ಬೆಂಗಳೂರು (ಮೇ. 27): ಇಂದು ಇಂಟರ್ನೆಟ್ (Internet) ಬಳಸದಿರುವ ಜನರೇ ಇಲ್ಲ. ಹೀಗಿರುವಾಗ ಪ್ರತಿದಿನ ನಿಮ್ಮಲ್ಲಿ ಸ್ವಲ್ಪ ಇಂಟರ್ನೆಟ್ ಡೇಟಾ ಉಳಿತಾಯವಾಗಿರುತ್ತದೆ. ಪ್ರತಿದಿನ ಡೇಟಾದ ಸಂಪೂರ್ಣ ಕೋಟ ಖಾಲಿ ಆಗುವುದಿಲ್ಲ. ಈಗ ನೀವು ಹೀಗೆ ಬಾಕಿ ಉಳಿದ ಡೇಟಾವನ್ನು ಮಾರಾಟ ಮಾಡಿ ಹಣ ಗಳಿಸಬಹುದು. ಸರ್ಕಾರದ PM WANI ಯೋಜನೆಯು ಸಣ್ಣ ಪ್ರಮಾಣದಲ್ಲಿ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸುವ ಜನರಿಗೆ ಒಂದು ದೊಡ್ಡ ಅವಕಾಶವನ್ನು ತಂದಿದೆ. ಈ ಯೋಜನೆಯಡಿಯಲ್ಲಿ, ಯಾವುದೇ ವ್ಯಕ್ತಿ ಅಥವಾ ಅಂಗಡಿಯವರು ಸಾರ್ವಜನಿಕ ವೈ-ಫೈ ಹಾಟ್‌ಸ್ಪಾಟ್ ಅನ್ನು ಸ್ಥಾಪಿಸುವ ಮೂಲಕ ಇತರರಿಗೆ ಇಂಟರ್ನೆಟ್ ಸೇವೆಯನ್ನು ಒದಗಿಸಬಹುದು. ಈ ಮೂಲಕ ನಿಮ್ಮಲ್ಲಿ ಬಾಕಿ ಉಳಿದಿರುವ ಇಂಟರ್ನೆಟ್ ಡೇಟಾ ಈಗ ನಿಮ್ಮ ಆದಾಯದ ಮೂಲಕವಾಗಬಹುದು.
ಸಾಮಾನ್ಯ ಜನರು ನಿಮ್ಮ ಡೇಟಾಗೆ ನಿಮಗೆ ಹಣ ನೀಡುತ್ತಾರೆ, ಇದರಿಂದ ನೀವು ಹಣ ಸಂಪಾದಿಸಬಹುದು. ಇದಕ್ಕಾಗಿ, ಯಾವುದೇ ಪರವಾನಗಿ ಅಥವಾ ಯಾವುದೇ ಭಾರೀ ಹೂಡಿಕೆಯ ಅಗತ್ಯವಿಲ್ಲ. ಸ್ವಂತ ಡಿಜಿಟಲ್ ಉದ್ಯಮಿಯಾಗಲು ನಿಮಗೆ ಬೇಕಾಗಿರುವುದು ಇಂಟರ್ನೆಟ್ ಸಂಪರ್ಕ ಮತ್ತು ವೈ-ಫೈ ರೂಟರ್. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ಯೋಜನೆಯ ಮೂಲಕ ಸಣ್ಣ ಅಂಗಡಿಯವರು ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸಿ ಹಣಗಳಿಸಲು ಪ್ರಾರಂಭಿಸಬಹುದು, ಮತ್ತೊಂದೆಡೆ, ಸರ್ಕಾರವು ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಸಾರ್ವಜನಿಕ ಹಾಟ್‌ಸ್ಪಾಟ್‌ಗಳನ್ನು ವ್ಯವಸ್ಥೆ ಮಾಡಲು ಸಾಧ್ಯವಾಗುತ್ತದೆ. ಇದನ್ನು ಒಂದು ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳೋಣ. ಅಂಗಡಿಗಳಲ್ಲಿ ಸ್ಥಾಪಿಸಲಾದ ವೈ-ಫೈನ ಡೇಟಾ ಸಾಮಾನ್ಯವಾಗಿ ಸಂಪೂರ್ಣವಾಗಿ ಬಳಕೆಯಾಗುವುದಿಲ್ಲ. ಹೀಗಾದಾಗ ಅಂಗಡಿಯವರ ವೈ-ಫೈ ಡೇಟಾ ವ್ಯರ್ಥವಾಗುತ್ತದೆ ಆದರೆ ಈ ಯೋಜನೆಯ ಸಹಾಯದಿಂದ ಇತರೆ ಜನರು ಅದನ್ನು ಖರೀದಿಸಬಹುದು ಮತ್ತು ಇಂಟರ್ನೆಟ್ ಬಳಸಬಹುದು. ಇದಕ್ಕಾಗಿ ಅಂಗಡಿಯವನು ಪ್ರತಿ ಬಳಕೆದಾರರಿಂದ 5-10 ರೂಪಾಯಿಗಳನ್ನು ತೆಗೆದುಕೊಳ್ಳುವ ಮೂಲಕ ಒಂದು ತಿಂಗಳಲ್ಲಿ ಸಾವಿರಾರು ರೂಪಾಯಿಗಳನ್ನು ಗಳಿಸಬಹುದು. ಇದರ ಇನ್ನೊಂದು ಪ್ರಯೋಜನವೆಂದರೆ ಇದಕ್ಕೆ ಯಾವುದೇ ಪರವಾನಗಿ ಅಗತ್ಯವಿಲ್ಲ.
