ಟೆಲಿಕಾಂ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ (Reliance Jio) ಈಗಾಗಲೇ ಹಲವು ಆಕರ್ಷಕ ಆಫರ್ಗಳಿಂದ ಗಮನ ಸೆಳೆದಿವೆ. ದಿನಕಳೆದಂತೆ ತನ್ನ ಗ್ರಾಹಕರ ಪಟ್ಟಿಯಲ್ಲಿ ಏರಿಸುತ್ತಿರುವ ಜಿಯೋ ಆಗಸದೆತ್ತರಕ್ಕೆ ಬೆಳೆಯುತ್ತಿದೆ. ಇದರ ನಡುವೆ ತನ್ನ ಬಳಕೆದಾರರಿಗೆ ಜಿಯೋ ಬಿಗ್ ಶಾಕಿಂಗ್ ನ್ಯೂಸ್ ನೀಡಿದೆ. ತನ್ನ ಎರಡು ಜನಪ್ರಿಯ ಪ್ರಿಪೇಯ್ಸ್ ಯೋಜನೆಗಳನ್ನು (Prepaid Plans) ಜಿಯೋ ದಿಢೀರ್ ಆಗಿ ಸ್ಥಗಿತಗೊಳಿಸಿದೆ. ಜಿಯೋ ತನ್ನ 39 ರೂ. ಮತ್ತು 69 ರೂ. ಗಳ ಎರಡು ಯೋಜನೆಗಳನ್ನು ನಿಲ್ಲಿಸಿ ಗ್ರಾಹಕರಿಗೆ ದೊಡ್ಡ ಅಚ್ಚರಿ ನೀಡಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಂದರ್ಭ ಬಳಕೆದಾರರಿಗೆ ನೆರವಾಗಲು ಜಿಯೋ ಈ ಪ್ಲಾನ್ ಅನ್ನು ಪರಿಚಯಿಸಿತ್ತು. ಇದರ ಜೊತೆಗೆ ಜಿಯೋಫೋನ್ ಗ್ರಾಹಕರಿಗೆ ರಿಲಯನ್ಸ್ ಜಿಯೋ ‘1 ಖರೀದಿಸಿ 1 ಉಚಿತ ಪಡೆಯಿರಿ’ ಆಫರ್ ನಲ್ಲಿ ಈ ಎರಡು ಪ್ಲಾನ್ಗಳು ಲಭ್ಯ ಇರುವುದಿಲ್ಲ.
ಜಿಯೋ 39 ರೂ. ರೀಚಾರ್ಜ್ ಪ್ಲಾನ್ನಲ್ಲಿ ಅನಿಯಮಿತ ವಾಯ್ಸ್ ಕಾಲ್, ದಿನಕ್ಕೆ 100 MB ಡೇಟಾ ಮತ್ತು 14 ದಿನಗಳ ವ್ಯಾಲಿಡಿಟಿ ನೀಡಿತ್ತಿತ್ತು. ಜಿಯೋ 69 ರೂ. ಪ್ರಿಪೇಯ್ಡ್ ಪ್ಲಾನ್ ಅನಿಯಮಿತ ಧ್ವನಿ ಕರೆ, ದಿನಕ್ಕೆ 0.5GB ಡೇಟಾ ಮತ್ತು 14 ದಿನಗಳ ವ್ಯಾಲಿಡಿಟಿಯೊಂದಿಗೆ ಇರುತ್ತಿತ್ತು.
ಇನ್ನೂ ಜಿಯೋ 75 ರೂ. ಪ್ರಿಪೇಯ್ಡ್ ಪ್ಲಾನ್ ಅನಿಯಮಿತ ಧ್ವನಿ ಕರೆ 3GB ಡೇಟಾವನ್ನು ನೀಡುತ್ತದೆ ಮತ್ತು 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಒಂದನ್ನು ಖರೀದಿಸಿ, ಒಂದು ಆಫರ್ ಪಡೆಯಿರಿ, ನಿಮಗೆ 6GB ಡೇಟಾ ಸಿಗುತ್ತದೆ.
ಅಂತೆಯೆ ಜಿಯೋದ 155 ರೂ. ಪ್ರಿಪೇಯ್ಡ್ ಪ್ಲಾನ್ ಅನಿಯಮಿತ ಧ್ವನಿ ಕರೆ, ದಿನಕ್ಕೆ 1GB ಡೇಟಾ ಮತ್ತು 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ನೀವು ಪ್ಲಾನ್ ಅನ್ನು ಖರೀದಿಸಿದರೆ, ಒಂದು ಖರೀದಿಯಿಂದಾಗಿ ನೀವು ದಿನಕ್ಕೆ 2GB ಡೇಟಾವನ್ನು ಪಡೆಯುತ್ತೀರಿ.
WhatsApp: ಗೌಪ್ಯತೆಗಾಗಿ ಮತ್ತೊಂದು ಹೊಸ ಫೀಚರ್ ಪರಿಚಯಿಸಲು ಮುಂದಾದ ವಾಟ್ಸ್ಆ್ಯಪ್
Vivo X70 Pro: ಚೀನಾ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿರುವ ಈ ಸ್ಮಾರ್ಟ್ಫೋನ್ ತಿಂಗಳಾಂತ್ಯಕ್ಕೆ ಭಾರತದಲ್ಲಿ ಬಿಡುಗಡೆ
(Reliance Jio has discontinued two affordable prepaid plans check details)