OnePlus Nord CE 3 Lite 5G vs Realme 10 Pro 5G: ಯಾವ ಪೋನ್ ಬೆಸ್ಟ್?

Updated on: Apr 10, 2023 | 12:18 PM

ಒನ್​ಪ್ಲಸ್ ನಾರ್ಡ್​ ಸಿಇ 3 ಲೈಟ್ 5G ಮತ್ತು ರಿಯಲ್​ಮಿ 10 ಪ್ರೊ ಪ್ಲಸ್ 5G ಫೋನ್ ಎರಡರಲ್ಲೂ ಹಲವು ವ್ಯತ್ಯಾಸಗಳಿವೆ. ಒನ್​ಪ್ಲಸ್ ಫೋನ್​ನಲ್ಲಿದೆ 6.72 ಇಂಚಿನ ಡಿಸ್​ಪ್ಲೇ ಹಾಗೂ ರಿಯಲ್​ಮಿ ಫೋನ್​ನಲ್ಲಿ 6.70 ಇಂಚಿನ ಡಿಸ್​ಪ್ಲೇ ಇದೆ.

ಚೀನಾ ಹೊರತುಪಡಿಸಿದರೆ, ಜಾಗತಿಕವಾಗಿ ಅತಿ ದೊಡ್ಡ ಗ್ಯಾಜೆಟ್ ಮಾರುಕಟ್ಟೆ ಇರುವುದು ಭಾರತದಲ್ಲಿ. ಇಲ್ಲಿ ಚೀನಾ ಮೂಲದ ಕಂಪನಿಗಳ ಬ್ರ್ಯಾಂಡ್​ಗಳದ್ದೇ ಕಾರುಬಾರು. ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಚೀನಾ ಮೂಲದ ಕಂಪನಿಗಳ ವಿವಿಧ ಸ್ಮಾರ್ಟ್​ಫೋನ್​ಗಳು ಭರ್ಜರಿ ಸದ್ದು ಮಾಡುತ್ತಿವೆ. ಚೀನಾದ ಎರಡು ಪ್ರಮುಖ ಬ್ರ್ಯಾಂಡ್​ಗಳಾಗಿರುವ ಒನ್​ಪ್ಲಸ್ ಮತ್ತು ರಿಯಲ್​ಮಿ, ಇತ್ತೀಚೆಗೆ ಭಾರತದಲ್ಲಿ ಪರಿಚಯಿಸಿರುವ ಹೊಸ ಸ್ಮಾರ್ಟ್​ಫೋನ್​ಗಳ ನಡುವಣ ಭಿನ್ನತೆ, ವೈಶಿಷ್ಟ್ಯಗಳ ವಿವರ ಇಲ್ಲಿದೆ. ಎರಡೂ ಮಾದರಿಗಳಿಗೆ ಇರುವ ಪ್ರಮುಖ ವ್ಯತ್ಯಾಸಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಒನ್​ಪ್ಲಸ್ ನಾರ್ಡ್​ ಸಿಇ 3 ಲೈಟ್ 5G ಮತ್ತು ರಿಯಲ್​ಮಿ 10 ಪ್ರೊ ಪ್ಲಸ್ 5G ಫೋನ್ ಎರಡರಲ್ಲೂ ಹಲವು ವ್ಯತ್ಯಾಸಗಳಿವೆ. ಒನ್​ಪ್ಲಸ್ ಫೋನ್​ನಲ್ಲಿದೆ 6.72 ಇಂಚಿನ ಡಿಸ್​ಪ್ಲೇ ಹಾಗೂ ರಿಯಲ್​ಮಿ ಫೋನ್​ನಲ್ಲಿ 6.70 ಇಂಚಿನ ಡಿಸ್​ಪ್ಲೇ ಇದೆ. ಎರಡೂ ಫೋನ್​ಗಳಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೆನ್ಸಾರ್ ಇದೆ. ಒನ್​ಪ್ಲಸ್ 108+2+2 ಮೆಗಾಪಿಕ್ಸೆಲ್ ಕ್ಯಾಮೆರಾ ಇದ್ದರೆ, ರಿಯಲ್​ಮಿ 108+8+2 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಎರಡೂ ಫೋನ್​ಗಳಲ್ಲಿ 5000mAh ಬ್ಯಾಟರಿ ಸಾಮರ್ಥ್ಯವಿದ್ದು, ರಿಯಲ್​ಮಿ ಫೋನ್ 6GB RAM + 128GB ಮಾದರಿಗೆ ₹18,999 ದರವಿದೆ. ಒನ್​ಪ್ಲಸ್ ಫೋನ್ 8GB RAM + 128GB ಆವೃತ್ತಿಗೆ ₹19,999 ದರ ಹೊಂದಿದೆ.

Published on: Apr 10, 2023 12:18 PM
Follow Us
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Read More