200MP ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಇಳಿಕೆ: ಆಫರ್ ಮಿಸ್ ಮಾಡ್ಬೇಡಿ
Samsung Galaxy S24 Ultra 5G Price Drop: ಸ್ಯಾಮ್ಸಂಗ್ ಗ್ಯಾಲಕ್ಸಿ S24 ಆಲ್ಟ್ರಾ 5G ಕ್ಯಾಮೆರಾ ವಿಭಾಗದಲ್ಲಿ ಮಾತ್ರವಲ್ಲದೆ ಕಾರ್ಯಕ್ಷಮತೆಯ ದೃಷ್ಟಿಯಿಂದಲೂ ಅತ್ಯುತ್ತಮ ಸ್ಮಾರ್ಟ್‌ಫೋನ್ ಆಗಿದೆ. ಅದಕ್ಕಾಗಿಯೇ ಗೇಮಿಂಗ್ ಪ್ರಿಯರು ಸಹ ಇದನ್ನು ತುಂಬಾ ಇಷ್ಟಪಡುತ್ತಾರೆ. ಇದರಲ್ಲಿ ನೀವು ದೊಡ್ಡ ಡಿಸ್ಪ್ಲೇಯನ್ನು ಪಡೆಯುತ್ತೀರಿ, ಇದರಿಂದಾಗಿ OTT ಸ್ಟ್ರೀಮಿಂಗ್ ಸಮಯದಲ್ಲಿಯೂ ಸಹ ನೀವು ಉತ್ತಮ ಅನುಭವವನ್ನು ಪಡೆಯುತ್ತೀರಿ.

Samsung Galaxy S24 Ultra 5G Price Drop: ಮಾರುಕಟ್ಟೆಯಲ್ಲಿ ಇಂದು ಕ್ಯಾಮೆರಾ ಸ್ಮಾರ್ಟ್ಫೋನ್ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್ ಬಿಡುಗಡೆ ಆದರೆ ಅದು ಎಗ್ಗಿಲ್ಲದೆ ಸೇಲ್ ಆಗುತ್ತದೆ. ಸ್ಯಾಮ್‌ಸಂಗ್ ತನ್ನ ಅಲ್ಟ್ರಾ ವಿಭಾಗದಲ್ಲಿ ಹಲವು ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದೆ. ನೀವು ಛಾಯಾಗ್ರಹಣ ಮಾಡುತ್ತಿದ್ದರೆ ಅಥವಾ ಸಾಮಾಜಿಕ ಮಾಧ್ಯಮಕ್ಕೆ ಕಂಟೆಂಟ್ ಕ್ರಿಯೆಟ್ ಮಾಡುವವರಾಗಿದ್ದರೆ, ಸ್ಯಾಮ್ಸಂಗ್ ಗ್ಯಾಲಕ್ಸಿ S24 ಆಲ್ಟ್ರಾ (Samsung Galaxy S24 Ultra 5G) ಖರೀದಿಸುವುದು ಉತ್ತಮ ಆಯ್ಕೆಯಾಗಿದೆ. ಈ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಸಾಕಷ್ಟು ದುಬಾರಿಯಾಗಿದ್ದರೂ, ಈಗ ಫ್ಲಿಪ್‌ಕಾರ್ಟ್ ಇದರ ಬೆಲೆಯಲ್ಲಿ ದೊಡ್ಡ ಕಡಿತವನ್ನು ಮಾಡಲಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ S24 ಆಲ್ಟ್ರಾ 5G ಕ್ಯಾಮೆರಾ ವಿಭಾಗದಲ್ಲಿ ಮಾತ್ರವಲ್ಲದೆ ಕಾರ್ಯಕ್ಷಮತೆಯ ದೃಷ್ಟಿಯಿಂದಲೂ ಅತ್ಯುತ್ತಮ ಸ್ಮಾರ್ಟ್‌ಫೋನ್ ಆಗಿದೆ. ಅದಕ್ಕಾಗಿಯೇ ಗೇಮಿಂಗ್ ಪ್ರಿಯರು ಸಹ ಇದನ್ನು ತುಂಬಾ ಇಷ್ಟಪಡುತ್ತಾರೆ. ಇದರಲ್ಲಿ ನೀವು ದೊಡ್ಡ ಡಿಸ್ಪ್ಲೇಯನ್ನು ಪಡೆಯುತ್ತೀರಿ, ಇದರಿಂದಾಗಿ OTT ಸ್ಟ್ರೀಮಿಂಗ್ ಸಮಯದಲ್ಲಿಯೂ ಸಹ ನೀವು ಉತ್ತಮ ಅನುಭವವನ್ನು ಪಡೆಯುತ್ತೀರಿ.
