Realme Narzo N55: ಭಾರತದ ಮಾರುಕಟ್ಟೆಗೆ ಬರುತ್ತಿದೆ ರಿಯಲ್​ಮಿ ಹೊಸ ಸ್ಮಾರ್ಟ್​ಫೋನ್

ಕಿರಣ್​ ಐಜಿ

Updated on: Apr 11, 2023 | 8:30 AM

ರಿಯಲ್​ಮಿ ಈಗಾಗಲೇ ವಿವಿಧ ಬ್ರ್ಯಾಂಡ್ ನೇಮ್ ಅಡಿಯಲ್ಲಿ ಆಕರ್ಷಕ ಮಾದರಿಗಳನ್ನು ಬಿಡುಗಡೆ ಮಾಡಿ ಜನಪ್ರಿಯತೆ ಗಳಿಸಿದೆ. ರಿಯಲ್​ಮಿ ಜನಪ್ರಿಯ ಸರಣಿ ನರ್ಜೋದಲ್ಲಿ ಮತ್ತೊಂದು ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿದೆ. ರಿಯಲ್​ಮಿ ನರ್ಜೊ N55 ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಚೀನಾ ಮೂಲದ ರಿಯಲ್​ಮಿ ಕಂಪನಿ, ಭಾರತದಲ್ಲಿ ಬಜೆಟ್ ಮತ್ತು ಪ್ರೀಮಿಯಂ ಸರಣಿಯಲ್ಲಿ ವಿವಿಧ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. ಜನರು ಬಯಸುವ ರೀತಿಯಲ್ಲೇ ಹೊಸ ಹೊಸ ಫೀಚರ್, ಅಪ್​ಡೇಟ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ರಿಯಲ್​ಮಿ ಈಗಾಗಲೇ ವಿವಿಧ ಬ್ರ್ಯಾಂಡ್ ನೇಮ್ ಅಡಿಯಲ್ಲಿ ಆಕರ್ಷಕ ಮಾದರಿಗಳನ್ನು ಬಿಡುಗಡೆ ಮಾಡಿ ಜನಪ್ರಿಯತೆ ಗಳಿಸಿದೆ. ರಿಯಲ್​ಮಿ ಜನಪ್ರಿಯ ಸರಣಿ ನರ್ಜೋದಲ್ಲಿ ಮತ್ತೊಂದು ಸ್ಮಾರ್ಟ್​ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿದೆ. ರಿಯಲ್​ಮಿ ನರ್ಜೊ N55 ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. ಏಪ್ರಿಲ್ 12ರಂದು ಬಿಡುಗಡೆಯಾಗುತ್ತಿದೆ ರಿಯಲ್​ಮಿ ನರ್ಜೊ N55 ಫೋನ್. ರಿಯಲ್​ಮಿ ಎನ್​ ನರ್ಜೊ ಸರಣಿಯಲ್ಲಿ ಬರುತ್ತಿರುವ ಹೊಸ ಫೋನ್, ಅಮೆಜಾನ್ ಮೂಲಕ ದೊರೆಯಲಿದೆ. ರಿಯಲ್​ಮಿ ನರ್ಜೊ N55 ಹಿಂಭಾಗದಲ್ಲಿ ಎರಡು ಕ್ಯಾಮೆರಾ ವಿನ್ಯಾಸ ಹೊಂದಿದೆ. ನರ್ಜೊ N55 ಫೋನ್ ಪ್ರೈಮ್ ಬ್ಲ್ಯಾಕ್, ಪ್ರೈಮ್ ಬ್ಲೂ ಬಣ್ಣದಲ್ಲಿ ದೊರೆಯಲಿದೆ. ರಿಯಲ್​ಮಿ ನರ್ಜೊ N55 ತನ್ನ ಸರಣಿಯಲ್ಲೇ ಅತಿ ತೆಳುವಾದ ವಿನ್ಯಾಸ ಹೊಂದಿದೆ. ನರ್ಜೊ N55 ಫೋನ್ 4GB + 64GB, 4GB + 128GB, 6GB + 64GB, ಮತ್ತು 6GB + 128GB ಆವೃತ್ತಿಯಲ್ಲಿ ಲಭ್ಯವಾಗಲಿದೆ.

Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.