AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oppo A5x 5G: ಭಾರತದಲ್ಲಿ ಬಿಡುಗಡೆ ಆಯಿತು 6000mAh ಬ್ಯಾಟರಿ ಹೊಸ ಫೋನ್: ಬೆಲೆ ಕೇವಲ …

ಭಾರತದಲ್ಲಿ ಒಪ್ಪೋ A5x 5G ಬೆಲೆ 4GB + 128GB ಕಾನ್ಫಿಗರೇಶನ್‌ಗೆ ರೂ. 13,999 ರಿಂದ ಪ್ರಾರಂಭವಾಗುತ್ತದೆ. ಇದನ್ನು ಎರಡು ಬಣ್ಣಗಳಲ್ಲಿ ನೀಡಲಾಗುತ್ತದೆ - ಮಿಡ್‌ನೈಟ್ ಬ್ಲೂ ಮತ್ತು ಲೇಸರ್ ವೈಟ್. ಈ ಫೋನ್ ಮೇ 25 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ.

Oppo A5x 5G: ಭಾರತದಲ್ಲಿ ಬಿಡುಗಡೆ ಆಯಿತು 6000mAh ಬ್ಯಾಟರಿ ಹೊಸ ಫೋನ್: ಬೆಲೆ ಕೇವಲ ...
Oppo A5x 5g
Vinay Bhat
|

Updated on: May 24, 2025 | 6:43 PM

Share

ಬೆಂಗಳೂರು (ಮೇ. 24): ಪ್ರಸಿದ್ಧ ಒಪ್ಪೋ ಕಂಪನಿ ಭಾರತದಲ್ಲಿ ತನ್ನ ಹೊಸ ಒಪ್ಪೋ A5x 5G ಸ್ಮಾರ್ಟ್​ಫೋನ್ (Oppo A5x 5G Smartphone) ಅನ್ನು ಬಿಡುಗಡೆ ಮಾಡಿದೆ. ಈ ಹ್ಯಾಂಡ್‌ಸೆಟ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 4GB ವರೆಗಿನ RAM ಮತ್ತು 128GB ವರೆಗಿನ ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಬರುತ್ತದೆ. ಇದು IP65-ರೇಟೆಡ್ ಬಿಲ್ಡ್ ಅನ್ನು ಹೊಂದಿದೆ ಮತ್ತು 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರೋಬ್ಬರಿ 6,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಒಪ್ಪೋ A5x 5G ಬೆಲೆ

ಭಾರತದಲ್ಲಿ ಒಪ್ಪೋ A5x 5G ಬೆಲೆ 4GB + 128GB ಕಾನ್ಫಿಗರೇಶನ್‌ಗೆ ರೂ. 13,999 ರಿಂದ ಪ್ರಾರಂಭವಾಗುತ್ತದೆ. ಇದನ್ನು ಎರಡು ಬಣ್ಣಗಳಲ್ಲಿ ನೀಡಲಾಗುತ್ತದೆ – ಮಿಡ್‌ನೈಟ್ ಬ್ಲೂ ಮತ್ತು ಲೇಸರ್ ವೈಟ್. ಈ ಫೋನ್ ಮೇ 25 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಗ್ರಾಹಕರು SBI, IDFC ಫಸ್ಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಫೆಡರಲ್ ಬ್ಯಾಂಕ್ ಮತ್ತು DBS ಬ್ಯಾಂಕ್ ಕಾರ್ಡ್‌ಗಳ ಮೂಲಕ ಮಾಡಿದ ಖರೀದಿಗಳಿಗೆ ರೂ. 1,000 ತ್ವರಿತ ಕ್ಯಾಶ್‌ಬ್ಯಾಕ್ ಮತ್ತು ಮೂರು ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಕೊಡುಗೆಯ ಲಾಭವನ್ನು ಪಡೆಯಬಹುದು.

ಇದನ್ನೂ ಓದಿ
Image
ಐಫೋನ್ ಬಳಕೆದಾರರಿಗೆ ಹೊಸ ಎಚ್ಚರಿಕೆ: ಈ ಫೀಚರ್ ತಕ್ಷಣ ಆಫ್ ಮಾಡುವಂತೆ ಸೂಚನೆ
Image
ನಿಮ್ಮ ಫೋನ್ ಮನುಷ್ಯರಂತೆ ಮಾತನಾಡುತ್ತದೆ: ಈ ಹೊಸ ಆ್ಯಪ್ ಇನ್​ಸ್ಟಾಲ್ ಮಾಡಿ
Image
ಬಹುನಿರೀಕ್ಷಿತ ಆಂಡ್ರಾಯ್ಡ್ 16 ಬೀಟಾ ಆವೃತ್ತಿ ಬಿಡುಗಡೆ ಮಾಡಿದ ಗೂಗಲ್
Image
ಪಾಸ್‌ವರ್ಡ್ ಹಾಕಿದ್ದರೂ ಅದನ್ನು ನಮೋದಿಸದೆ ಫೋನ್ ಅನ್‌ಲಾಕ್ ಮಾಡುವುದು ಹೇಗೆ?

