OnePlus TV Y1S: ಹೊಸ ಟಿವಿ ಖರೀದಿಸಬೇಕೆ?: ಒನ್​ಪ್ಲಸ್ ರಿಲೀಸ್ ಮಾಡಿದೆ ಕೇವಲ 16,499 ರೂ. ಗೆ ಬೊಂಬಾಟ್ ಸ್ಮಾರ್ಟ್​ ಟಿವಿ

| Updated By: Vinay Bhat

Updated on: Feb 18, 2022 | 2:09 PM

OnePlus TV Y1S Edge: ಒನ್‌ಪ್ಲಸ್‌ ಟಿವಿ Y1S ಮತ್ತು ಒನ್‌ಪ್ಲಸ್‌ ಟಿವಿ Y1S ಎಡ್ಜ್‌ ಎರಡೂ ಸ್ಮಾರ್ಟ್‌ಟಿವಿಗಳು 32-ಇಂಚಿನ ಮತ್ತು 43-ಇಂಚಿನ ಡಿಸ್‌ಪ್ಲೇ ಗಾತ್ರವನ್ನು ಹೊಂದಿವೆ. ಇದರಲ್ಲಿ 32-ಇಂಚಿನ ಟಿವಿ ಮಾದರಿ HD ರೆಸಲ್ಯೂಶನ್ ಹೊಂದಿದ್ದರೆ, 43-ಇಂಚಿನ ಸ್ಮಾರ್ಟ್‌ಟಿವಿ ಮಾದರಿ HD ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿವೆ.

OnePlus TV Y1S: ಹೊಸ ಟಿವಿ ಖರೀದಿಸಬೇಕೆ?: ಒನ್​ಪ್ಲಸ್ ರಿಲೀಸ್ ಮಾಡಿದೆ ಕೇವಲ 16,499 ರೂ. ಗೆ ಬೊಂಬಾಟ್ ಸ್ಮಾರ್ಟ್​ ಟಿವಿ
OnePlus TV Y1S, Y1S Edge
Follow us on

ಭಾರತದ ಮಾರುಕಟ್ಟೆಯಲ್ಲಿ ಕೇವಲ ಸ್ಮಾರ್ಟ್​ಫೋನ್​ಗಳಿಂದ ಮಾತ್ರವಲ್ಲದೆ ಸ್ಮಾರ್ಟ್​ ಟಿವಿಗಳಿಂದಲೂ ಯಶಸ್ಸು ಸಾಧಿಸಿರುವ ಪ್ರಸಿದ್ಧ ಒನ್​​ಪ್ಲಸ್ (OnePlus) ಕಂಪನಿ ಇದೀಗ ಎರಡು ಹೊಸ ಸ್ಮಾರ್ಟ್‌ಟಿವಿಗಳನ್ನು ದೇಶದಲ್ಲಿ ಅನಾವರಣ ಮಾಡಿದೆ. ಹೊಸ ಟಿವಿ ಖರೀದಿಸುವ ಪ್ಲಾನ್​ನಲ್ಲಿ ನೀವಿದ್ದರೆ ಇದೊಂದು ಅತ್ಯುತ್ತಮ ಆಯ್ಕೆಯಾಗಿದೆ. ಒನ್​ಪ್ಲಸ್ ಬಿಡುಗಡೆ ಮಾಡಿರುವ ಹೊಸ ಟಿವಿಯ ಹೆಸರು ಒನ್‌ಪ್ಲಸ್‌ ಟಿವಿ Y1S (OnePlus TV Y1S) ಮತ್ತು ಒನ್‌ಪ್ಲಸ್‌ ಟಿವಿ Y1S ಎಡ್ಜ್‌. ಈ ಎರಡೂ ಸ್ಮಾರ್ಟ್ ಟಿವಿಗಳನ್ನು ಎರಡು ಡಿಸ್ ಪ್ಲೇ ಗಾತ್ರಗಳಲ್ಲಿ ಒನ್​ಪ್ಲಸ್ ಕಂಪನಿ ಬಿಡುಗಡೆ ಮಾಡಿದ್ದು, 32-ಇಂಚಿನ ಮತ್ತು 43-ಇಂಚಿನ ಮಾದರಿಗಳಲ್ಲಿವೆ. ಎರಡೂ ಆಂಡ್ರಾಯ್ಡ್ ಟಿವಿ 11 ಅನ್ನು ರನ್ ಆಗಲಿವೆ ಮತ್ತು ಡಾಲ್ಬಿ ಆಡಿಯೋ ಹಾಗೂ HDR10+, HDR10 ಮತ್ತು HLG ಫಾರ್ಮ್ಯಾಟ್ ಬೆಂಬಲವನ್ನು ಪಡೆದಿವೆ. ಉಳಿದಂತೆ ಇದರ ಇತರೆ ವಿಶೇಷತೆ ಏನು?, ಬೆಲೆ ಎಷ್ಟು ಎಂಬುದನ್ನು ನೋಡೋಣ.

