‌ಪ್ಲೇ ಹೊಂದಿದೆ. 144Hz ರಿಫ್ರೆಶ್ ರೇಟ್, 20:9 HDR10+ ಬೆಂಬಲ, 360Hz ಟಚ್ ಸ್ಯಾಪ್ಲಿಂಗ್ ರೇಟ್ ಪ್ರಮುಖ ಹೈಲೇಟ್.
ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888+ SoC ಪ್ರೊಸೆಸರ್‌ನಲ್ಲಿ ಅಳವಡಿಸಲಾಗಿದ್ದು ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 13-ಮೆಗಾಪಿಕ್ಸೆಲ್ ಅಲ್ಟ್ರಾ–ವೈಡ್ ಲೆನ್ಸ್ ಮ್ಯಾಕ್ರೋ ವಿಷನ್ ನೀಡಲಾಗಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಮೋಟೋರೊಲಾ ಎಡ್ಜ್ 30 ಫ್ಯೂಷನ್ 4,400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 68W ಟರ್ಬೋಪವರ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 6E ಸಂಪರ್ಕ ಹಾಗೂ ಬ್ಲೂಟೂತ್ v5.2 ಮತ್ತು NFC ವರೆಗೆ ಬೆಂಬಲಿಸುತ್ತದೆ.