Best Camera Smartphone: 15 ಸಾವಿರದೊಳಗಿನ ಟಾಪ್ ಕ್ವಾಲಿಟಿ ಕ್ಯಾಮೆರಾ ಸ್ಮಾರ್ಟ್ಫೋನ್ ಇಲ್ಲಿದೆ ನೋಡಿ
Best Camera Smartphone Under Rs. 15K: ಕೈಗೆಟುಕುವ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ 5G ಫೋನ್ ಹುಡುಕುತ್ತಿರುವವರಿಗೆ ರಿಯಲ್ ಮಿ P3X 5G ಉತ್ತಮ ಆಯ್ಕೆಯಾಗಿದೆ. ಛಾಯಾಗ್ರಹಣಕ್ಕಾಗಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಅಲ್ಲದೆ, 2 ಮೆಗಾಪಿಕ್ಸೆಲ್ AI ಕ್ಯಾಮೆರಾ ಹೆಚ್ಚುವರಿ ವೈಶಿಷ್ಟ್ಯವಾಗಿದೆ.

ಬೆಂಗಳೂರು (ಮೇ. 26): ಇತ್ತೀಚಿನ ದಿನಗಳಲ್ಲಿ ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್‌ಗಳಿವೆ (Smartphone), ಆದ್ದರಿಂದ ಫೋಟೋ ತೆಗೆಯುವುದು ಯಾವುದೇ ಸಮಸ್ಯೆಯಲ್ಲ. ಆದರೆ ಆ ಫೋಟೋಗಳು ಮತ್ತು ವಿಡಿಯೋಗಳನ್ನು ಉತ್ತಮ ಗುಣಮಟ್ಟ ಮತ್ತು ಕ್ಲಾರಿಟಿಯೊಂದಿಗೆ ಪಡೆಯಲು, ನಿಮಗೆ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿರುವ ಫೋನ್ ಅಗತ್ಯವಿದೆ. ಇಂತಹ ವೈಶಿಷ್ಟ್ಯಗಳು ಮತ್ತು 4K ರೆಕಾರ್ಡಿಂಗ್ ಹೊಂದಿರುವ ವಿವಿಧ ಪ್ರಮುಖ ಕಂಪನಿಗಳ ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಸದ್ಯ 15,000 ರೂ. ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳ ಮಾಹಿತಿ ಇಲ್ಲಿದೆ.
ಆಧುನಿಕ ವೈಶಿಷ್ಟ್ಯಗಳೊಂದಿಗೆ ಇತ್ತೀಚೆಗಷ್ಟೆ ಬಿಡುಗಡೆಯಾದ CMF ಫೋನ್ 1 ಈಗ ಕಡಿಮೆ ಬೆಲೆಗೆ ಲಭ್ಯವಿದೆ. ಇದರ ವೈಶಿಷ್ಟ್ಯಗಳಲ್ಲಿ ಸೂಪರ್ AMOLED LTPS ಪ್ಯಾನೆಲ್‌ನೊಂದಿಗೆ 6.67-ಇಂಚಿನ ಡಿಸ್ಪ್ಲೇ, ಆಕ್ಟಾ-ಕೋರ್ ಪ್ರೊಸೆಸರ್, ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್, 6GB, 8GB RAM ಮತ್ತು 128GB ಸಂಗ್ರಹಣೆ ಸೇರಿವೆ. 5000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಹಿಂಭಾಗದ ಪ್ಯಾನೆಲ್‌ನಲ್ಲಿ 50MP ಸೋನಿ ಸೆನ್ಸರ್, ಪೋರ್ಟ್ರೇಟ್ ಲೈನ್‌ಗಳು ಮತ್ತು 16MP ಸೆಲ್ಫಿ ಕ್ಯಾಮೆರಾ ಇದೆ. 15 ಸಾವಿರದ ಆಸುಮಾಸಿನಲ್ಲಿ ಈ ಫೋನ್ ಲಭ್ಯವಿದೆ.
ಕಾರ್ಯಕ್ಷಮತೆ ಮತ್ತು ವಿನ್ಯಾಸದ ವಿಷಯದಲ್ಲಿ ಐಕ್ಯೂ J10X 5G ಫೋನ್ ಅತ್ಯುತ್ತಮವಾಗಿದೆ. ಇದು HD+ LCD ಸ್ಕ್ರೀನ್ ಹೊಂದಿರುವ 6.72-ಇಂಚಿನ ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್, 128GB ಸ್ಟೋರೇಜ್, 6GB ಮತ್ತು 8GB RAM ಸೇರಿದಂತೆ ಇತರ ವೈಶಿಷ್ಟ್ಯಗಳನ್ನು ಹೊಂದಿದೆ. ಇದನ್ನು 4 ನ್ಯಾನೊಮೀಟರ್ ತಂತ್ರಜ್ಞಾನ ಬಳಸಿ ತಯಾರಿಸಲಾಗಿದೆ. ಛಾಯಾಗ್ರಹಣಕ್ಕಾಗಿ, ಹಿಂಭಾಗದಲ್ಲಿ 50 ಮತ್ತು 2 ಮೆಗಾಪಿಕ್ಸೆಲ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಿಡಿಯೋ ಕರೆ ಮತ್ತು ಸೆಲ್ಫಿಗಳಿಗಾಗಿ 8MP ಕ್ಯಾಮೆರಾ ಇದೆ. 6500mAh ಬ್ಯಾಟರಿಯೊಂದಿಗೆ ಬರುವ ಈ ಫೋನ್‌ನ ಬೆಲೆ ಕೇವಲ ರೂ. 13,499.