Tech Tips: ಮನೆಗೆ ಸಿಸಿಟಿವಿ ಹಾಕುವ ಪ್ಲಾನ್ನಲ್ಲಿದ್ದೀರಾ?: ಹಾಗಾದ್ರೆ ಈ 5 ತಪ್ಪುಗಳನ್ನು ಮಾಡಬೇಡಿ
ಈ ಯೋಜನೆಯ ಮೂಲಕ ಇಂಟರ್ನೆಟ್ ಡೇಟಾವನ್ನು ಮಾರಾಟ ಮಾಡಿ ಹಣ ಗಳಿಸಲು ಬಯಸುವವರು, ಇದರಲ್ಲಿ ಇಂಟರ್ನೆಟ್ ಯೋಜನೆಯ ಬೆಲೆ 5 ರೂ. ನಿಂದ ಪ್ರಾರಂಭವಾಗಿ 99 ರೂ. ಗಳವರೆಗೆ ಇರುತ್ತದೆ ಎಂಬುದನ್ನು ತಿಳಿದಿರಬೇಕು. ಇವುಗಳಲ್ಲಿ ವಿಭಿನ್ನ ಡೇಟಾ ಮತ್ತು ಸಿಂಧುತ್ವ ಲಭ್ಯವಿದೆ. ಉದಾಹರಣೆಗೆ ರೂ. 6 ಗೆ 1 ದಿನದ ಮಾನ್ಯತೆಯೊಂದಿಗೆ 1GB ಡೇಟಾ, ರೂ. 9 ಗೆ 2 ದಿನಗಳ ಮಾನ್ಯತೆಯೊಂದಿಗೆ 2GB ಡೇಟಾ, ರೂ. 18 ಗೆ 3 ದಿನಗಳ ಮಾನ್ಯತೆಯೊಂದಿಗೆ 5GB ಡೇಟಾ, ರೂ. 25 ಗೆ 7 ದಿನಗಳ ಮಾನ್ಯತೆಯೊಂದಿಗೆ 20GB ಡೇಟಾ, ರೂ. 49 ಗೆ 14 ದಿನಗಳ ಮಾನ್ಯತೆಯೊಂದಿಗೆ 40GB ಡೇಟಾ ಮತ್ತು ರೂ. 99 ಗೆ ಒಂದು ತಿಂಗಳ ಮಾನ್ಯತೆಯೊಂದಿಗೆ 100GB ಡೇಟಾ ಆಯ್ಕೆ ಇದೆ. ಬಳಕೆದಾರರು ಈ ಯೋಜನೆಗಳನ್ನು ಖರೀದಿಸಬಹುದು. ಈ ಯೋಜನೆಗೆ ಸೇರುವ ಮೂಲಕ ಡೇಟಾವನ್ನು ಮಾರಾಟ ಮಾಡಲು ಬಯಸುವ ವ್ಯಕ್ತಿಯು ತನ್ನ ಅವಶ್ಯಕತೆಗೆ ಅನುಗುಣವಾಗಿ ಯೋಜನೆಯನ್ನು ರೂಪಿಸಿಕೊಂಡು ಅದನ್ನು ಬಳಕೆದಾರರಿಗೆ ನೀಡಬಹುದು.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