ಚೀನಾ ಮೂಲದ ರಿಯಲ್ಮಿ ಕಂಪನಿ, ಭಾರತ ಮಾತ್ರವಲ್ಲದೆ ಜಾಗತಿಕವಾಗಿ ಹಲವು ರಾಷ್ಟ್ರಗಳಲ್ಲಿ ಸ್ಮಾರ್ಟ್ಫೋನ್ ಮತ್ತು ಗ್ಯಾಜೆಟ್ಗಳನ್ನು ಮಾರಾಟ ಮಾಡುತ್ತಿದೆ. ಬಜೆಟ್ ದರದ ಸ್ಮಾರ್ಟ್ಫೋನ್ನಿಂದ ಆರಂಭಿಸಿ, ಪ್ರೀಮಿಯಂ ಫೋನ್ವರೆಗೆ ಮಾರುಕಟ್ಟೆಯಲ್ಲಿ ವಿವಿಧ ಮಾದರಿಗಳನ್ನು ರಿಯಲ್ಮಿ ಪರಿಚಯಿಸಿದೆ. ಜನರ ಬೇಡಿಕೆ ಮತ್ತು ಅವಶ್ಯಕತೆಗೆ ಪೂರಕವಾಗಿ ವಿವಿಧ ಮಾದರಿಗಳ ಸ್ಮಾರ್ಟ್ಫೋನ್ ದೇಶದಲ್ಲಿ ಲಭ್ಯವಿದೆ. ರಿಯಲ್ಮಿ ಪ್ರೀಮಿಯಂ ಸರಣಿಯ ಜಿಟಿ ಸರಣಿಯಲ್ಲಿ ಮತ್ತೊಂದು ಆಕರ್ಷಕ ಮಾದರಿ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ರಿಯಲ್ಮಿ ಜಿಟಿ ನಿಯೊ 5 ಎಸ್ಇ ವೈಶಿಷ್ಟ್ಯಗಳ ವಿವರ ಇಲ್ಲಿದೆ. ರಿಯಲ್ಮಿ ಹೊಸ ಜಿಟಿ ನಿಯೊ 5 ಎಸ್ಇ ಸ್ಮಾರ್ಟ್ಫೋನ್ ಬಿಡುಗಡೆಯಾಗಿದ್ದು, ಸ್ನ್ಯಾಪ್ಡ್ರ್ಯಾಗನ್ 7+ Gen 2 ಪ್ರೊಸೆಸರ್ ಬೆಂಬಲ ಹೊಂದಿದೆ. 6.74 ಇಂಚಿನ ಡಿಸ್ಪ್ಲೇ ಹೊಂದಿರುವ ರಿಯಲ್ಮಿ GT Neo 5 SE, Android 13 ಆಧಾರಿತ ರಿಯಲ್ಮಿ UI 4.0 ಬಳಕೆ ಮಾಡುತ್ತದೆ. ಅಲ್ಲದೆ 5,500mAh ಬ್ಯಾಟರಿ ಮತ್ತು 100W ಫಾಸ್ಟ್ ಚಾರ್ಜಿಂಗ್ ಬೆಂಬಲ
64 MP+8 MP+ 2 MP ತ್ರಿವಳಿ ಕ್ಯಾಮೆರಾ ಹೊಂದಿರುವ ರಿಯಲ್ಮಿ GT Neo 5 SEಯಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವಿದೆ. 8GB + 256GB, 12GB + 256GB, 12GB + 512GB ಮತ್ತು 16GB + 1TB ಎಂಬ ನಾಲ್ಕು ಆವೃತ್ತಿಗಳಲ್ಲಿ ಲಭ್ಯವಾಗಲಿದ್ದು, ಚೀನಾದಲ್ಲಿ ₹24,000 ಆರಂಭಿಕ ದರ ಹೊಂದಿದೆ. ಭಾರತದಲ್ಲಿ ಶೀಘ್ರವೇ ಬಿಡುಗಡೆಯಾಗಲಿದೆ.