AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

LG Wi-Fi Convertible Refrigerator Range: ನೀವೆಲ್ಲೇ ಇದ್ದರೂ ಫೋನ್ ಮೂಲಕ ಫ್ರೀಜರ್ ಅನ್ನು ಫ್ರಿಜ್ ಆಗಿ ಪರಿವರ್ತಿಸಿ

LG Smart Refrigerator: LGಯ ಹೊಸ Wi-Fi ಕನ್ವರ್ಟಿಬಲ್ ರೆಫ್ರಿಜರೇಟರ್ ತಂತ್ರಜ್ಞಾನದ ಅದ್ಭುತಗಳನ್ನು ಈ ಲೇಖನ ವಿವರಿಸುತ್ತದೆ. ಸ್ಮಾರ್ಟ್‌ಫೋನ್ ಮೂಲಕ ಎಲ್ಲಿಂದಲಾದರೂ ರೆಫ್ರಿಜರೇಟರ್ ಅನ್ನು ನಿಯಂತ್ರಿಸುವ ಸಾಮರ್ಥ್ಯ, ಫ್ರೀಜರ್ ಅನ್ನು ಫ್ರಿಜ್ ಆಗಿ ಪರಿವರ್ತಿಸುವ ಫೀಚರ್ ಮತ್ತು AI-ಚಾಲಿತ ಸ್ಮಾರ್ಟ್ ಲರ್ನರ್ ತಂತ್ರಜ್ಞಾನದಂತಹ ಅನುಕೂಲಗಳ ಬಗ್ಗೆ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

LG Wi-Fi Convertible Refrigerator Range: ನೀವೆಲ್ಲೇ ಇದ್ದರೂ ಫೋನ್ ಮೂಲಕ ಫ್ರೀಜರ್ ಅನ್ನು ಫ್ರಿಜ್ ಆಗಿ ಪರಿವರ್ತಿಸಿ
ಎಲ್​​ಜಿ ವೈಫೈ ಕನ್ವರ್ಟಿಬಲ್ ರೆಫ್ರಿಜರೇಟರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 30, 2025 | 2:53 PM

Share

LG Wi-Fi Convertible Refrigerator: ಇಂದು ತಂತ್ರಜ್ಞಾನ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಟೆಕ್ನಾಲಜಿ ಎಂದರೆ ಈಗ ಕೇವಲ ಸ್ಮಾರ್ಟ್​​ಫೋನ್​ಗೆ ಸೀಮಿತವಾಗಿಲ್ಲ. ನಮ್ಮ ದೈನಂದಿನ ಜೀವನವನ್ನು ಸ್ಮಾರ್ಟ್ ಆಗಿಸಿದೆ, ವೇಗವಾಗಿಸಿದೆ. ಸಕಾರಾತ್ಮಕ ಸಂಗತಿ ಎಂದರೆ, ನಾವು ಹೆಚ್ಚೆಚ್ಚು ಆಟೊಮೇಶನ್​​ನತ್ತ ಸಾಗುತ್ತಿದ್ದೇವೆ, ನಮ್ಮ ಜೀವನದ ಗುಣಮಟ್ಟ ಉತ್ತಮಗೊಳ್ಳುತ್ತಿದೆ.

ನಮ್ಮ ಸುತ್ತಲೂ ಸ್ಮಾರ್ಟ್ ಡಿವೈಸ್​​ಗಳು ಆವರಿಸಿಕೊಳ್ಳುತ್ತಿವೆ. ಇವುಗಳನ್ನು ಬಳಸುವುದು ಮತ್ತು ನಿಯಂತ್ರಿಸುವುದು ತಲೆ ನೋವಿನ ಕೆಲಸವಲ್ಲ, ಬಹಳ ಸುಲಭದ ಸಂಗತಿ. ರೆಫ್ರಿಜರೇಟರ್ ಅನ್ನೇ ಒಂದು ನಿದರ್ಶನವಾಗಿ ಪರಿಗಣಿಸಿ ನೋಡಿ. ಈಗಿನ ರೆಫ್ರಿಜರೇಟರ್​ಗಳು ಬಹಳ ಸ್ಮಾರ್ಟ್ ಆಗಿವೆ. ನಿಮ್ಮ ಫೋನ್ ಮೂಲಕವೇ ಎಲ್ಲಿಂದ ಬೇಕಾದರೂ ನೀವು ಅದನ್ನು ನಿಯಂತ್ರಿಸಬಹುದು. ದಶಕಗಳ ಹಿಂದಿನ ತಂತ್ರಜ್ಞಾನವನ್ನು ಮಾತ್ರ ಕಂಡವರಿಗೆ ಇದು ನಿಜಕ್ಕೂ ಊಹೆಗೂ ನಿಲುಕದ್ದೆನಿಸಬಹುದು.

