ಬೆಂಗಳೂರು (ಮಾ. 18): ರಿಯಲ್ ಮಿ ಕಂಪನಿ ತನ್ನ ಹೊಸ ರಿಯಲ್ ಮಿ ಪಿ3 5G (Realme P3 5G) ಫೋನನ್ನು ಮಾರ್ಚ್ 19 ರಂದು ಅಧಿಕೃತವಾಗಿ ಬಿಡುಗಡೆ ಮಾಡಲಿದೆ. ಇದಕ್ಕೂ ಮುನ್ನ ರಿಯಲ್ ಮಿ ಮುಂಬರುವ ಪಿ ಸರಣಿಯ ಸ್ಮಾರ್ಟ್‌ಫೋನ್‌ನ ಭಾರತದ ಬೆಲೆ, ಮಾರಾಟದ ಕೊಡುಗೆಗಳು ಮತ್ತು ಪ್ರಮುಖ ಫೀಚರ್ಗಳನ್ನು ಘೋಷಿಸಿದೆ. ರಿಯಲ್‌ಮಿ ಪಿ3 5G ದೇಶದಲ್ಲಿ ರೂ. 20,000 ಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿದೆ. ಇದು ಸ್ನಾಪ್‌ಡ್ರಾಗನ್ 6 ಜೆನ್ 4 5G ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ, ಜೊತೆಗೆ 8GB RAM ಮತ್ತು ಗರಿಷ್ಠ 256GB ಆನ್‌ಬೋರ್ಡ್ ಸಂಗ್ರಹಣೆಯನ್ನು ಹೊಂದಿದೆ. ಅಲ್ಲದೆ ಇದರಲ್ಲಿ 6,000mAh ಬ್ಯಾಟರಿ ನೀಡಲಾಗಿದೆ.
ರಿಯಲ್ ಮಿ ಪಿ3 5ಜಿ ಫೋನಿನ 6 ಜಿಬಿ + 128 ಜಿಬಿ RAM ಮತ್ತು ಸ್ಟೋರೇಜ್ ಮಾದರಿಯ ಬೆಲೆ ರೂ. 16,999 ಆಗಿದೆ. 8 ಜಿಬಿ + 128 ಜಿಬಿ ಮತ್ತು 8 ಜಿಬಿ + 256 ಜಿಬಿ RAM ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ಗಳ ಬೆಲೆ ಕ್ರಮವಾಗಿ ರೂ. 17,999 ಮತ್ತು ರೂ. 19,999. ಬ್ಯಾಂಕ್ ಕೊಡುಗೆಗಳನ್ನು ಒಳಗೊಂಡಂತೆ ಇದು ರೂ. 14,999 ರ ಪರಿಣಾಮಕಾರಿ ಆರಂಭಿಕ ಬೆಲೆಗೆ ಖರೀದಿಗೆ ಲಭ್ಯವಿರುತ್ತದೆ. ಇದು ಕಾಮೆಟ್ ಗ್ರೇ, ನೆಬ್ಯುಲಾ ಪಿಂಕ್ ಮತ್ತು ಸ್ಪೇಸ್ ಸಿಲ್ವರ್ ಬಣ್ಣಗಳಲ್ಲಿ ಬರುತ್ತದೆ.
ರಿಯಲ್ ಮಿ ಪಿ3 5ಜಿ ಮಾರ್ಚ್ 19 ರಂದು ಬಿಡುಗಡೆಯಾಗಲಿದ್ದು, ಅದೇ ದಿನ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಈ ಸ್ಮಾರ್ಟ್‌ಫೋನ್ ಮಾರಾಟಕ್ಕೆ ಲಭ್ಯವಿರುತ್ತದೆ. ರಿಯಲ್ ಮಿ ಪಿ3 ಅಲ್ಟ್ರಾ 5ಜಿ ಜೊತೆಗೆ ಈ ಫೋನ್ ಘೋಷಣೆಯಾಗಲಿದೆ. ರಿಯಲ್ ಮಿ ಇಂಡಿಯಾ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಇತರ ಚಿಲ್ಲರೆ ಅಂಗಡಿಗಳ ಮೂಲಕ ಈ ಫೋನ್ ಖರೀದಿಸಬಹುದು.
IPL 2025: ಐಪಿಎಲ್ಗು ಮುನ್ನ ಅಂಬಾನಿಯಿಂದ ಬಂಪರ್ ಗಿಫ್ಟ್: ನಿಮ್ಮಲ್ಲಿ ಜಿಯೋ ಸಿಮ್ ಇದ್ರೆ ಇದನ್ನು ಗಮನಿಸಿ
ಆರಂಭಿಕ ಮಾರಾಟದಲ್ಲಿ ರಿಯಲ್ ಮಿ P3 5G ಖರೀದಿಸುವ ಗ್ರಾಹಕರು ಬಡ್ಸ್ ಏರ್ 5 ಅನ್ನು ರೂ. 1,499 ಕ್ಕೆ ಮತ್ತು ಬಡ್ಸ್ ವೈರ್‌ಲೆಸ್ 5 ANC ಅನ್ನು ರೂ. 1,599 ಕ್ಕೆ ಪಡೆಯಬಹುದು.
ರಿಯಲ್ ಮಿ ತನ್ನ ಭಾರತದ ವೆಬ್‌ಸೈಟ್‌ನಲ್ಲಿ P3 5G ಫೋನನ್ನು ಪಟ್ಟಿ ಮಾಡಿದ್ದು, ಅದರ ಪ್ರಮುಖ ವಿಶೇಷಣಗಳನ್ನು ಬಹಿರಂಗಪಡಿಸಿದೆ. ಇದು 120Hz ರಿಫ್ರೆಶ್ ದರ, 2,000nits ಗರಿಷ್ಠ ಹೊಳಪು, 1500nits ಟಚ್ ಸ್ಯಾಂಪ್ಲಿಂಗ್ ದರ ಮತ್ತು 92.65 ಸ್ಕ್ರೀನ್ ಟು ಬಾಡಿ ಅನುಪಾತದೊಂದಿಗೆ AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ 4nm ಸ್ನಾಪ್‌ಡ್ರಾಗನ್ 6 Gen 4 5G ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ, ಜೊತೆಗೆ 8GB RAM ಮತ್ತು ಗರಿಷ್ಠ 256GB ಆನ್‌ಬೋರ್ಡ್ ಸಂಗ್ರಹಣೆಯನ್ನು ಹೊಂದಿದೆ.
ಈ ಸ್ಮಾರ್ಟ್‌ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP69 ರೇಟಿಂಗ್ ಹೊಂದಿರುವ ಬಿಲ್ಡ್ ಅನ್ನು ಹೊಂದಿದೆ. ಇದು 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 6,000mAh ಬ್ಯಾಟರಿಯನ್ನು ಹೊಂದಿದೆ. ಫೋನ್ ಹೀಟ್ ಪ್ರೊಟೆಕ್ಷನ್ಗಾಗಿ 6050mm ಚದರ ಏರೋಸ್ಪೇಸ್-ಗ್ರೇಡ್ VC ವ್ಯವಸ್ಥೆಯನ್ನು ಹೊಂದಿದೆ. AI ಮೋಷನ್ ಕಂಟ್ರೋಲ್ ಮತ್ತು AI ಅಲ್ಟ್ರಾ ಟಚ್ ಕಂಟ್ರೋಲ್‌ನಂತಹ AI-ಆಧಾರಿತ GT ಬೂಸ್ಟ್ ಗೇಮಿಂಗ್ ವೈಶಿಷ್ಟ್ಯಗಳನ್ನು ನೀಡುತ್ತದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