ಒನ್‌ಪ್ಲಸ್‌ ಟಿವಿ Y1S ಮತ್ತು ಒನ್‌ಪ್ಲಸ್‌ ಟಿವಿ Y1S ಎಡ್ಜ್‌ ಎರಡೂ ಸ್ಮಾರ್ಟ್‌ಟಿವಿಗಳು 32-ಇಂಚಿನ ಮತ್ತು 43-ಇಂಚಿನ ಡಿಸ್‌ಪ್ಲೇ ಗಾತ್ರವನ್ನು ಹೊಂದಿವೆ. ಇದರಲ್ಲಿ 32-ಇಂಚಿನ ಟಿವಿ ಮಾದರಿ HD ರೆಸಲ್ಯೂಶನ್ ಹೊಂದಿದ್ದರೆ, 43-ಇಂಚಿನ ಸ್ಮಾರ್ಟ್‌ಟಿವಿ ಮಾದರಿ HD ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಈ ಎರಡೂ ಸ್ಮಾರ್ಟ್ ಟಿವಿಗಳು HDR10, HDR10+, HLG ಫಾರ್ಮ್ಯಾಟ್ ಬೆಂಬಲವನ್ನು ಪಡೆದುಕೊಂಡಿವೆ. ಇದಲ್ಲದೆ ಕಡಿಮೆ ನೀಲಿ ಬೆಳಕಿನ ಹೊರಸೂಸುವಿಕೆಗಾಗಿ ಪ್ರದರ್ಶನಗಳು TUV ರೈನ್‌ಲ್ಯಾಂಡ್ ಪ್ರಮಾಣೀಕರಣವನ್ನು ಸಹ ಪಡೆಯುತ್ತವೆ.

ಒನ್‌ಪ್ಲಸ್‌ ಟಿವಿ Y1S 20W ಪೂರ್ಣ ಶ್ರೇಣಿಯ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದ್ದರೆ ಒನ್‌ಪ್ಲಸ್‌ ಟಿವಿ Y1S ಎಡ್ಜ್ 24W ಪೂರ್ಣ ಶ್ರೇಣಿಯ ಸ್ಟಿರಿಯೊ ಸ್ಪೀಕರ್‌ಗಳನ್ನು ಪಡೆಯುತ್ತದೆ. ಒನ್‌ಪ್ಲಸ್​​ನಿಂದ ಸ್ಮಾರ್ಟ್ ಟಿವಿಗಳು ಆಟೋ ಕಡಿಮೆ ಲೇಟೆನ್ಸಿ ಮೋಡ್ (ALLM) ಅನ್ನು ಪಡೆಯುತ್ತವೆ, ಅದು ಗೇಮಿಂಗ್ ಅನುಭವವನ್ನು ಸುಧಾರಿಸುತ್ತದೆ ಎಂದು ಹೇಳಲಾಗಿದೆ.

ಆಸಕ್ತಿದಾಯವಾದದ್ದು ಎಂದರೆ, ವಾಚ್ ಮತ್ತು ಬಡ್ಸ್​​ಗಳನ್ನು ಒಳಗೊಂಡಂತೆ ಸಂಪೂರ್ಣ ಒನ್​ಪ್ಲಸ್ ಇಕೊಸಿಸ್ಟಂನೊಂದಿಗೆ Y1S ತಡೆರಹಿತವಾಗಿ ಜೋಡಣೆಯಾಗುತ್ತದೆ. ಒಂದೇ ಸಮಯದಲ್ಲಿ 5 ಫೋನ್‌ಗಳವರೆಗೆ ಕನೆಕ್ಟ್ ಮಾಡಬಹುದು ಮತ್ತು ಅವುಗಳನ್ನು ಪಠ್ಯದ ಇನ್‌ಪುಟ್, TV ನಿಯಂತ್ರಣ ಮತ್ತು ಇನ್ನೂ ಹೆಚ್ಚಿನವುಗಳಿಗಾಗಿ ಬಳಸಬಹುದು. ಬಡ್ಸ್​​ಗಳ ಕೇಸ್ ಅನ್ನು ತೆರೆದ ಕೂಡಲೇ ಅವು ತಕ್ಷಣ ಜೋಡಣೆಯಾಗುತ್ತವೆ. ಇತ್ತ ವಾಚ್ ಸಹ ಇಷ್ಟೇ ಸುಲಭವಾಗಿ ಜೋಡಣೆಯಾಗುತ್ತದೆ.

