OnePlus Nord Buds 2 : ಗದ್ದಲಕ್ಕೆ ಗುಡ್​ಬೈ ಹೇಳಿ ಬೆಸ್ಟ್ ಮ್ಯೂಸಿಕ್ ಕೇಳಿಸಿಕೊಳ್ಳಿ

ಕಿರಣ್​ ಐಜಿ

Updated on: Apr 07, 2023 | 10:00 AM

ವಿವಿಧ ಕಂಪನಿಗಳ, ಬ್ರ್ಯಾಂಡ್​ಗಳ ಇಯರ್​ಬಡ್ಸ್ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿದೆ. ಒನ್​ಪ್ಲಸ್, ನಾರ್ಡ್ ಬಡ್ಸ್ ಸರಣಿಯಲ್ಲಿ ಹೊಸ ಮಾದರಿಯನ್ನು ಜನತೆಗೆ ಪರಿಚಯಿಸಿದೆ. ಒನ್​ಪ್ಲಸ್ ನಾರ್ಡ್ ಬಡ್ಸ್ 2 ವಿಶೇಷತೆಗಳ ವಿಡಿಯೊ ಇಲ್ಲಿದೆ.

ಬಳಕೆದಾರರಿಗೆ ಪ್ರೀಮಿಯಂ ಸ್ಮಾರ್ಟ್​ಫೋನ್ ಅನುಭವ ಒದಗಿಸಿದ ಬಳಿಕ ಒನ್​ಪ್ಲಸ್, ಆಡಿಯೋ ಕ್ಷೇತ್ರದತ್ತ ಗಮನ ಹರಿಸಿದೆ. ಯುವಜನತೆಗೆ ವೈರ್​ಲೆಸ್ ಮ್ಯೂಸಿಕ್ ಕುರಿತು ಕ್ರೇಜ್ ಹೆಚ್ಚಾಗಿರುವುದರಿಂದ, ಇಯರ್​ಬಡ್ಸ್ ಮತ್ತು ಇಯರ್​ಫೋನ್, ಇಯರ್​ಪಾಡ್ ಅಧಿಕ ಸಂಖ್ಯೆಯಲ್ಲಿ ಬೇಡಿಕೆ ಪಡೆದುಕೊಂಡಿದೆ. ಅದಕ್ಕೆ ಪೂರಕವಾಗಿ ವಿವಿಧ ಕಂಪನಿಗಳ, ಬ್ರ್ಯಾಂಡ್​ಗಳ ಇಯರ್​ಬಡ್ಸ್ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿದೆ. ಒನ್​ಪ್ಲಸ್, ನಾರ್ಡ್ ಬಡ್ಸ್ ಸರಣಿಯಲ್ಲಿ ಹೊಸ ಮಾದರಿಯನ್ನು ಜನತೆಗೆ ಪರಿಚಯಿಸಿದೆ. ಒನ್​ಪ್ಲಸ್ ನಾರ್ಡ್ ಬಡ್ಸ್ 2 ವಿಶೇಷತೆಗಳ ವಿಡಿಯೊ ಇಲ್ಲಿದೆ. ಒನ್​ಪ್ಲಸ್ ನಾರ್ಡ್ ಸರಣಿಯಲ್ಲಿ ಬಿಡುಗಡೆಯಾಗಿದೆ ನಾರ್ಡ್ ಬಡ್ಸ್ 2 ಟ್ರೂ ವೈರ್​ಲೆಸ್ ಇಯರ್​ಫೋನ್ ಅನುಭವ ನೀಡಲಿದೆ. ನಾರ್ಡ್ ಬಡ್ಸ್ 2 ಬಿಳಿ ಮತ್ತು ಬೂದು ಬಣ್ಣದಲ್ಲಿ ಲಭ್ಯವಿದೆ. ಒನ್​ಪ್ಲಸ್ ನಾರ್ಡ್ ಬಡ್ಸ್ 2 ಏಪ್ರಿಲ್ 11ರಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ. ನಾರ್ಡ್ ಬಡ್ಸ್ 2 ಒನ್​ಪ್ಲಸ್ ಸ್ಟೋರ್, ಆನ್​ಲೈನ್ ಮತ್ತು ಪ್ರಮುಖ ಇ ಕಾಮರ್ಸ್ ತಾಣಗಳಲ್ಲಿ ಲಭ್ಯವಿದೆ ಎಂದು ಕಂಪನಿ ಹೇಳಿದೆ. ಭಾರತದಲ್ಲಿ ₹2,999 ದರ ಹೊಂದಿರುವ ಒನ್​ಪ್ಲಸ್ ಬಡ್ಸ್, ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಸೌಲಭ್ಯ ಹೊಂದಿದೆ.  IP55 ಡಸ್ಟ್ ಮತ್ತು ವಾಟರ್ ರೆಸಿಸ್ಟ್ ರೇಟಿಂಗ್ ಮತ್ತು ಯುಎಸ್​ಬಿ ಟೈಪ್-ಸಿ ಪೋರ್ಟ್ ಮೂಲಕ ಚಾರ್ಜಿಂಗ್ ಇದರ ವಿಶೇಷತೆಯಾಗಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.