ರೆಫ್ರಿಜರೇಟರ್ ತಂಪಾಗಿಸುವ ಒಂದು ಸಾಧನ. ಆಹಾರ ಮತ್ತು ಪಾನೀಯ ಪದಾರ್ಥಗಳನ್ನು ಸುರಕ್ಷಿತವಾಗಿ ಮತ್ತು ತಂಪಾಗಿ ಇಡುವುದು ಇದರ ಕೆಲಸ. ಆದರೆ ಇಂದಿನ ರೆಫ್ರಿಜರೇಟರ್‌ಗಳು ಬಹಳ ದೂರ ಕ್ರಮಿಸಿವೆ. LG Wi-Fi Convertible Refrigerator Range ಟೆಕ್ನಾಲಜಿ ಇದಕ್ಕೆ ಒಳ್ಳೆಯ ಉದಾಹರಣೆ.

ಇದನ್ನೂ ಓದಿ: ಕೀಪ್ಯಾಡ್ ಇಲ್ಲ, ಟಚ್ ಸ್ಕ್ರೀನ್ ಇಲ್ಲ: ಸ್ಮಾರ್ಟ್​​ಫೋನ್​ಗಿಂಥ ಪೂರ್ಣ ಭಿನ್ನವಾದ ಸಾಧನ ತಯಾರಿಸುತ್ತಿರುವ ಓಪನ್​​ಎಐ

LG ಯ ಈ ಹೊಸ ಫೀಚರ್ ಎಲ್ಲ ರೀತಿಯಲ್ಲೂ ವಿಭಿನ್ನ ಎನಿಸುತ್ತದೆ. ಇದು ನಿಮ್ಮನ್ನು ಸ್ಮಾರ್ಟ್ ಆಗಿಸುತ್ತದೆ, ಮಾತ್ರವಲ್ಲ, ನಿಮ್ಮ ಜೀವನದ ಕ್ಷಮತೆ ಹೆಚ್ಚಿಸುತ್ತದೆ. ರೆಫ್ರಿಜರೇಟರ್ ಅನ್ನು ನಿಯಂತ್ರಿಸಲು ನೀವು ಮನೆಯಲ್ಲೇ ಇರಬೇಕೆಂದಿಲ್ಲ. ಮಾರುಕಟ್ಟೆಯಲ್ಲೋ, ಸಿನಿಮಾ ಥಿಯೇಟರ್​​ನಲ್ಲೋ, ಕಚೇರಿಯಲ್ಲೋ ಮನೆಯಾಚೆ ನೀವೆಲ್ಲೇ ಇರಿ, ಅಲ್ಲಿಂದಲೇ ನಿಮ್ಮ ಸ್ಮಾರ್ಟ್​​ಫೋನ್ ಬಳಸಿ ಮನೆಯಲ್ಲಿನ ಫ್ರಿಡ್ಜ್ ಅನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ರೆಫ್ರಿಜರೇಟರ್‌ನ ಫ್ರೀಜರ್ ಅನ್ನು ನಿಮ್ಮ ಫೋನ್ ಬಳಸಿ ಫ್ರಿಜ್ ಆಗಿ ಪರಿವರ್ತಿಸಬಹುದು. ಇದಕ್ಕಾಗಿ, ನಿಮ್ಮ ಮನೆಯಲ್ಲಿ ವೈ-ಫೈ ಮತ್ತು ನಿಮ್ಮ ಫೋನ್‌ನಲ್ಲಿ LG thinQ APP ಇರಬೇಕು.

LG Wi-Fi Convertible Refrigerator

ಎಲ್​​ಜಿ ವೈಫೈ ಕನ್ವರ್ಟಿಬಲ್ ರೆಫ್ರಿಜರೇಟರ್

ಈಗ ರೆಫ್ರಿಜರೇಟರ್​​ಗಳಲ್ಲಿ ಎರಡು ಭಾಗಗಳಿರುತ್ತವೆ. ಮೇಲ್ಗಡೆಯದ್ದು ಫ್ರೀಜರ್​ ಆಗಿರುತ್ತದೆ. ದೊಡ್ಡದಾಗಿರುವ ಕೆಳಗಿನ ಭಾಗವು ಫ್ರಿಜ್ ಆಗಿ ಕಾರ್ಯನಿರ್ವಹಿಸುತ್ತದೆ. ಫ್ರೀಜರ್​​ನಲ್ಲಿ ಸೊನ್ನೆಗಿಂತ ಕಡಿಮೆ ಡಿಗ್ರಿ ಉಷ್ಣಾಂಶ ಇರುತ್ತದೆ. ಇದು ವಸ್ತುಗಳನ್ನು ಹೆಚ್ಚು ಕಾಲ ಕೆಡದಂತೆ ಇಡಲು ಬಳಕೆಯಾಗುತ್ತದೆ. ಇದು ಹೆಚ್ಚು ವಿದ್ಯುತ್ ವೆಚ್ಚಕ್ಕೆ ಕಾರಣವಾಗಬಹುದು. ಇದು ಬೇಕಾಗಿಲ್ಲ ಎನಿಸಿದಲ್ಲಿ ಅದರ ಉಷ್ಣತೆಯನ್ನು ಹೆಚ್ಚಿಸಬಹುದು. ರೆಫ್ರಿಜರೇಟರ್​​ನಲ್ಲಿರುವ ಉಷ್ಣಾಂಶಕ್ಕೆ ತಿರುಗಿಸಬಹುದು. ಆದರೆ, ಸ್ಮಾರ್ಟ್​ಫೋನ್​​ನಿಂದಲೇ ಈ ಟೆಂಪರೇಚರ್ ಬದಲಾಯಿಸುವ ಫೀಚರ್ ಇವತ್ತಿಗೆ ಹೊಸದು. LG ಬಿಟ್ಟರೆ ಯಾವ ಕಂಪನಿಯೂ ಕೂಡ ರೆಫ್ರಿಜರೇಟರ್​​​ನಲ್ಲಿ ಈ ಫೀಚರ್ ತಂದಿಲ್ಲ.