ಸ್ಯಾಮ್ಸಂಗ್ ಗ್ಯಾಲಕ್ಸಿ S24 ಆಲ್ಟ್ರಾ ರಿಯಾಯಿತಿ ಆಫರ್:
ಈ ಫೋನಿನ ಮೂಲ ಬೆಲೆ 1,34,999 ರೂ. ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ಇದರ ಮೇಲೆ 31% ರಿಯಾಯಿತಿ ನೀಡುತ್ತಿದೆ. ಈ ಆಫರ್ ನಂತರ ಇದರ ಬೆಲೆ ಕೇವಲ 88,899 ರೂ. ಆಗುತ್ತದೆ. ನೀವು ಹೆಚ್ಚುವರಿ ಉಳಿಸಲು ಬಯಸಿದರೆ, ನೀವು 5% ಕ್ಯಾಶ್‌ಬ್ಯಾಕ್ ಪ್ರಯೋಜನವನ್ನು ಪಡೆಯಬಹುದು. ಆದಾಗ್ಯೂ, ಇದಕ್ಕಾಗಿ ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಯನ್ನು ಮಾಡಬೇಕಾಗುತ್ತದೆ. ನಿಮ್ಮ ಬಜೆಟ್ ಕಡಿಮೆಯಿದ್ದರೆ ನೀವು ಅದನ್ನು EMI ನಲ್ಲಿ ಖರೀದಿಸಬಹುದು. ನೀವು ಅದನ್ನು ಕೇವಲ 3,621 ರೂ.ಗಳ ಮಾಸಿಕ EMI ಕಟ್ಟಿದರೆ ಸಾಕು.
ಈ ಸ್ಮಾರ್ಟ್‌ಫೋನ್ ಮೇಲೆ ಫ್ಲಿಪ್‌ಕಾರ್ಟ್ ಕಾಲಕಾಲಕ್ಕೆ ಆಕರ್ಷಕ ವಿನಿಮಯ ಕೊಡುಗೆಗಳನ್ನು ಸಹ ನೀಡುತ್ತದೆ. ಈ ಫೋನ್‌ನಲ್ಲಿ ಎಕ್ಸ್‌ಚೇಂಜ್ ಆಫರ್‌ನ ಲಾಭವನ್ನು ಪಡೆದುಕೊಳ್ಳುವ ಮೂಲಕ, ನೀವು ಹೆಚ್ಚುವರಿಯಾಗಿ 60,000 ರೂ.ಗಳನ್ನು ಉಳಿಸಬಹುದು. ಆದಾಗ್ಯೂ, ನೀವು ಎಷ್ಟು ವಿನಿಮಯ ಮೌಲ್ಯವನ್ನು ಪಡೆಯುತ್ತೀರಿ ಎಂಬುದು ನಿಮ್ಮ ಹಳೆಯ ಫೋನಿನ ಕಾರ್ಯ ಮತ್ತು ಅದರ ಸ್ಥಿತಿಯನ್ನು ಅವಲಂಬಿಸಿರುತ್ತದೆ.
Cyber Crime: ನಿಮ್ಮ ಫೋನ್‌ನಲ್ಲಿ 1930 ಸಂಖ್ಯೆಯನ್ನು ಸೇವ್ ಮಾಡಿದ್ದೀರ? ಇದರಿಂದ ಏನು ಪ್ರಯೋಜನ?
ಸ್ಯಾಮ್ಸಂಗ್ ಗ್ಯಾಲಕ್ಸಿ S24 ಆಲ್ಟ್ರಾ ಫೀಚರ್ಸ್:
- ಈ ಫೋನ್ ಗಾಜಿನ ಹಿಂಭಾಗದ ಫಲಕದೊಂದಿಗೆ ಅಲ್ಯೂಮಿನಿಯಂ ಫ್ರೇಮ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ.
- ಇದು IP68 ರೇಟಿಂಗ್ ಹೊಂದಿದೆ, ಆದ್ದರಿಂದ ನೀವು ಇದನ್ನು 1.5 ಮೀಟರ್ ನೀರಿನ ಅಡಿಯಲ್ಲಿ ಕೂಡ ಬಳಸಬಹುದು.
- 6.8-ಇಂಚಿನ ದೊಡ್ಡ ಸೂಪರ್ ಡೈನಾಮಿಕ್ LTPO AMOLED ಪ್ಯಾನಲ್ ಡಿಸ್ಪ್ಲೇಯನ್ನು ಒದಗಿಸಲಾಗಿದೆ.
- ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ನೀವು ಅದನ್ನು ನವೀಕರಿಸಬಹುದು.
- ಕಾರ್ಯಕ್ಷಮತೆಗಾಗಿ, ಇದು ಸ್ನಾಪ್‌ಡ್ರಾಗನ್ 8 Gen 3 ಪ್ರೊಸೆಸರ್ ಅನ್ನು ಹೊಂದಿದೆ.
- ಛಾಯಾಗ್ರಹಣ ಪ್ರಿಯರಿಗಾಗಿ, ಇದು 200+10+50+12 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾವನ್ನು ಹೊಂದಿದೆ.
- ಸ್ಯಾಮ್ಸಂಗ್ ಗ್ಯಾಲಕ್ಸಿ S24 ಆಲ್ಟ್ರಾ 5G ಮುಂಭಾಗದಲ್ಲಿ 12-ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿದೆ.
- ಸ್ಮಾರ್ಟ್‌ಫೋನ್‌ಗೆ ಶಕ್ತಿ ತುಂಬಲು, ದೊಡ್ಡ 5000mAh ಬ್ಯಾಟರಿಯನ್ನು ಒದಗಿಸಲಾಗಿದ್ದು ಅದು 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