ಒಪ್ಪೋ A5x 5G ಫೀಚರ್ಸ್

ಒಪ್ಪೋ A5x 5G ಆಂಡ್ರಾಯ್ಡ್ 15 ಆಧಾರಿತ ColorOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.67-ಇಂಚಿನ (1,604 x 720 ಪಿಕ್ಸೆಲ್‌ಗಳು) HD+ ಸ್ಕ್ರೀನ್ ಅನ್ನು 120Hz ರಿಫ್ರೆಶ್ ದರ ಮತ್ತು 1,000nits ಗರಿಷ್ಠ ಬ್ರೈಟ್​ನೆಸ್ ಹೊಂದಿದೆ. ಹ್ಯಾಂಡ್‌ಸೆಟ್ ಸ್ಪ್ಲಾಶ್ ಟಚ್ ಮತ್ತು ಗ್ಲೋವ್ ಟಚ್ ತಂತ್ರಜ್ಞಾನಗಳೊಂದಿಗೆ ಬರುತ್ತದೆ, ಇದು ಒದ್ದೆಯಾದ ಬೆರಳುಗಳು, ಮಂಜು, ಎಣ್ಣೆ ಮೂಲಕ ಸ್ಪರ್ಶ ಸಂವಹನವನ್ನು ಬೆಂಬಲಿಸುತ್ತದೆ.

Apple iPhone: ಐಫೋನ್ ಬಳಕೆದಾರರಿಗೆ ಹೊಸ ಎಚ್ಚರಿಕೆ: ಈ ಫೀಚರ್ ತಕ್ಷಣ ಆಫ್ ಮಾಡುವಂತೆ ಸೂಚನೆ

ಈ ಫೋನ್ 6nm ಮೀಡಿಯಾಟೆಕ್ ಡೈಮನ್ಸಿಟಿ 6300 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, ಟ್ರಿನಿಟಿ ಎಂಜಿನ್‌ನೊಂದಿಗೆ ಸಜ್ಜುಗೊಳಿಸಲಾಗಿದೆ. ಇದು ಕಾರ್ಯಕ್ಷಮತೆಯನ್ನು ಅತ್ಯುತ್ತಮವಾಗಿಸುತ್ತದೆ. ಆಪ್ಟಿಕ್ಸ್‌ಗಾಗಿ, ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಘಟಕವನ್ನು ಹೊಂದಿದ್ದು, f/1.8 ಅಪರ್ಚರ್ ಮತ್ತು ಆಟೋ-ಫೋಕಸ್ ಬೆಂಬಲದೊಂದಿಗೆ 32-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಇದು ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 5-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಸಹ ಪಡೆಯುತ್ತದೆ. ಕ್ಯಾಮೆರಾ ವ್ಯವಸ್ಥೆಯು ಹಲವಾರು AI- ಬೆಂಬಲಿತ ವೈಶಿಷ್ಟ್ಯಗಳಿಂದ ಪೂರಕವಾಗಿದೆ. ಇದು ಚಿತ್ರದ ಗುಣಮಟ್ಟವನ್ನು ಸುಧಾರಿಸಲು, ಮತ್ತು ಅನಗತ್ಯ ವಸ್ತುಗಳನ್ನು ತೆಗೆದುಹಾಕಲು AI ಎರೇಸರ್ 2.0, ರಿಫ್ಲೆಕ್ಷನ್ ರಿಮೂವರ್, AI ಅನ್‌ಬ್ಲರ್ ಮತ್ತು AI ಕ್ಲಾರಿಟಿ ಎನ್‌ಹಾನ್ಸರ್‌ನೊಂದಿಗೆ ಬರುತ್ತದೆ. ಕಂಪನಿಯ ಪ್ರಕಾರ, AI ಸ್ಮಾರ್ಟ್ ಇಮೇಜ್ ಮ್ಯಾಟಿಂಗ್ 2.0 ಕ್ರಾಸ್-ಅಪ್ಲಿಕೇಶನ್ ಎಡಿಟಿಂಗ್ ಮತ್ತು ಡ್ರ್ಯಾಗ್-ಅಂಡ್-ಡ್ರಾಪ್ ಅನ್ನು ಬೆಂಬಲಿಸುತ್ತದೆ.

ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ಡ್ಯುಯಲ್ 4G VoLTE, Wi-Fi 5, ಬ್ಲೂಟೂತ್ 5.1, GPS ಮತ್ತು USB ಟೈಪ್-C ಸೇರಿವೆ. ಬರೋಬ್ಬರಿ 6,000mAh ಬ್ಯಾಟರಿಯನ್ನು ಹೊಂದಿದ್ದು, 45W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ. ಕಂಪನಿಯ ಪ್ರಕಾರ, ಇದು 1,700 ಚಾರ್ಜ್ ಸೈಕಲ್‌ಗಳ ನಂತರವೂ ತನ್ನ ಸಾಮರ್ಥ್ಯದ 80 ಪ್ರತಿಶತಕ್ಕಿಂತ ಹೆಚ್ಚಿನದನ್ನು ಉಳಿಸಿಕೊಳ್ಳುತ್ತದೆ ಮತ್ತು ಐದು ವರ್ಷಗಳವರೆಗೆ ಸ್ಥಿರ ಬ್ಯಾಟರಿ ಕಾರ್ಯಕ್ಷಮತೆಯನ್ನು ನೀಡುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!