ಇದನ್ನೂ ಓದಿ: ಬಿಎಸ್ಎನ್ಎಲ್​ನ ಹೊಸ ಆಫರ್​ಗೆ ದಂಗಾದ ಜಿಯೋ-ಏರ್ಟೆಲ್: 450 ಲೈವ್ ಟಿವಿ ಉಚಿತ

LG Wi-Fi Convertible Refrigerator ಬಗ್ಗೆ ಈ ವಿಡಿಯೋ ನೋಡಿ:

ಈ ಅದ್ಭುತ ಫೀಚರ್ ಮಾತ್ರ ಅಲ್ಲ, ಈ ರೆಫ್ರಿಜರೇಟರ್​​ನ ಕೂಲಿಂಗ್ ಅನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು Smart Learner powered by AI ಎನ್ನುವ ಮತ್ತೊಂದು ಫೀಚರ್ ಇದೆ. ಹಾಗೆಯೇ, Hygiene Fresh+ air filter ಎನ್ನುವ ಮಗದೊಂದು ಫೀಚರ್ ಇದೆ. ಇದು ಶೇ. 99.99ರಷ್ಟು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ ಎಂದು ಥರ್ಡ್ ಪಾರ್ಟಿ ವರದಿಯೊಂದು ದೃಢೀಕರಿಸಿದೆ. ಅಷ್ಟೇ ಅಲ್ಲ, ಈ ಸ್ಮಾರ್ಟ್ ರೆಫ್ರಿಜರೇಟರ್​​​ನಲ್ಲಿ ಮತ್ತಷ್ಟು ಕೂಲಿಂಗ್ ಹೆಚ್ಚಿಸಲು DoorCooling+ ಇತ್ಯಾದಿ ಫೀಚರ್ಸ್ ಕೂಡ ಇವೆ.

ಇಂದು ತಂತ್ರಜ್ಞಾನವು ಪ್ರತಿಯೊಬ್ಬರ ಜೀವನವನ್ನು ಸ್ಮಾರ್ಟ್ ಮತ್ತು ಸುಲಭಗೊಳಿಸಿದೆ. LG Wi-Fi Convertible Refrigerator ನಿಮ್ಮ ಮನೆಯನ್ನು ಅಕ್ಷರಶಃ ಸ್ಮಾರ್ಟ್ ಮಾಡುತ್ತದೆ. ಇದರ ಹೊಸ ಆವಿಷ್ಕಾರವು ನಿಮ್ಮ ರೆಫ್ರಿಜರೇಟರ್ ಅನ್ನು ಎಲ್ಲಿಂದಲಾದರೂ ನಿರ್ವಹಿಸಲು ಮತ್ತು ಅದರ ಫ್ರೀಜರ್ ಅನ್ನು ಫ್ರಿಜ್ ಆಗಿ ಪರಿವರ್ತಿಸಲು ನಿಮಗೆ ನಿಯಂತ್ರಣವನ್ನು ನೀಡುತ್ತದೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:36 pm, Mon, 26 May 25

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು
ಕರಗಿದ ಉಕ್ಕನ್ನು ಹೊತ್ತೊಯ್ಯುತ್ತಿದ್ದ ಲ್ಯಾಡಲ್ ಸ್ಫೋಟ, 8 ಮಂದಿ ಸಾವು
‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ
‘ಕ್ಷೇತ್ರಪಾಲ’ ಸಿನಿಮಾದಲ್ಲಿ ದೈವದ ಕಥೆ? ವಿವರಿಸಿದ ತಂಡ
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಆವರಿಸಿದ ಕೊಳಚೆ ನೀರು
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಆವರಿಸಿದ ಕೊಳಚೆ ನೀರು
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್