ಬೆಂಗಳೂರು (ಏ. 17): ಇಂಟರ್ನೆಟ್ ಮತ್ತು ಸ್ಮಾರ್ಟ್‌ಫೋನ್‌ಗಳ (Smartphones) ಬಳಕೆ ಹೆಚ್ಚಾದಾಗಿನಿಂದ, ಹಣದ ವಹಿವಾಟಿನಲ್ಲಿ ಇಂದು ಅತಿದೊಡ್ಡ ಬದಲಾವಣೆ ಆಗಿದೆ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಡಿಜಿಟಲ್ ಪಾವತಿಗಳು ವೇಗವಾಗಿ ಬೆಳೆಯುತ್ತಿವೆ. ಈಗ 1-2 ರೂ. ಗಳ ಪಾವತಿಯನ್ನು ಸಹ ಆನ್‌ಲೈನ್‌ನಲ್ಲಿ ಮಾಡಲಾಗುತ್ತದೆ. ಡಿಜಿಟಲ್ ಪಾವತಿ ಸೌಲಭ್ಯಗಳನ್ನು ಒದಗಿಸುವ ವೇದಿಕೆಗಳು ಕೂಡ ಹಣದ ವಹಿವಾಟುಗಳನ್ನು ಸುಲಭಗೊಳಿಸಲು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿವೆ. ಲಕ್ಷಾಂತರ ಬಳಕೆದಾರರಿಗೆ ಉಪಯೋಗ ಆಗುವಂತಹ ವೈಶಿಷ್ಟ್ಯವನ್ನು ಫೋನ್‌ಪೇ ಕೂಡ ಪರಿಚಯಿಸಿದೆ.
ತನ್ನ ಬಳಕೆದಾರರಿಗೆ ಅಗತ್ಯ ಸಮಯದಲ್ಲಿ ಸಹಕಾರಿ ಆಗಲು ಫೋನ್‌ಪೇಯಲ್ಲಿ ಯುಪಿಐ ಸರ್ಕಲ್ ವೈಶಿಷ್ಟ್ಯ ನೀಡಲಾಗಿದೆ. ಈ ಫೀಚರ್ ಸಹಾಯದಿಂದ, ಬಳಕೆದಾರರು ತಮ್ಮ ಕುಟುಂಬ ಸದಸ್ಯರು ಅಥವಾ ಸ್ನೇಹಿತರಿಗೆ UPI ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ. ಬ್ಯಾಂಕ್ ಖಾತೆ ಇಲ್ಲದವರಿಗೆ ಅಥವಾ ಆನ್‌ಲೈನ್ ಬ್ಯಾಂಕಿಂಗ್ ಬಳಸದವರಿಗೆ ಈ ವೈಶಿಷ್ಟ್ಯವು ವಿಶೇಷವಾಗಿ ಉಪಯುಕ್ತವಾಗಲಿದೆ. ಅಂತಹ ಬಳಕೆದಾರರು UPI ಬಳಸುವ ತಮ್ಮ ಸ್ನೇಹಿತರಿಗೆ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ.
ಈ ವೈಶಿಷ್ಟ್ಯವನ್ನು NPCI ಪ್ರಾರಂಭಿಸಿದೆ. NPCI ಈ ಹಿಂದೆ ಇದನ್ನು ಗೂಗಲ್ ಪೇ ಅಪ್ಲಿಕೇಶನ್‌ಗೆ ಮಾತ್ರ ಸೀಮಿತಗೊಳಿಸಿತ್ತು. ಆದರೆ ಈಗ ಅದನ್ನು ಫೋನ್ ಪೇ ಯಲ್ಲಿಯೂ ಲಭ್ಯವಾಗುವಂತೆ ಮಾಡಲಾಗಿದೆ. ಫೋನ್ ಪೇ ತನ್ನ ಅಧಿಕೃತ ಎಕ್ಸ್ ಖಾತೆಯಿಂದ ಪೋಸ್ಟ್ ಮಾಡುವ ಮೂಲಕ ಯುಪಿಐ ಸರ್ಕಲ್ ವೈಶಿಷ್ಟ್ಯದ ಆಗಮನದ ಬಗ್ಗೆ ಮಾಹಿತಿಯನ್ನು ನೀಡಿತು.
Tech Tips: ಇನ್ಸ್ಟಾಗ್ರಾಮ್ ರೀಲ್‌ಗಳನ್ನು ಆಡಿಯೋ ಜೊತೆಗೆಯೇ ವಾಟ್ಸ್ಆ್ಯಪ್ ಸ್ಟೇಟಸ್ಗೆ ಹಾಕೋದು ಹೇಗೆ?
ಬ್ಯಾಂಕ್ ಖಾತೆ ಅಥವಾ ನೆಟ್ ಬ್ಯಾಂಕಿಂಗ್ ಸೌಲಭ್ಯವಿಲ್ಲದ ಸದಸ್ಯರಿಗೆ ನೀವು ಆನ್‌ಲೈನ್ ಪಾವತಿ ಮಾಡಲು ಬಯಸಿದರೆ, ನೀವು ಮೊದಲು ಆ ಸದಸ್ಯರನ್ನು ಫೋನ್ ಪೇ ಖಾತೆಗೆ ಸೇರಿಸಬೇಕಾಗುತ್ತದೆ. ಇದರ ನಂತರವೇ ನೀವು ಅವರಿಗೆ UPI ಪಾವತಿ ಮಾಡಲು ಸಾಧ್ಯವಾಗುತ್ತದೆ. ಜಾಹೀರಾತು ಸದಸ್ಯರು ಎಲ್ಲಾದರು ಪಾವತಿ QR ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ, ಇದರ ನಂತರ ಪಾವತಿ ವಿನಂತಿಯು ಪ್ರಾಥಮಿಕ ಸದಸ್ಯರನ್ನು ತಲುಪುತ್ತದೆ, ಬಳಿಕ ನೀವು ಸುಲಭವಾಗಿ ಪಾವತಿ ಮಾಡಲು ಸಾಧ್ಯವಾಗುತ್ತದೆ.
ಇಲ್ಲಿ ಪ್ರಾಥಮಿಕ ಬಳಕೆದಾರನಿಂದ ಯುಪಿಐ ಸರ್ಕಲ್ ಸೃಷ್ಟಿಸಬಹುದು. ಈ ಸರ್ಕಲ್ನಲ್ಲಿ ಗರಿಷ್ಠ ಐದು ಮಂದಿಯನ್ನು ಜೋಡಿಸಬಹುದು. ಇವರು ಸೆಕೆಂಡರಿ ಯೂಸರ್ಗಳಾಗಿರುತ್ತಾರೆ. ಪ್ರಾಥಮಿಕ ಬಳಕೆದಾರನ ಯುಪಿಐ ಅಕೌಂಟ್ ಅನ್ನು ಐವರು ಮಂದಿ ಬಳಸಲು ಸಾಧ್ಯವಾಗುತ್ತದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