Realme Narzo N55: ಬೆಸ್ಟ್ ಫೋನ್, ಬಜೆಟ್ ದರಕ್ಕೆ ದೊರೆಯುತ್ತಿದೆ ರಿಯಲ್​ಮಿ ಫೋನ್

Updated on: Apr 15, 2023 | 10:00 AM

ರಿಯಲ್​ಮಿ ಹೊಸ ರಿಯಲ್​ಮಿ ನಾರ್ಜೊ ಎನ್​ 55 ಬಿಡುಗಡೆಯಾಗಿದ್ದು, 6.72 ಇಂಚಿನ ಐಪಿಎಸ್ ಎಲ್​ಸಿಡಿ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹಾಗೂ ಮೀಡಿಯಾಟೆಕ್‌ ಹಿಲಿಯೋ G88 SoC ಪ್ರೊಸೆಸರ್‌ ಬೆಂಬಲವಿದೆ.

ರಿಯಲ್​ಮಿ ಫೋನ್​ಗಳಿಗೆ ಭಾರತದಲ್ಲಿ ಬೇಡಿಕೆ ಅಧಿಕ. ಬಜೆಟ್​ ಮಾದರಿಯಿಂದ ತೊಡಗಿ, ಪ್ರೀಮಿಯಂ ಸರಣಿಯವರೆಗೆ ವಿವಿಧ ಮಾದರಿಗಳು ರಿಯಲ್​ಮಿ ಸ್ಮಾರ್ಟ್​ಫೋನ್ ಸರಣಿಯಲ್ಲಿ ದೊರೆಯುತ್ತವೆ. ರಿಯಲ್​ಮಿ ನರ್ಜೋ ಸರಣಿಗೆ ಮಧ್ಯಮ ಮತ್ತು ಆರಂಭಿಕ ಬಜೆಟ್ ದರದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಿಯಲ್​ಮಿ ಪ್ರೀಮಿಯಂ ಫೋನ್​ಗಳಿಗೆ ಕಡಿಮೆಯಿಲ್ಲದಂತೆ ನರ್ಜೋ ಸರಣಿ ಸ್ಪರ್ಧೆ ಒಡ್ಡುತ್ತದೆ. ರಿಯಲ್​ಮಿ ನರ್ಜೋ ಸರಣಿಯಲ್ಲಿ ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇರಿಸಿರುವ ಎನ್​55 ಸ್ಮಾರ್ಟ್​ಫೋನ್ ಕುರಿತ ಹೆಚ್ಚಿನ ವಿವರ ಇಲ್ಲಿದೆ. ಭಾರತದಲ್ಲಿ ರಿಯಲ್​ಮಿ ಹೊಸ ರಿಯಲ್​ಮಿ ನಾರ್ಜೊ ಎನ್​ 55 ಬಿಡುಗಡೆಯಾಗಿದ್ದು, 6.72 ಇಂಚಿನ ಐಪಿಎಸ್ ಎಲ್​ಸಿಡಿ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹಾಗೂ ಮೀಡಿಯಾಟೆಕ್‌ ಹಿಲಿಯೋ G88 SoC ಪ್ರೊಸೆಸರ್‌ ಬೆಂಬಲವಿದೆ. ಜತೆಗೆ 4GB RAM + 64GB ಆವೃತ್ತಿಗೆ ₹10,999 ದರವಿದ್ದು, 6GB RAM + 128GB ಆವೃತ್ತಿಗೆ ₹12,999 ದರ ಹೊಂದಿದೆ. ಅಲ್ಲದೆ, ಏಪ್ರಿಲ್ 18 ರಿಂದ ರಿಯಲ್​ಮಿ ನಾರ್ಜೊ ಎನ್​ 55 ಖರೀದಿಗೆ ಸಿಗಲಿದ್ದು, ಅಮೆಜಾನ್ ಮತ್ತು ರಿಯಲ್​ಮಿ ಅಧಿಕೃತ ವೆಬ್​ಸೈಟ್ ಮೂಲಕ ಲಭ್ಯವಿದೆ. 64 ಮೆಗಾಪಿಕ್ಸೆಲ್ ಸೆನ್ಸಾರ್‌ ಜತೆಗೆ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಕ್ಯಾಮೆರಾ ಹಾಗೂ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವಿದೆ. 5,000mAh ಸಾಮರ್ಥ್ಯದ ಬ್ಯಾಟರಿ ಹಾಗೂ 33W ಸೂಪರ್‌ವೂಕ್‌ ಫಾಸ್ಟ್ ಚಾರ್ಜಿಂಗ್ ಬೆಂಬಲವಿದೆ.

Follow Us
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Read More