ಇನ್ನು ಈ ಎರಡೂ ಸ್ಮಾರ್ಟ್‌ಟಿವಿಗಳು ಆಂಡ್ರಾಯ್ಡ್‌ ಟಿವಿ 11 ಔಟ್-ಆಫ್-ದಿ-ಬಾಕ್ಸ್ ಅನ್ನು ರನ್ ಮಾಡುತ್ತದೆ. ಜೊತೆಗೆ ಈ ಸ್ಮಾರ್ಟ್ ಟಿವಿಗಳು ಗೂಗಲ್ ಅಸಿಸ್ಟೆಂಟ್ ಬೆಂಬಲವನ್ನು ಸಹ ಪಡೆದಿವೆ. ಸ್ಮಾರ್ಟ್ ಮ್ಯಾನೇಜರ್ ಅನ್ನು ಬಳಸಿಕೊಂಡು, ಬಳಕೆದಾರರು ಅನೇಕ ಸ್ಮಾರ್ಟ್ ಟಿವಿಗಳ ಕಾರ್ಯಗಳನ್ನು ನಿಯಂತ್ರಿಸಬಹುದು. ಇದಲ್ಲದೆ ಒನ್‌ಪ್ಲಸ್‌ ಕನೆಕ್ಟ್‌ 2.0 ಅಪ್ಲಿಕೇಶನ್‌ ಮೂಲಕ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಟಿವಿಗಳಿಗೆ ಸಂಪರ್ಕಿಸಲು ಮತ್ತು ರಿಮೋಟ್ ಕಂಟ್ರೋಲ್ ಆಗಿ ಬಳಸಲು ಸಾಧ್ಯವಾಗುತ್ತದೆ. ಸಂಪರ್ಕಕ್ಕಾಗಿ, ಒನ್‌ಪ್ಲಸ್‌ ಟಿವಿ Y1S ಸರಣಿಯು 5GHz ಬ್ಯಾಂಡ್ ಬೆಂಬಲದೊಂದಿಗೆ ಡ್ಯುಯಲ್-ಬ್ಯಾಂಡ್ Wi-Fi ಅನ್ನು ಪಡೆಯುತ್ತದೆ. 230 ಲೈವ್ ಚಾನಲ್‌ಗಳಿಗೆ ಸೇವೆ ಸಲ್ಲಿಸುತ್ತದೆ.

ಬೆಲೆ ಎಷ್ಟು?:

ಭಾರತದಲ್ಲಿ ಒನ್‌ಪ್ಲಸ್‌ ಟಿವಿ Y1S 32 ಇಂಚಿನ ಬೆಲೆ 16,499 ರೂ. ಆಗಿದೆ. ಆದರೆ 43-ಇಂಚಿನ ರೂಪಾಂತರದ ಬೆಲೆ 26,999 ರೂ.ಹೊಂದಿದೆ. ಇನ್ನು ಒನ್‌ಪ್ಲಸ್‌ ಟಿವಿ Y1S ಎಡ್ಜ್‌ 32 ಇಂಚಿನ ಬೆಲೆ 16,999 ರೂ.ಆಗಿದೆ. ಹಾಗೆಯೇ 43 ಇಂಚಿನ ರೂಪಾಂತರದ ಬೆಲೆ 27,999 ರೂ. ಇದರಲ್ಲಿ ಒನ್‌ಪ್ಲಸ್‌ ಟಿವಿ Y1S ಅಧಿಕೃತ ವೆಬ್‌ಸೈಟ್, ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮತ್ತು ಪ್ರಮುಖ ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳ ಮೂಲಕ ಖರೀದಿಸಲು ಲಭ್ಯವಿರುತ್ತದೆ. ಒನ್‌ಪ್ಲಸ್‌ ಟಿವಿ Y1S ಎಡ್ಜ್‌ ಅಧಿಕೃತ ಒನ್‌ಪ್ಲಸ್‌ ಸ್ಟೋರ್‌ಗಳು ಮತ್ತು ಪ್ರಮುಖ ಚಿಲ್ಲರೆ ವ್ಯಾಪಾರಿಗಳ ಮೂಲಕ ಆಫ್‌ಲೈನ್‌ನಲ್ಲಿ ಖರೀದಿಸಲು ಮಾತ್ರ ಲಭ್ಯವಿರುತ್ತದೆ. ಫೆಬ್ರವರಿ 21 ರಂದು ಈ ಎರಡೂ ಸ್ಮಾರ್ಟ್ ಟಿವಿಗಳು ಖರೀದಿಗೆ ಲಭ್ಯವಾಗಲಿದೆ.

Samsung Galaxy S22 Series: 72,999 ರೂ. ಗೆ ಬಿಡುಗಡೆ ಆಗಿದೆ ಸ್ಯಾಮ್​ಸಂಗ್ ಗ್ಯಾಲಕ್ಸಿ S22 ಸರಣಿಯ ಮೂರು ಸ್ಮಾರ್ಟ್​ಫೋನ್

OnePlus Nord CE 2 5G: ಬಹುನಿರೀಕ್ಷಿತ ಒನ್‌ಪ್ಲಸ್‌ ನಾರ್ಡ್‌ CE 2 5G ಫೋನ್ ಬಿಡುಗಡೆ: ಇದನ್ನು ಖರೀದಿಸಲು ಕ್ಯೂ ಗ್ಯಾರಂಟಿ