ಪೊಕೊದ M7 ಪ್ರೊ ಫೋನ್ ಮೀಡಿಯಾಟೆಕ್ ಡೈಮನ್ಸಿಟಿ 7025 Ultra CPU ಹೊಂದಿದೆ. 6.67-ಇಂಚಿನ OLED FHD ಪ್ಲಸ್ ಡಿಸ್ಪ್ಲೇಯೊಂದಿಗೆ ದೃಶ್ಯಗಳು ತುಂಬಾ ಸ್ಪಷ್ಟವಾಗಿ ಕಾಣುತ್ತದೆ. ಹೆಚ್ಚುವರಿ ವೈಶಿಷ್ಟ್ಯಗಳಲ್ಲಿ 45W ಅನ್ನು ಬೆಂಬಲಿಸುವ 5110mAh ಬ್ಯಾಟರಿ, 50MP ಸೋನಿ ಡ್ಯುಯಲ್ ರಿಯರ್ ಕ್ಯಾಮೆರಾ ಮತ್ತು 20MP ಸೆಲ್ಫಿ ಕ್ಯಾಮೆರಾ ಸೇರಿವೆ. ಇದರೊಂದಿಗೆ, 8GB ವರ್ಚುವಲ್ RAM ಅನ್ನು ಸ್ಥಾಪಿಸಲಾಗಿದೆ. ಈ ಫೋನಿನ ಆರಂಭಿಕ ಬೆಲೆ ರೂ. 14,999.
ರಿಯಲ್ ಮಿ 14X ಅತ್ಯಂತ ಕೈಗೆಟುಕುವ 5G ಫೋನ್‌ಗಳಲ್ಲಿ ಒಂದಾಗಿದೆ. ಇದು IP69 ರೇಟಿಂಗ್‌ನೊಂದಿಗೆ ಬಿಡುಗಡೆಯಾದ ಮೊದಲ ಫೋನ್ ಆಗಿದೆ. 6.67-ಇಂಚಿನ ಸ್ಕ್ರೀನ್, ಡೈಮೆನ್ಸಿಟಿ 6300 ಚಿಪ್‌ಸೆಟ್ ಮತ್ತು 6000mAh ಬ್ಯಾಟರಿಯನ್ನು ಹೊಂದಿದೆ. ಛಾಯಾಗ್ರಹಣಕ್ಕಾಗಿ 50MP ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಮುಂಭಾಗದಲ್ಲಿ 8 MP ಕ್ಯಾಮೆರಾ ಕೂಡ ಇದೆ. ಈ ಫೋನಿನ ಮೂಲ ಮಾದರಿಯನ್ನು 11,999 ರೂ. ಗೆ ಖರೀದಿಸಬಹುದು.
ಕೈಗೆಟುಕುವ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ 5G ಫೋನ್ ಹುಡುಕುತ್ತಿರುವವರಿಗೆ ರಿಯಲ್ ಮಿ P3X 5G ಉತ್ತಮ ಆಯ್ಕೆಯಾಗಿದೆ. ಇದು ಆಕ್ಟಾ-ಕೋರ್ ಪ್ರೊಸೆಸರ್, ಮೀಡಿಯಾ ಟೆಕ್ ಡೈಮೆನ್ಸಿಟಿ 6400 ಚಿಪ್‌ಸೆಟ್, 8 GB RAM ಮತ್ತು 128 GB ಸಂಗ್ರಹಣೆಯನ್ನು ಒಳಗೊಂಡಿದೆ. ಇದರ 6.72-ಇಂಚಿನ ಪರದೆಯ ತುಂಬಾ ಚೆನ್ನಾಗಿವೆ. ಛಾಯಾಗ್ರಹಣಕ್ಕಾಗಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಅಲ್ಲದೆ, 2 ಮೆಗಾಪಿಕ್ಸೆಲ್ AI ಕ್ಯಾಮೆರಾ ಹೆಚ್ಚುವರಿ ವೈಶಿಷ್ಟ್ಯವಾಗಿದೆ. 6000mAh ಬ್ಯಾಟರಿಯೊಂದಿಗೆ ಈ ಫೋನ್ ಬರುತ್ತದೆ. ಇದರ ಬೆಲೆ 13,999 ರೂ. ಆಗಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








