ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ನಾರ್ಡ್ ಸರಣಿಯ ಫೋನ್ಗಳನ್ನು (Smartphone) ಬಿಡುಗಡೆ ಮಾಡಿ ಧೂಳೆಬ್ಬಿಸಿದ್ದ ಒನ್‌ಪ್ಲಸ್ ಕಂಪನಿ ಇದೀಗ ಮತ್ತೆ ಬಂದಿದೆ. ಬಹುನಿರೀಕ್ಷಿತ ಹೊಸ ಒನ್‌ಪ್ಲಸ್ ನಾರ್ಡ್ ಸಿಇ 3 (OnePlus Nord CE 3) ಸ್ಮಾರ್ಟ್‌ಫೋನ್ ಅನಾವರಣ ಮಾಡಲು ಸಜ್ಜಾಗಿ ನಿಂತಿದೆ. ಇದು ಕಳೆದ ವರ್ಷ ಬಿಡುಗಡೆ ಆಗಿ ಸಾಕಷ್ಟು ಬೇಡಿಕೆ ಸೃಷ್ಟಿಸಿದ್ದ ಒನ್‌ಪ್ಲಸ್ ನಾರ್ಡ್ CE 2 5G ಯ ಉತ್ತರಾಧಿಕಾರಿಯಾಗಿದೆ. ಈ ಹಿಂದಿನ ಸರಣಿಯಂತೆ ಇದುಕೂಡ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು ಆಕರ್ಷಕ ಕ್ಯಾಮೆರಾ (Camera), ಅತ್ಯುತ್ತಮ ಬ್ಯಾಟರಿ ಪವರ್, ಬಲಿಷ್ಠ ಪ್ರೊಸೆಸರ್ ಬಲವನ್ನು ಹೊಂದಿರಲಿದೆ. ಈ ಸ್ಮಾರ್ಟ್‌ಫೋನ್ ಫೀಚರ್ಸ್ ಇದೀಗ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.
ಒನ್‌ಪ್ಲಸ್ ನಾರ್ಡ್ CE 3 ಸ್ಮಾರ್ಟ್‌ಫೋನ್ ಬಗ್ಗೆ ಖಚಿತ ಮಾಹಿತಿ ಕಂಪನಿ ಇನ್ನೂ ಬಹಿರಂಗ ಪಡಿಸಿಲ್ಲ. ಆದರೆ, ಮೂಲಗಳ ಪ್ರಕಾರ ಇದು 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿರಲಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಅನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695SoC ಪ್ರೊಸೆಸರ್ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಅನ್ನು ಪಡೆಯಲಿದೆ ಎನ್ನಲಾಗಿದೆ.
Best Smartphones: 10,000 ರೂ. ಒಳಗಿನ ಹೊಚ್ಚ ಹೊಸ ಬೊಂಬಾಟ್ ಸ್ಮಾರ್ಟ್‌ಫೋನ್ ಬೇಕೇ?: ಇಲ್ಲಿದೆ ನೋಡಿ
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಇದರಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ನೀಡಲಾಗಿದೆ. ಮುಖ್ಯ ಕ್ಯಾಮೆರಾ ಬರೋಬ್ಬರಿ 108 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಿಂದ ಇರುವುದು ಬಹುತೇಕ ಖಚಿತ. ಉಳಿದಂತೆ ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿರಬಹುದು ಎಂಬ ನಿರೀಕ್ಷೆಯಿದೆ. ಇದರೊಂದಿಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ ಎಂಬ ಮಾತುಕೂಡ ಇದೆ.
ಒನ್‌ಪ್ಲಸ್ ನಾರ್ಡ್ CE 3 ಸ್ಮಾರ್ಟ್‌ಫೋನ್ ದೀರ್ಘ ಸಮಯ ಬಾಳಿಕೆ ಬರುವ 5,000mAh ಬ್ಯಾಟರಿಯನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ. ಇದು 67W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿರುವ ಜೊತೆಗೆ ಹಾಟ್‌ಸ್ಪಾಟ್, ಬ್ಲೂಟೂತ್, ವೈಫೈ, ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಎಂದಿನಂತೆ ಇರಲಿದೆ. ಈ ಸ್ಮಾರ್ಟ್‌ಫೋನ್‌ನ ಬೆಲೆ ಇನ್ನು ಬಹಿರಂಗವಾಗಿಲ್ಲ. ಆದರೆ ಇದು ಭಾರತದಲ್ಲಿ 30,000 ರೂ. ಆಸುಪಾಸಿನಲ್ಲಿ ಇರಬಹುದು. ಫೆಬ್ರವರಿ ಮೊದಲ ವಾರದಲ್ಲಿ ಈ ಫೋನ್ ಭಾರತದಲ್ಲಿ ರಿಲೀಸ್ ಆಗಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